ಅಡಲ್ಟ್​ ಚಿತ್ರಗಳ ಬ್ಯೂಟಿ ಥೈನಾ 24 ವರ್ಷಕ್ಕೆ ಸಾವು; ತಿಂಗಳ ಹಿಂದೆ ಗಂಭೀರ ಆರೋಪ ಮಾಡಿದ್ದ ನಟಿ

author-image
Ganesh
Updated On
ಅಡಲ್ಟ್​ ಚಿತ್ರಗಳ ಬ್ಯೂಟಿ ಥೈನಾ 24 ವರ್ಷಕ್ಕೆ ಸಾವು; ತಿಂಗಳ ಹಿಂದೆ ಗಂಭೀರ ಆರೋಪ ಮಾಡಿದ್ದ ನಟಿ
Advertisment
  • ಪೇರುವಿನ ನಿವಾಸದಲ್ಲಿ ಮೃತದೇಹ ಪತ್ತೆಯಾಗಿದೆ
  • ಮೃತಪಟ್ಟಿರುವ ಬಗ್ಗೆ ಆಪ್ತ ಸ್ನೇಹಿತ ದೃಢಪಡಿಸಿದ್ದಾರೆ
  • ಸಾವಿನ ಬಗ್ಗೆ ಹಲವು ಅನುಮಾನಗಳು ಶುರುವಾಗಿದೆ

ಅಮೆರಿಕದ ನೀಲಿ ಚಿತ್ರಗಳ ತಾರೆ ಥೈನಾ ಫೀಲ್ಡ್ಸ್ (Thaina Fields) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಪೇರುವಿನಲ್ಲಿರುವ ಅವರ ನಿವಾಸದಲ್ಲಿ ಮೃತದೇಹ ಪತ್ತೆಯಾಗಿದೆ. ಅವರಿಗೆ 24 ವರ್ಷಗಳಾಗಿತ್ತು.

ಕಳೆದ ಒಂದು ತಿಂಗಳ ಹಿಂದಷ್ಟೇ ಅಶ್ಲೀಲ ಚಿತ್ರಗಳ ಇಂಡಸ್ಟ್ರಿಯಲ್ಲಿ ನಿಂದನೆಗೆ ಒಳಗಾಗಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಅಡಲ್ಟ್​ ಕಂಟೆಂಟ್ ಕ್ರಿಯೇಟರ್​ ಒಬ್ಬರು, ಥೈನಾ ಸಾವನ್ನಪ್ಪಿರುವ ಬಗ್ಗೆ ಖಚಿತಪಡಿಸಿದ್ದಾರೆ. ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ನೀಡಲು ಆಗುತ್ತಿಲ್ಲ. ಕೆಟ್ಟ ಸುದ್ದಿ ತಿಳಿದು ಬೇಸರವಾಗಿದೆ ಎಂದು ಥೈನಾ ಅವರ ಆಪ್ತ ಸ್ನೇಹಿತ ಅಲ್ಜೇಂದ್ರ ಸ್ವೀಟ್ ತಿಳಿಸಿದ್ದಾರೆ.

ಅಲ್ಜೇಂದ್ರ ಸ್ವೀಟ್ ಅವರು ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಬೇಸರದ ಸುದ್ದಿಯನ್ನು ಶೇರ್ ಮಾಡಿದ್ದಾರೆ. ಥೈನಾ ಫೀಲ್ಡ್ಸ್ ಅವರ ಪಾಸಿಟೀವ್ ವಿಚಾರಗಳನ್ನು ನೆನಪಿಟ್ಟುಕೊಳ್ಳುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಜೊತೆಗೆ ಆಕೆಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment