ನೀವೂ ಏರ್ ಶೋಗೆ ಹೋಗಬಹುದು.. ಒಂದು ಪಾಸ್​ಗೆ ಎಷ್ಟು ರೂಪಾಯಿ ಗೊತ್ತಾ..?

author-image
Ganesh
Updated On
ನೀವೂ ಏರ್ ಶೋಗೆ ಹೋಗಬಹುದು.. ಒಂದು ಪಾಸ್​ಗೆ ಎಷ್ಟು ರೂಪಾಯಿ ಗೊತ್ತಾ..?
Advertisment
  • ಎರಡು ಮಾದರಿಯ ಪಾಸ್​ಗಳು ಲಭ್ಯವಿದೆ
  • ಇಂದಿನಿಂದ 5 ದಿನ ಬೆಂಗಳೂರಲ್ಲಿ ಏರ್​ ಶೋ
  • ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ಶೋ (Aero india shwo) ಆರಂಭವಾಗಿದೆ. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರ ಶುರುವಾಗಿದ್ದು, ವಾಯು ಸೇನೆಯ ವೈಭವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಎಕ್ಸೈಟ್ ಆಗಿದ್ದಾರೆ.
ನೀವೂ ಹೋಗಬಹುದು..

ನೀವು ಕೂಡ ಏರೋ ಇಂಡಿಯಾ ಶೋ ಅನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದಾಗಿದೆ. ಮೊಬೈಲ್​ನಲ್ಲಿಯೇ ಪಾಸ್ ಬುಕ್ ಮಾಡಿ ಖರೀದಿಸಬಹುದು. ಅದಕ್ಕಾಗಿ ನೀವು, ಮೊಬೈಲ್​ನಲ್ಲಿ ಇರೋ ಇಂಡಿಯಾ ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳಬಹುದು. ಅಥವಾ https://www.aeroindia.gov.in/ ವೆಬ್​ಸೈಟ್​​ಗೆ ಭೇಟಿ ನೀಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ: Aero India! ಭದ್ರತೆಗೆ AI ಆಧಾರಿತ ಕ್ರಮ, ಬೆಂಗಳೂರಲ್ಲಿ ಯಾವುದೆಲ್ಲ ನಿಷೇಧ..?

publive-image

ಒಂದು ಸಾವಿರ ರೂಪಾಯಿ ಪಾವತಿಸಿ ಪಾಸ್ ಖರೀದಿಸಬಹುದು. ನಾಳೆಯಿಂದ ಫೆಬ್ರವರಿ 14ರವರೆಗೆ ಏರೋ ಇಂಡಿಯಾ ಶೋ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇದೆ. ವಸ್ತು ಪ್ರದರ್ಶನ ಮತ್ತು ವೈಮಾನಿಕ ಪ್ರದರ್ಶನ ವೀಕ್ಷಣೆ ಮಾಡಲು 2500 ರೂಪಾಯಿ ಹಾಗೂ ಬಿಸಿನೆಸ್ ಪಾಸ್ ದರ 5000 ರೂಪಾಯಿ ನಿಗಧಿ ಮಾಡಲಾಗಿದೆ.

ಏರ್ ​ಶೋಗಾಗಿ ಬಿಎಂಟಿಸಿ ಸ್ಪೇಷಲ್ ಸರ್ವಿಸ್​ ನೀಡುತ್ತಿದೆ. ನಗರದ ಪ್ರಮುಖ ಬಸ್​ಸ್ಟ್ಯಾಂಡ್​ಗಳಿಂದ ಏರ್​ಶೋಗೆ ಡೈರೆಕ್ಟ್ ಬಸ್​ ಸೇವೆ ನೀಡಲಾಗುತ್ತಿದೆ. ಏರ್​ಶೋ ಪಾಸ್ ಇದ್ದವರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತಿದೆ. ಐದು ದಿನಗಳ ಕಾಲ ಈ ಸೌಲಭ್ಯವಿದ್ದು. ಏರ್​ ಶೋ ಟಿಕೆಟ್​ ತೋರಿಸಿ ಫ್ರೀಯಾಗಿ ಪ್ರಯಾಣ ಮಾಡಬಹುದು.

ಇದನ್ನೂ ಓದಿ: Aero India! ಭದ್ರತೆಗೆ AI ಆಧಾರಿತ ಕ್ರಮ, ಬೆಂಗಳೂರಲ್ಲಿ ಯಾವುದೆಲ್ಲ ನಿಷೇಧ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment