/newsfirstlive-kannada/media/post_attachments/wp-content/uploads/2025/02/AIR_SHOW_1.jpg)
ಏರೋ ಇಂಡಿಯಾ ಶೋ ಭಾರತದ ಶಕ್ತಿ, ದೇಶದ ಆತ್ಮವಿಶ್ವಾಸದ ಪ್ರತೀಕ. ಸಿಲಿಕಾನ್ ಸಿಟಿಯ ನೀಲಿ ಆಗಸದಲ್ಲಿ ವಾಯುಸೇನೆಯ ಲೋಹದ ಹಕ್ಕಿಗಳು ಅಬ್ಬರಿಸಲಿವೆ. ವಿಶ್ವವೇ ತಿರುಗಿ ನೋಡುವಂಥ ಫೈಟರ್ ಜೆಟ್‌ಗಳ ಅದ್ಭುತ ಸ್ಟಂಟ್‌ಗಳಿಗೆ ಹೈಟೆಕ್ ಸಿಟಿ ಸಾಕ್ಷಿಯಾಗಲಿದೆ.
ಇಂದಿನಿಂದ ಐದು ದಿನಗಳ ಕಾಲ ನಡೆಯುವ ಏರ್ ಶೋಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ಭಾರತೀಯ ರಕ್ಷಣಾ ವಲಯದ ಅಭಿವೃದ್ಧಿ ಆತ್ಮ ನಿರ್ಭರ್ ಭಾರತದ ಮಾದರಿಗಳು ಏರ್ಶೋನಲ್ಲಿ ಗಮನ ಸೆಳೆಯಲಿವೆ. ತಂತ್ರಜ್ಞಾನದ ಪ್ರದರ್ಶನಕ್ಕೆ ಅತಿದೊಡ್ಡ ವೇದಿಕೆ ಬೆಂಗಳೂರು ಸಜ್ಜಾಗಿದ್ದು, ವಿವಿಧ ಯುದ್ಧ ವಿಮಾನಗಳು, ರಫೆಲ್, ಚಾಪರ್ಗಳು ಬಾನಂಗಳದಲ್ಲಿ ರಂಗು ರಂಗಿನ ಚಿತ್ತಾರ ಮೂಡಿಸಲಿವೆ.
ಇದನ್ನೂ ಓದಿ: 100 ರೂಪಾಯಿಗೆ ಈರುಳ್ಳಿ ಖರೀದಿಸಿ, ಆಕರ್ಷಕ ಬಹುಮಾನ ಗೆಲ್ಲಿ; ಗ್ರಾಹಕರಿಗೆ ಬಿಗ್ ಆಫರ್
ಏರ್ ಶೋಗೆ ಸಂಬಂಧಿಸಿದ ಪ್ರಮುಖ 10 ವಿಚಾರಗಳು..!
- ಒಟ್ಟು 90 ದೇಶಗಳು ಏರೋ ಇಂಡಿಯಾದಲ್ಲಿ ಪಾಲ್ಗೊಳ್ಳುತ್ತಿವೆ
- ಯುದ್ಧ, ಸರಕು, ತರಬೇತಿ ಸೇರಿ ಒಟ್ಟು 70 ವಿಮಾನಗಳಿಂದ ಪ್ರದರ್ಶನ
- ಏರ್ ಶೋನಲ್ಲಿ 30 ವಿಮಾನ, ಹೆಲಿಕಾಪ್ಟರ್ ಪ್ರದರ್ಶನಕ್ಕೆ ಇಡಲಾಗಿದೆ
- 750 ಭಾರತದ ಕಂಪನಿಗಳು ಏರ್ಶೋನಲ್ಲಿ ಭಾಗಿಯಾಗಲಿವೆ
- ಏರ್ಶೋನಲ್ಲಿ 100ಕ್ಕೂ ರಾಷ್ಟ್ರಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ
- ಐದು ದಿನದಲ್ಲಿ ಒಟ್ಟ 7 ಲಕ್ಷ ಮಂದಿ ಏರ್ ಶೋಗೆ ಆಗಮಿಸುವ ನಿರೀಕ್ಷೆ
- 30ಕ್ಕೂ ಹೆಚ್ಚು ರಾಷ್ಟ್ರಗಳ ರಕ್ಷಣಾ ಮಂತ್ರಿಗಳು ಭಾಗಿಯಾಗಲಿದ್ದಾರೆ
- ವಿಮಾನ, ರಕ್ಷಣಾ ಉತ್ಪನ್ನಗಳ ಪ್ರದರ್ಶನಕ್ಕಾಗಿ 42 ಸಾವಿರ ಚ.ಮೀ ಮೀಸಲಿಡಲಾಗಿದೆ
- ವಿಕಸಿತ ಭಾರತಕ್ಕೆ ಏರೋ ಇಂಡಿಯಾದಿಂದ ಭರ್ಜರಿ ಕೊಡುಗೆ ನಿರೀಕ್ಷೆ-ರಾಜನಾಥ್ ಸಿಂಗ್
- ಎಐ, ಡ್ರೋನ್ಸ್, ಸೈಬರ್ ಸೆಕ್ಯುರಿಟಿ, ಗ್ಲೋಬರ್ ಏರೋಸ್ಪೇಸ್
- USನ ಎಫ್-35, ರಷ್ಯಾದ SU-57 ಏರ್ ಶೋನ ಪ್ರಮುಖ ಆಕರ್ಷಣೆ
ಇದನ್ನೂ ಓದಿ: Aero Show; 100 ದೇಶಗಳು ಭಾಗಿ.. ಬೆಂಗಳೂರಿನ ಬಾನಂಗಳದತ್ತ ಇಡೀ ಜಗತ್ತಿನ ಚಿತ್ತ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ