ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ- ರಿಕ್ಕಿ ರೈ ಆರೋಗ್ಯ ಹೇಗಿದೆ..?

author-image
Veena Gangani
Updated On
ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ- ರಿಕ್ಕಿ ರೈ ಆರೋಗ್ಯ ಹೇಗಿದೆ..?
Advertisment
  • ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ವಕೀಲ ಏನಂದ್ರು?
  • ಪೊಲೀಸ್ ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದ ವಕೀಲ
  • ಕಳೆದ ಎರಡು ದಿನಗಳ ಹಿಂದಷ್ಟೇ ವಿದೇಶದಿಂದ ಬಂದಿದ್ದ ರಿಕ್ಕಿ

ರಾಮನಗರ: ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಕಿ ರೈ ವಕೀಲ ನಾರಾಯಣಸ್ವಾಮಿ ಮಾತಾಡಿದ್ದಾರೆ. ಸದ್ಯ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಭಯಾನಕ ಗುಂಡಿನ ದಾಳಿ

publive-image

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಾರಾಯಣಸ್ವಾಮಿ.. ನಾನು ಆಸ್ಪತ್ರೆಗೆ ಹೋಗಿ ಆರೋಗ್ಯ ವಿಚಾರಿಸಿದ್ದೇನೆ. ಮೂಗಿನ ಭಾಗಕ್ಕೆ ಇಂಜುರಿ ಆಗಿದೆ. 10:30ರ ವೇಳೆಗೆ ಆಪರೇಷನ್ ಆಗಲಿದೆ. ಸದ್ಯ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದಿದ್ದಾರೆ.

‘ಬೆದರಿಕೆ ಇತ್ತು..’

ಪುತ್ತಪ್ಪ ರೈ ಪುತ್ರ ಅನ್ನುವ ಕಾರಣಕ್ಕೆ ಸಾಮಾನ್ಯವಾಗಿ ರಿಕ್ಕಿರೈಗೂ ಬೆದರಿಕೆ ಇತ್ತು. ಅವರು ಸೆಕ್ಯೂರಿಟಿ ಇಟ್ಕೊಂಡು ಓಡಾಡ್ತಿದ್ರು. ರಿಕ್ಕಿ ರೈ ಮುತ್ತಪ್ಪ ರೈ ಆಸ್ತಿ, ವ್ಯವಹಾರ ನೋಡಿಕೊಂಡು ಹೋಗ್ತಿದ್ರು. ಸದ್ಯ ಕೆಲವೊಬ್ಬರ ಮೇಲೆ ಅನುಮಾನ ಇದೆ ಅಂತ ಕಂಪ್ಲೇಂಟ್ ಆಗಿದೆ. ಡ್ರೈವರ್ ರಾಜು ಅನುಮಾನ ಇರುವ ವ್ಯಕ್ತಿಗಳ ಮೇಲೆ ದೂರು ಕೊಟ್ಟಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ವಿದೇಶದಿಂದ ಬಂದಿದ್ರು. ಬೆಂಗಳೂರಿನಿಂದ ಅವರು ನಿನ್ನೆ ಬಿಡದಿಗೆ ಬಂದಿದ್ರು. ಇಲ್ಲಿದ್ದಾಗ ಹೆಚ್ಚಾಗಿ ಬಿಡದಿ ಮನೆಗೆ ಬರ್ತಿದ್ರು.

publive-image

ಮುತ್ತಪ್ಪ ರೈ ಎರಡನೇ ಹೆಂಡತಿಗೆ ಸಂಬಂಧಪಟ್ಟಂತೆ ಪ್ರಾಪರ್ಟಿ ಇಶ್ಯೂ ಇತ್ತು. ಹಲವು ಕೇಸ್​ಗಳು ಇನ್ನೂ ವಿಚಾರಣಾ ಹಂತದಲ್ಲಿದೆ. ತುಂಬಾ ದಿನಗಳಿಂದ ವಾಚ್ ಮಾಡಿ ಪ್ಲಾನ್ ಮಾಡಿಕೊಂಡು ದಾಳಿ ಮಾಡಿದ್ದಾರೆ. ಆಸ್ತಿ ವಿಚಾರಕ್ಕೆ ಸಾಕಷ್ಟು ವಾದ ಇತ್ತು. ಅವರಿಗೆ ಸಾಕಷ್ಟು ವಿರೋಧಿಗಳು ಇದ್ದರು. ಪೊಲೀಸ್ ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment