ಬೆಂಗಳೂರು ಸಂಚಾರ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ.. ಈ ರಸ್ತೆಗಳಲ್ಲಿ ನಿಮಗೆ ಎಂಟ್ರಿಯೇ ಇಲ್ಲ..!

author-image
Bheemappa
Updated On
ಸಂಚಾರಿ ನಿಯಮ ಉಲ್ಲಂಘಿಸುವ ಸವಾರರೇ ಎಚ್ಚರ.. ರಾಜ್ಯದಾದ್ಯಂತ ಬರಲಿದೆ ಹೊಸ ಟ್ರಾಫಿಕ್ ರೂಲ್ಸ್!
Advertisment
  • ನಾಗವಾರ ಜಂಕ್ಷನ್‌ನಿಂದ ರೇವಾ ಕಾಲೇಜ್​​ವರೆಗೆ ಸಂಚಾರ ನಿಷೇಧ
  • ವಿಮಾನಗಳ ಹಾರಾಟ ನೋಡಲು ದೇಶ-ವಿದೇಶಗಳಿಂದ ಜನ ಆಗಮನ
  • ಫ್ರೀ ಪಾರ್ಕಿಂಗ್ ಹಿನ್ನೆಲೆ ಶಟಲ್ ಬಸ್ ಸೇವೆ ಬಳಕೆ ಮಾಡಿಕೊಳ್ಳಬಹುದು

ಸಿಲಿಕಾನ್ ಸಿಟಿಯ ಯಲಹಂಕ ವಾಯುನೆಲೆಯಲ್ಲಿ ಇದೇ ಫೆಬ್ರುವರಿ 10 ರಿಂದ 14ರವರಗೆ ಏರ್​ಶೋ ನಡೆಯಲಿದೆ. ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ ರಂಗೇರಲಿದ್ದು ದೇಶ-ವಿದೇಶಗಳಿಂದ ಸಾಕಷ್ಟು ಜನರು ವಿಮಾನಗಳ ಹಾರಾಟ ನೋಡಲು ಆಗಮಿಸುತ್ತಾರೆ. ಹೀಗಾಗಿ ಜನ ದಟ್ಟಣೆ, ವಾಹನ ದಟ್ಟಣೆ ಆಗುವುದು ಸಾಮಾನ್ಯ. ಇದರಿಂದ ಏರ್​ಶೋ ನಡೆಯುವ ಸುತ್ತಮುತ್ತ ಹಲವು ಸಂಚಾರ ವ್ಯವಸ್ಥೆಯನ್ನು ಬದಲಾವಣೆ ಮಾಡಲಾಗಿದೆ.

ಯಾವ ಗೇಟ್​ನಿಂದ ಬರಬೇಕು?

ವಿಮಾನಗಳ ಹಾರಾಟ ನೋಡಲು ಬರುವವರು ನೀಡಲಾದ ಟಿಕೆಟ್ ಅಥವಾ ಪಾಸ್ ಅನ್ನು ಪಡೆದವರು ಮೊದಲೇ ಕ್ಯೂಆರ್​ ಕೋಡ್ ಸ್ಕ್ಯಾನ್ ಮಾಡಿ. ಇದರಿಂದ ಯಾವ ಗೇಟ್​ನಿಂದ ಬರಬೇಕು ಎನ್ನುವುದು ತಿಳಿಯುತ್ತದೆ. ಪಾಸ್​ ಪಡೆದವರಿಗೆ ಮಾತ್ರ ಫ್ರೀ ಪಾರ್ಕಿಂಗ್ ಇರುವುದರಿಂದ ಜಿಕೆವಿಕೆಯ ಶಟಲ್ ಬಸ್ ಸೇವೆ ಬಳಕೆ ಮಾಡಿಕೊಳ್ಳಬಹುದು.

publive-image

ಒನ್​ವೇಯಲ್ಲಿ ಸಂಚಾರ

  • ನಿಟ್ಟೆ ಮೀನಾಕ್ಷಿ ಕಾಲೇಜ್ ರಸ್ತೆ (ಪೂರ್ವ ದಿಕ್ಕಿನಿಂದ ಪಶ್ಚಿಮ ದಿಕ್ಕಿನ ಕಡೆಗೆ)
  • ಬಾಗಲೂರು ಮುಖ್ಯ ರಸ್ತೆ (ಪಶ್ಚಿಮ ದಿಕ್ಕಿನಿಂದ ಪೂರ್ವ ದಿಕ್ಕಿನ ಕಡೆಗೆ)
  • ಜಿಕೆವಿಕೆ ಕ್ಯಾಂಪಸ್​ನಲ್ಲಿ ಪಾವತಿ ಪಾರ್ಕಿಂಗ್​ಗಳು
  • ಡೊಮೆಸ್ಟಿಕ್ ಪಾರ್ಕಿಂಗ್- ಗೇಟ್ ನಂಬರ್- 05
  • ಅಡ್ವಾನ್ಸ್ ಪಾರ್ಕಿಂಗ್- ಗೇಟ್ ನಂಬರ್- 08, 09

ಏರ್​ಶೋಗೆ ಬರುವ ವಾಹನ ಸವಾರರು ಬರುವ ಮಾರ್ಗ

ಬೆಂಗಳೂರು ಪೂರ್ವ ದಿಕ್ಕಿನಿಂದ ಆಡ್ವಾ ಪಾರ್ಕಿಂಗ್ ಕಡೆಗೆ- ಕೆ.ಆರ್ ಪುರ ನಾಗವಾರ ಜಂಕ್ಷನ್-ಥಣಿಸಂದ್ರ-ನಾರಾಯಣಪುರ ಕ್ರಾಸ್ ಮೂಲಕ ಬೈಪಾಸ್ ಯಲಹಂಕ ಕಾಫಿ ಡೇ ಪೋರ್ಡ್​ ಶೋ ಮೂಲಕ ಬರಬೇಕು.

ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಬರುವುದು- ಗೊರೆಗುಂಡೆ ಪಾಳ್ಯ ಬಿಇಎಲ್, ಗಂಗಮ್ಮ ಸರ್ಕಲ್-ಎಂಎಸ್ ಪಾಳ್ಯ ಸರ್ಕಲ್-ಉನ್ನಿಕೃಷ್ಣನ್ ರಸ್ತೆ, ಮದರ್ ಡೈರಿ ಜಂಕ್ಷನ್.
ಬೆಂಗಳೂರು ದಕ್ಷಿಣ ದಿಕ್ಕಿನಿಂದ ಬರುವುದು ಹೇಗೆ- ಮೈಸೂರು ರಸ್ತೆ ಮೂಲಕ ನಾಯಂಡನಹಳ್ಳಿ- ಚಂದ್ರಾ ಲೇಔಟ್- ಗೊರಗುಂಟೆಪಾಳ್ಯ- ಬಿ.ಇ.ಎಲ್ ವೃತ್ತ- ಗಂಗಮ್ಮ ವೃತ್ತ - ಎಂ.ಎಸ್ ಪಾಳ್ಯ ಸರ್ಕಲ್- ಮದರ್ ಡೈರಿ ಜಂಕ್ಷನ್ ಉನ್ನಿ ಕೃಷ್ಣನ್ ಜಂಕ್ಷನ್.

ಇದನ್ನೂ ಓದಿ:ಮತ್ತೊಂದು ಅನಾಹುತ.. 140ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದ ಇನ್ನೊಂದು ವಿಮಾನ..!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಪ್ರಯಾಣ ಮಾರ್ಗ

ಬೆಂಗಳೂರು ಪೂರ್ವ: ಕೆ.ಆರ್ ಪುರಂ, ಹೆಣ್ಣೂರು ಕ್ರಾಸ್, ಕೊತ್ತನೂರು, ಗುಬ್ಬಿಕ್ರಾಸ್ ಕಣ್ಣೂರು ಹಾಗೂ ಬಾಗಲೂರು.
ಬೆಂಗಳೂರು ಪಶ್ಚಿಮ: ಗೊರಗುಂಟೆ ಪಾಳ್ಯ, ಬಿ.ಇ.ಎಲ್ ವೃತ್ತ, ಗಂಗಮ್ಮ ವೃತ್ತ ಎಂ.ಎಸ್ ಪಾಳ್ಯ ಸರ್ಕಲ್. ಮದರ್‌ಡೈರಿಯಿಂದ ಬರಬೇಕು
ಬೆಂಗಳೂರು ದಕ್ಷಿಣ: ಮೈಸೂರು ರಸ್ತೆ, ನಾಯಂಡನಹಳ್ಳಿ, ಚಂದ್ರ ಲೇಔಟ್ ಗೊರಗುಂಟೆಪಾಳ್ಯ, ಬಿಇಎಲ್ ವೃತ್ತ, ಗಂಗಮ್ಮ ವೃತ್ತ, ಎಂ.ಎಸ್ ಪಾಳ್ಯ ಸರ್ಕಲ್, ಮದರ್‌ಡೈರಿ ಜಂಕ್ಷನ್ ಉನ್ನಿಕೃಷ್ಣನ್ ಜಂಕ್ಷನ್ ಮೂಲಕ ಹೋಗಬೇಕು.

publive-image

ಸಂಚಾರ ನಿಷೇಧ

ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ, ಮೇದ್ರಿ ವೃತ್ತದಿಂದ ಎಂಎಐಟಿ ಕ್ರಾಸ್​ವರೆಗೆ ಹಾಗೂ ಎಂವಿಐಟಿ ಕ್ರಾಸ್ ನಿಂದ ಮೇಖ್ರಿ ವೃತ್ತದವರೆಗೆ, ಗೊರಗುಂಟೆಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್​ವರೆಗೆ, ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ಬಾಗಲೂರಿನ ರೇವಾ ಕಾಲೇಜ್ ಜಂಕ್ಷನ್, ಹೆಸರಘಟ್ಟ ಹಾಗೂ ಚಿಕ್ಕಬಾಣಾವರ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಬರುವ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ.

ವಾಹನ ನಿಲುಗಡೆ ನಿಷೇಧ

ಬಾಗಲೂರು ಮುಖ್ಯ ರಸ್ತೆಯ ಮಾರ್ಗವಾಗಿ ಸಾತನೂರುವರೆಗೆ, ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗದ ರೇವಾ ಕಾಲೇಜ್ ಜಂಕ್ಷನ್, ಎಫ್‌ಟಿಐ ಜಂಕ್ಷನ್‌ನಿಂದ ಹೆಣ್ಣೂರು ಕ್ರಾಸ್ ಜಂಕ್ಷನ್‌, ಹೆಣ್ಣೂರು ಕ್ರಾಸ್​ನಿಂದ ಬೇಗೂರು ಬ್ಯಾಕ್ ಗೇಡ್​ವರೆಗೆ, ನಾಗೇನಹಳ್ಳಿ ಗೇಟ್ ಜಂಕ್ಷನ್​ನಿಂದ ಯಲಹಂಕ ಸರ್ಕಲ್‌ವರೆಗೆ, ಎಂವಿಐಟಿ ಕ್ರಾಸ್‌ನಿಂದ ನಾರಾಯಣಪುರ ರೈಲ್ವೇ ಕ್ರಾಸ್‌ವರೆಗೆ, ಕೋಗಿಲು ಕ್ರಾಸ್ ಜಂಕ್ಷನ್‌ನಿಂದ ಕಣ್ಣೂರು ಜಂಕ್ಷನ್ ವರೆಗೆ ಮತ್ತಿಕೆರೆ ಕ್ರಾಸ್‌ನಿಂದ ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಉನ್ನಿಕೃಷ್ಣನ್ ಜಂಕ್ಷನ್ ವರೆಗೆ, ಜಾಲಹಳ್ಳಿ ಕ್ರಾಸ್ ಜಂಕ್ಷನ್​ನಿಂದ ಗಂಗಮ್ಮ ಸರ್ಕಲ್ ಜಂಕ್ಷನ್​ವರೆಗೆ ವಾಹನ ನಿಲುಗಡೆ ನಿಷೇಧ ಇರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment