Aero India show ವೀಕ್ಷಣೆಗೆ ಕೊನೆ ಅವಕಾಶ, ಇವತ್ತು ಮಿಸ್​ ಮಾಡಿಬೇಡಿ.. ನಿನ್ನೆ ಏನಾಗಿತ್ತು ಗೊತ್ತಾ?

author-image
Ganesh
Updated On
Aero India show ವೀಕ್ಷಣೆಗೆ ಕೊನೆ ಅವಕಾಶ, ಇವತ್ತು ಮಿಸ್​ ಮಾಡಿಬೇಡಿ.. ನಿನ್ನೆ ಏನಾಗಿತ್ತು ಗೊತ್ತಾ?
Advertisment
  • ಇಂದು ಲೋಹದ ಹಕ್ಕಿಗಳ ಕೊನೆ ದಿನದ ಝಲಕ್!​
  • ಏರ್​ ಶೋಗೆ ಎಲ್ಲರಿಗೂ ಫ್ರೀ ಎಂಟ್ರಿ.. ಮಸ್ತ್​ ಮಜಾ!
  • ಏರ್​ ಶೋ ಪ್ರಿಯರಿಗೆ ಇಂದು ಸಹ ಟ್ರಾಫಿಕ್​ ತಲೆ ಬಿಸಿ!

ರಾಜಧಾನಿಯ ಬಾನಂಚಿನಲ್ಲಿ ಕಳೆದ ನಾಲ್ಕು ದಿನಗಳಿಂದ ಬಣ್ಣದ ಚಿತ್ತಾರ ಮೂಡಿಸಿರೋ ಲೋಹದ ಹಕ್ಕಿಗಳು ಇಂದು ಕೊನೆಯ ದಿನದ ಅಬ್ಬರಕ್ಕೆ ರೆಡಿಯಾಗಿವೆ. ಇಂದು ಕೊನೆಯ ಆಟದ ಹಿನ್ನೆಲೆ ಜನರಿಗೆ ಏರ್​ ಶೋ ವೀಕ್ಷಣೆಗೆ ಮುಕ್ತ ಅವಕಾಶವಿದ್ದು, ಏರ್​ ಶೋಗೆ ಜನಸಾಗರವೇ ಹರಿದು ಬರೋ ಸಾಧ್ಯತೆ ಇದೆ.

ಇಂದು ಲೋಹದ ಹಕ್ಕಿಗಳ ಕೊನೆ ದಿನದ ಝಲಕ್!​

ಇಂದು ಏರ್‌ ಇಂಡಿಯಾ ಶೋ ಕೊನೆ ದಿನವಾಗಿದ್ದು ಆಗಸದ ಅಂಚಿನಲ್ಲಿ ಅಬ್ಬರಿಸಿ ಬೊಬ್ಬಿರಿಯಲು ಲೋಹದ ಹಕ್ಕಿಗಳು ಸಜ್ಜಾಗಿವೆ.. ವಿಶೇಷ ಅಂದ್ರೆ ಇಂದು ಎಲ್ಲಿರೋ ಏರ್​ ಶೋ ವೀಕ್ಷಿಸಲು ಮುಕ್ತ ಅವಕಾಶವಿದ್ದು, ಯಾವುದೇ ಹಣ ಪಾವತಿ ಮಾಡದೇ ಫ್ರೀಯಾಗಿ ಏರ್​ ಶೋಗೆ ಎಂಟ್ರಿ ಪಡೆಯಬಹುದಾಗಿದೆ.

ಇದನ್ನೂ ಓದಿ: ಡಾಲಿ ಧನಂಜಯ್​ ಮದುವೆ ಮೈಸೂರಿನಲ್ಲಿ ನಡೆಯುತ್ತಿರುವುದು ಏಕೆ? ಅದಕ್ಕೂ ಇದೆ ಒಂದು ಕನೆಕ್ಷನ್​!

publive-image

ಏರ್​ ಶೋ ಪ್ರಿಯರಿಗೆ ಇಂದು ಸಹ ಟ್ರಾಫಿಕ್​ ತಲೆ ಬಿಸಿ!

ಏರ್ ಶೋ ಕಣ್ತುಂಬಿಕೊಳ್ಳಲು ಬಂದ ಸಿಟಿ ಮಂದಿಗೆ ನಿನ್ನೆ ಟ್ರಾಫಿಕ್​ ಬಿಸಿ ತಟ್ಟಿತ್ತು. ಇನ್ನೂ ಕೆಲವರು ಟ್ರಾಫಿಕ್​ನ್ನ ನೋಡಿಯೋ ಸುಸ್ತಾಗಿ ವಾಪಸ್ ಹೋದ ಘಟನೆಯೂ ನಡೆದಿತ್ತು. ಯಲಹಂಕ, ಹೆಬ್ಬಾಳ, ಬಾಗಲೂರು, ಕೋಡಿಗೆಹಳ್ಳಿ, ದೇವನಹಳ್ಳಿ ಮುಖ್ಯ ರಸ್ತೆ ಮತ್ತು ಏರ್ಪೋಟ್ ಮಾರ್ಗಸಂಪೂರ್ಣ ಜಾಮ್​ ಆಗಿತ್ತು.. ಇಂದೂ ಸಹ ಇದೆ ಸೀನ್​ ಕ್ರಿಯೇಟ್​ ಆಗೋ ಸಾಧ್ಯತೆ ಇದೆ.. ಯಾಕಂದ್ರೆ ಏರ್​ಶೋ ವೀಕ್ಷಿಸಲು ಎಲ್ಲರಿಗೂ ಮುಕ್ತ ಅವಕಾಶವಿರೋ ಕಾರಣ ಇಂದು ಏರ್​ ಶೋಗೆ ಜನಸಾಗರವೇ ಹರಿದು ಬರೋ ಸಾಧ್ಯತೆ ಇದೆ.

ಇದನ್ನೂ ಓದಿ: ಸ್ಮಾರ್ಟ್​ಫೋನ್​​ ಬಳಕೆದಾರರಿಗೆ LG ಕಂಪನಿಯಿಂದ ಭರ್ಜರಿ ಗುಡ್​ನ್ಯೂಸ್​​; ನೀವು ಓದಲೇಬೇಕಾದ ಸ್ಟೋರಿ

publive-image

ಭಾವಿ ಪತ್ನಿ ಜೊತೆ ಏರ್​ ಶೋದಲ್ಲಿ ತೇಜಸ್ವಿ ಸೂರ್ಯ ಭಾಗಿ!

ಏರೋ ಶೋದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭಾವಿ ಪತ್ನಿ ಜೊತೆ ಭಾಗಿಯಾಗಿದ್ರು. ಏರೋ ಶೋದಲ್ಲಿ ಸ್ವದೇಶಿ ನಿರ್ಮಿತ ತರಬೇತಿ ವಿಮಾನ HTT-40ಯಲ್ಲಿ 30 ನಿಮಿಷಗಳ ಕಾಲ ಹಾರಾಟ ನಡೆಸಿದ ತೇಜಸ್ವಿ ಸೂರ್ಯ ಎಲ್ಲರ ಗಮನ ಸೆಳೆದರು.

ಒಟ್ನಲ್ಲಿ, ಇಂದು ಕೊನೆಯ ದಿನ ಹಿನ್ನೆಲೆ, ಹೆಚ್ಚಿನ ಜನ ಭಾಗಿಯಾಗೋ ಸಾಧ್ಯತೆ ಇದೆ.. ದೇವರೇ ಟ್ರಾಫಿಕ್ ಬಿಸಿಯಿಂದ ಪಾರಾಗಿ ತಣ್ಣಗೆ ಕೂಲ್​ ಡ್ರಿಂಕ್ಸ್​ ಸವಿಯುತ್ತಾ ಯುದ್ಧ ವಿಮಾನಗಳನ್ನ ವೀಕ್ಷಿಸೋ ಸೌಭಾಗ್ಯ ನೀಡಪ್ಪ ಅಂತ ಏರ್​ ಶೋ ಪ್ರೀಯರು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: ವಿಶ್ವದ ಬಲಿಷ್ಠ ರಾಷ್ಟ್ರದ ನಾಯಕರ ಜೊತೆ ಮಹತ್ವದ ಚರ್ಚೆ.. ಮೋದಿಗೆ ಸ್ಪೆಷಲ್ ಗಿಫ್ಟ್​ ಕೊಟ್ಟ ಎಲಾನ್‌ ಮಸ್ಕ್‌

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment