/newsfirstlive-kannada/media/post_attachments/wp-content/uploads/2025/02/aero-india-show-2.jpg)
ಬೆಂಗಳೂರಿನ ನೀಲಿ ಆಕಾಶದಲ್ಲಿ ಇಂದಿನಿಂದ ಐದು ದಿನಗಳ ಕಾಲ ಲೋಹದ ಹಕ್ಕಿಗಳ ಕಲರವ ಮೇಳೈಸಲಿದೆ. ಅಂದರೆ ‘ಏರೋ ಇಂಡಿಯಾ-2025’ಗೆ ರಕ್ಷಣಾ ವಿದ್ಯುಕ್ತ ಚಾಲನೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ, BMRCL, ಮೀನುಗಾರಿಕಾ ಇಲಾಖೆ ಮುನ್ನೆಚ್ಚರಿಕಾ ಕ್ರಮಕೈಗೊಂಡಿದೆ.
ಮೀನುಗಾರಿಕೆ ನಿಷೇಧ, ಮೆಟ್ರೋ ಕಾಮಗಾರಿ ತಾತ್ಕಲಿಕ ಬಂದ್ ಮಾಡಲಾಗಿದೆ. ರಕ್ಷಣಾ ಇಲಾಖೆ, ಬಿಬಿಎಂಪಿ, ಬಿಎಂಟಿಸಿ, ಬೆಂಗಳೂರು ಸಂಚಾರ ಪೊಲೀಸ್ ಹಾಗೂ ಬೆಂಗಳೂರು ಜಿಲ್ಲಾಡಳಿತ ಒಳಗೊಂಡಂತೆ ಸ್ಥಳೀಯ ಸಂಸ್ಥೆಗಳಿಂದ ಏರ್ ಶೋಗೆ ಸಕಲ ವ್ಯವಸ್ಥೆ ಏರ್ಪಡಿಸಲಾಗಿದೆ.
ಇದನ್ನೂ ಓದಿ:Aero India: ಬೆಂಗಳೂರು ಏರೋ ಇಂಡಿಯಾ ಶೋಗೆ ಸಂಬಂಧಿಸಿದ 10 ವಿಚಾರಗಳು..! ನಿಮಗಿದು ಗೊತ್ತಿರಲಿ
ಮೀನುಗಾರಿಕೆಗೆ ನಿಷೇಧ
ಬೆಂಗಳೂರು ಉತ್ತರ, ಯಲಹಂಕ ಸುತ್ತಮುತ್ತಲಿನ 21 ಕರೆಗಳಲ್ಲಿ ಮೀನುಗಾರಿಕೆ ನಿಷೇಧ ಹೇರಲಾಗಿದೆ. ಫೆಬ್ರವರಿ 17ರವರೆಗೆ ಮೀನುಗಾರಿಕೆಗೆ ನಿಷೇಧ ಇದೆ. ಮೀನುಗಳು ಹೊರಗೆ ಬಂದಾಗ ಪಕ್ಷಿಗಳ ಹಾರಾಟ ಹೆಚ್ಚಾಗಲಿದೆ. ಹೆಚ್ಚಿನ ಪಕ್ಷಿಗಳ ಹಾರಾಟದಿಂದ ವಿಮಾನಗಳ ಹಾರಾಟಕ್ಕೆ ತೊಂದರೆ ಆಗಲಿದೆ. ಹೀಗಾಗಿ ಯಲಹಂಕ ವಾಯುನೆಲೆಯ ಸುತ್ತಮುತ್ತ ಹಾಗೂ ದೇವನಹಳ್ಳಿ ವ್ಯಾಪ್ತಿಗೆ ಬರುವ ಎಲ್ಲಾ ಕೆರೆಗಳಲ್ಲಿ ಮೀನು ಹಿಡಿಯುವುದು ಹಾಗೂ ಮಾರಾಟವನ್ನು ಸ್ಥಗತಗೊಳಿಸಲಾಗಿದೆ. ಮೀನುಗಾರಿಕೆ ಇಲಾಖೆಯು ಎಲ್ಲಾ ಟೆಂಡರ್ ಹಾಗೂ ಗುತ್ತಿಗೆದಾರರಿಗೆ ಕೆರೆಗಳಿಗೆ ಇಳಿಯದಂತೆ ನಿಷೇಧ ಹೇರಿದೆ.
ಇದನ್ನೂ ಓದಿ: Aero India Show; ಬೆಂಗಳೂರಲ್ಲಿ ಭಾರೀ ಟ್ರಾಫಿಕ್.. ಕೆಲ ರಸ್ತೆಗಳಿಗೆ ಎಂಟ್ರಿಯೇ ಇಲ್ಲ, ಎಲ್ಲೆಲ್ಲಿ?
ಮೆಟ್ರೋ ಕಾಮಗಾರಿ ಬಂದ್!
ಯಲಹಂಕ ಬಳಿ ‘ನಮ್ಮ ಮೆಟ್ರೋ’ ಕಾಮಗಾರಿಯನ್ನು ಸ್ಥಗಿತ ಮಾಡಿದೆ. ಭಾರತೀಯ ವಾಯುಪಡೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಐಎಎಫ್ ಕ್ಯಾಂಪಸ್ ವ್ಯಾಪ್ತಿಗೆ ಬರುವ ಯಲಹಂಕ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಕಾಮಗಾರಿಯನ್ನು ಸ್ಥಗಿತ ಮಾಡಲಾಗಿದೆ. ಫೆಬ್ರವರಿ 5 ರಿಂದ 15ರವರೆಗೆ ಕಾಮಗಾರಿ ಕಾರ್ಯ ನಿಲ್ಲಿಸುವಂತೆ ಐಎಎಫ್ ತಿಳಿಸಿದೆ.
ರೆಡ್ ಡ್ರೋನ್ ಝೋನ್
ಅನಧಿಕೃತ ಡ್ರೋನ್ ಚಟುವಟಿಕೆ ವಿರುದ್ಧ ಕ್ರಮ ಕೈಗೊಳ್ಳಲು ವ್ಯವಸ್ಥೆ ಆಗಿದೆ. ಈಗಾಗಲೇ ರೆಡ್ ಡ್ರೋನ್ ವಲಯಗಳೆಂದು ಗುರುತು ಮಾಡಲಾಗಿದೆ. ಈ ವಲಯಗಳಲ್ಲಿ ಡ್ರೋಣ್ಗಳ ಹಾರಾಟಕ್ಕೆ ನಿಷೇಧ ಹೇರಲಾಗಿದೆ. ಕ್ಷಿಪ್ರ ಮೊಬೈಲ್ ಘಟಕಗಳನ್ನು ಆಯಕಟ್ಟಿನ ಜಾಗದಲ್ಲಿ ನಿಯೋಜನೆ ಮಾಡಲಾಗಿದೆ. ಈ ಮೂಲಕ ಭದ್ರತೆ ಮತ್ತು ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಬಲೂನ್ಗಳ ಹಾರಾಟವನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: Aero Show; 100 ದೇಶಗಳು ಭಾಗಿ.. ಬೆಂಗಳೂರಿನ ಬಾನಂಗಳದತ್ತ ಇಡೀ ಜಗತ್ತಿನ ಚಿತ್ತ..!
AI ಆಧಾರಿತ ಭದ್ರತಾ ಕ್ರಮ..!
ವೈಮಾನಿಕ ಪ್ರದರ್ಶನಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಸುರಕ್ಷತೆ ನೀಡಲು ಕ್ರಮಕೈಗೊಳ್ಳಲಾಗಿದೆ. ಗೃಹ ಸಚಿವಾಲಯ, ಬೆಂಗಳೂರು ಪೊಲೀಸ್, ಸಿಐಎಸ್‌ಎಫ್ ಮತ್ತು ಗುಪ್ತಚರ ಸಂಸ್ಥೆಗಳ ಸಹಯೋಗದೊಂದಿಗೆ ಕೃತಕ ಬುದ್ಧಿಮತ್ತೆ ಸೇರಿದಂತೆ ಬಹು ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಪರಿಸ್ಥಿತಿಯನ್ನು ಅರಿಯಲು ದಿನದ 24 ಗಂಟೆ ಸಿಸಿ ಕ್ಯಾಮರಾ ಮೇಲ್ವಿಚಾರಣೆ ಮಾಡಲಾಗುತ್ತಿದೆ. ತುರ್ತು ಪರಿಸ್ಥಿತಿ ನಿರ್ವಹಿಸಲು ವಿಪತ್ತು ನಿರ್ವಹಣೆ ಮತ್ತು ಅಗ್ನಿ ಸುರಕ್ಷತಾ ಸಮಿತಿಯು ಸಜ್ಜಾಗಿದೆ.
ಡಿಜಿಟಲ್ ಮೂಲಸೌಕರ್ಯ
ಲಕ್ಷಾಂತರ ಜನರು ಒಂದೆಡೆ ಸೇರುವುದರಿಂದ ಮೊಬೈಲ್ ನೆಟ್‌ವರ್ಕ್ ಜಾಮ್ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ತಾತ್ಕಾಲಿಕ ಮೊಬೈಲ್ ಟವರ್‌ಗಳು ಮತ್ತು ನೆಟ್‌ವರ್ಕ್ ಬೂಸ್ಟರ್‌ಗಳನ್ನು ನಿಯೋಜನೆ ಮಾಡಲಾಗಿದೆ. ಲೈವ್ ಅಪ್‌ಡೇಟ್ಸ್, ಸಂಚಾರಕ್ಕೆ ಸಹಕರಿಸುವ ಮತ್ತು ಕಾರ್ಯಕ್ರಮದ ವೇಳಾಪಟ್ಟಿಯನ್ನು ಒದಗಿಸಲಾಗುತ್ತಿದೆ. ಮೀಸಲಾದ ಏರೋ ಇಂಡಿಯಾ 2025 ಮೊಬೈಲ್ ಅಪ್ಲಿಕೇಶನ್ಸ್ ಕೂಡ ಕಾರ್ಯನಿರ್ವಹಿಸುತ್ತಿವೆ.
ಇದನ್ನೂ ಓದಿ: ಅಂಗ ರಂಗ ವೈಭವಂಗ ನಡೆಯಿತು ಈ ಬೀದಿ ನಾಯಿಯ ಬರ್ತ್ಡೇ.. ಹೇಗೆಲ್ಲಾ ಇತ್ತು ಆಚರಣೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ