newsfirstkannada.com

ಚಂದನ್, ನಿವೇದಿತಾಗೆ ಒಂದೇ ದಿನದಲ್ಲಿ ಡಿವೋರ್ಸ್ ಸಿಗಲು ಕಾರಣ ಇಲ್ಲಿದೆ; ಏನದು?

Share :

Published June 8, 2024 at 4:30pm

  ಗಾಯಕ​ ಚಂದನ್​ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನ ಕೇಸ್​​

  ಮಾಜಿ ದಂಪತಿಗಳಾದ ನಟ ಚಂದನ್ ಶೆಟ್ಟಿ, ನಿವೇದಿತಾ ಗೌಡ

  ಈ ಇಬ್ಬರ ನಿರ್ಧಾರದ ಮೇಲೆ ಕೋರ್ಟ್​ ಡಿವೋರ್ಸ್ ಕೊಟ್ಟಿದೆ

ಕನ್ನಡದ ನಟ, ಗಾಯಕ​​ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್‌ಗೆ ಮುಂದಾಗಿದ್ದಾರೆ. ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಈ ಕ್ಯೂಟ್ ಕಪಲ್‌ ದಿಢೀರ್ ಅಂತ ಬ್ರೇಕ್ ಹಾಕಿದ್ದಾರೆ. ಈ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನ ಮಂಜೂರು ಮಾಡಿ ಬೆಂಗಳೂರು ಕೌಟುಂಬಿಕ ನ್ಯಾಯಾಲಯ ಆದೇಶ ಹೊರಡಿಸಿದೆ. ಇದೀಗ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮಾಜಿ ದಂಪತಿಗಳಾಗಿದ್ದಾರೆ.

ಇದನ್ನೂ  ಓದಿ: 6 ತಿಂಗಳ ಹಿಂದೆಯೇ ಡಿವೋರ್ಸ್​ಗೆ ನಿರ್ಧಾರ, ರಾಜಿ ಪಂಚಾಯ್ತಿ ಮಾಡಿದ್ರು; ವಕೀಲೆ ಅನಿತಾ ಏನಂದ್ರು ಗೊತ್ತಾ?

ಇನ್ನು, ಒಂದೇ ದಿನದಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡಗೆ ಡಿವೋರ್ಸ್ ಸಿಕ್ಕಿದ್ದು ಹೇಗೆ ಎಂಬುವುದರ ಬಗ್ಗೆ ವಕೀಲೆ ಅನಿತಾ ನ್ಯೂಸ್​ ಫಸ್ಟ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಇಬ್ಬರು ಆರು ತಿಂಗಳ ಹಿಂದೆ ಡಿವೋರ್ಸ್ ನಿರ್ಧಾರ ಮಾಡಲಾಯ್ತು. ಇಬ್ಬರು ಒಪ್ಪಿಗೆಯಿಂದಲೇ ವಿಚ್ಛೇದನ ತೆಗೆದುಕೊಂಡಿದ್ದಾರೆ. ಈ ಇಬ್ಬರ ಕಾನೂನು ಪ್ರಕ್ರಿಯೆ ಪೂರ್ಣಗೊಂಡಿದೆ. ಯಾವುದೇ ಕಂಡಿಷನ್, ಬೇಡಿಕೆ ಏನು ಇರಲಿಲ್ಲ. ಭವಿಷ್ಯದ ಕಾರಣಕ್ಕೆ ಒಟ್ಟಾಗಿ ಹೋಗಲು ಸಾಧ್ಯವಿಲ್ಲ ಅಂತ ನಿರ್ಧರಿಸಿದ್ದಾರೆ. ಹೀಗೆ ಮಾತನ್ನು ಮುಂದುವರೆಸಿದ ಅವರು, ಈ ಪ್ರಕ್ರಿಯೆಯನ್ನು ಕಾನೂನುಬದ್ಧವಾಗಿಯೇ ನಡೆದಿದೆ.

ಜೊತೆಗೆ ಇರಲು ಸಾಧ್ಯವೇ ಇಲ್ಲ ಅಂದ್ರೆ ವಿಚ್ಛೇದನ ಪಡೆಯಬಹುದು ಅಂತ ಕಾನೂನಿನಲ್ಲಿದೆ. ಅಮರ್ ದೀಪ್ ವರ್ಸಸ್ ಅರವಿಂದ್ ಕೌರ್ ಅಂತ ಒಂದು ಜಡ್ಜ್ ಮೆಂಟ್ ಇದೆ. ಅದೇ ಪ್ರಕಾರ ನಾವು ಈ ಕೇಸ್​ ಹಾಕಿಕೊಂಡಿದ್ದೇವೆ. ಈ ಪ್ರಕ್ರಿಯೆ ಬೇಗ ಖಾತರಿ ಆಯ್ತು. ಫೈಲ್​ ಮಾಡಿದ್ದು ಜೂನ್​ 6ಕ್ಕೆ. ಜೂನ್ 7ರಂದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕೋರ್ಟ್​ ಮುಂದೆ ಹಾಜರು ಪಡೆಸಿದ್ದೆವು. ಈ ಹಿಂದೆಯೇ ಇಬ್ಬರು ನಿರ್ಧಾರ ಮಾಡಿಕೊಂಡಿದ್ದರು. ಹೀಗಾಗಿ ಈ ಪ್ರೋಸಿಸರ್ ಬೇಗ ಆಯ್ತು ಅಂತ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದನ್, ನಿವೇದಿತಾಗೆ ಒಂದೇ ದಿನದಲ್ಲಿ ಡಿವೋರ್ಸ್ ಸಿಗಲು ಕಾರಣ ಇಲ್ಲಿದೆ; ಏನದು?

https://newsfirstlive.com/wp-content/uploads/2024/06/niveditha6.jpg

Load More