/newsfirstlive-kannada/media/post_attachments/wp-content/uploads/2024/06/Chandan-Shetty-2-1.jpg)
ರ‍್ಯಾಪರ್​ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲೆ ಅನಿತಾ ಪ್ರತಿಕ್ರಿಯೆ ನೀಡಿದ್ದಾರೆ. ಆರು ತಿಂಗಳ ಹಿಂದೆ ಡಿವೋರ್ಸ್ ನಿರ್ಧಾರ ಮಾಡಲಾಯ್ತು. ಇಬ್ಬರು ಒಪ್ಪಿಗೆಯಿಂದಲೇ ವಿಚ್ಛೇದನ ತೆಗೆದುಕೊಂಡಿದ್ದಾರೆ. ಕಾನೂನು ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.
ಮಾತು ಮುಂದುವರೆಸಿದ ವಕೀಲೆ ಅನಿತಾ, ಯಾವುದೇ ಕಂಡಿಷನ್, ಬೇಡಿಕೆ ಏನು ಇರಲಿಲ್ಲ. ಸಹಮತದಿಂದ ದೂರ ಆಗಲು ನಿರ್ಧಾರಿಸಿದ್ದಾರೆ. ಮಗು ವಿಚಾರ, ಮೂರನೇ ವ್ಯಕ್ತಿಗಳ ವಿಚಾರ ಎಲ್ಲವೂ ಸುಳ್ಳು. ಭವಿಷ್ಯದ ಕಾರಣಕ್ಕೆ ಒಟ್ಟಾಗಿ ಹೋಗಲು ಸಾಧ್ಯವಿಲ್ಲ ಅಂತ ನಿರ್ಧರಿಸಿದ್ದರು. ಈ ಕಾರಣಕ್ಕೆ ಡಿವೋರ್ಸ್​ ನೀಡಿದ್ದಾರೆ ಎಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/06/Chandan-Shetty-Nivedita-Gowda-2.jpg)
ಇದನ್ನೂ ಓದಿ: ಮನೆ ಖಾಲಿ, ಮನ ಖಾಲಿ.. ಫೋನ್ ಸ್ವಿಚ್ ಆಫ್.. ಎಲ್ಲಿ ಹೋದ್ರು ನಿವೇದಿತಾ ಫ್ಯಾಮಿಲಿ?
ಮನೆಯವರು ರಾಜಿ ಪಂಚಾಯ್ತಿ ಎಲ್ಲವೂ ಮಾಡಿದ್ದರು. ಆದರೆ ಅವರಿಗೂ ಹೊಂದಾಣಿಕೆ ಬಗ್ಗೆ ತೃಪ್ತಿ ಆಗಿಲ್ಲ. ಬೇರೆ ಬೇರೆ ಇದ್ದರೆ ಇಬ್ಬರಿಗೂ ಒಳ್ಳೆಯದು ಎಂದು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: VIDEO: ‘ಚಂದನ್, ನಿವೇದಿತಾ ಬಗ್ಗೆ ಹರಿದಾಡ್ತಿರೋ ಸುದ್ದಿಯೆಲ್ಲಾ ಸುಳ್ಳು’- ಹೊಸ ಟ್ವಿಸ್ಟ್ ಕೊಟ್ಟ ಆಪ್ತರು
ಚಂದನ್ ಶೆಟ್ಟಿ ಮೊದಲಿಂದಲೂ ನನಗೆ ಪರಿಚಯ. ಮದುವೆ ಆದ್ಮೇಲೆ ನಿವೇದಿತಾ ಪರಿಚಯ. ಇಬ್ಬರು ತುಂಬಾ ಚೆನ್ನಾಗಿಯೇ ಇದ್ದರು. ಆದರೆ, ದಿನಕಳೆದಂತೆ ಮನಸ್ತಾಪ ಬಂದಿರಬಹುದು. ಅದು ಅವರ ವೃತ್ತಿ ಜೀವನಕ್ಕೆ ಸವಾಲಾಗಿರಬಹುದು. ಭವಿಷ್ಯದಲ್ಲಿ ಅವರಿಬ್ಬರು ತುಂಬಾ ಚೆನ್ನಾಗಿರುತ್ತಾರೆ. ಇಬ್ಬರಿಗೂ ಒಳ್ಳೆಯ ಬುದ್ದಿ ಇದೆ. ಇಬ್ಬರು ಬೆಳೆದಿದ್ದಾರೆ ಎಂದು ಚಂದನ್ ಹಾಗೂ ನಿವೇದಿತಾ ಪರ ವಕೀಲೆ ಅನಿತಾ ಪ್ರತಿಕ್ರಿಯೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us