newsfirstkannada.com

ಭೀಕರ ಪ್ರವಾಹ, ಮನೆಗಳು ಸರ್ವನಾಶ.. ಮಕ್ಕಳು ಸೇರಿ 16 ಜನರು ಸಾವು

Share :

Published May 27, 2024 at 7:40am

Update May 27, 2024 at 7:42am

    ಮಕ್ಕಳು, ಪುರುಷರು, ಮಹಿಳೆಯರು ಪ್ರವಾಹಕ್ಕೆ ಬಲಿ

    ಪ್ರವಾಹದಲ್ಲಿ ನನ್ನ ಕುಟುಂಬ 9 ಜನರು ಸಾವನ್ನಪ್ಪಿದ್ದಾರೆ ಎಂದ ಸಂತ್ರಸ್ತ

    ಭೀಕರ ಪ್ರವಾಹಕ್ಕೆ ತುತ್ತಾಗಿ 300ಕ್ಕೂ ಹೆಚ್ಚು ಮನೆಗಳೂ ನೆಲಸಮ

ತಾಲಿಬಾನ್​ಗಳ ಅಟ್ಟಹಾಸದಿಂದ ನಲುಗಿ ಹೋಗಿದ್ದ ಅಪ್ಘಾನಿಸ್ತಾನಕ್ಕೆ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗುತ್ತಿದೆ. ಬಾಗ್ಲಾನ್​ ಮತ್ತು ಬಡಾಕ್ಷನ್​ ಪ್ರಾಂತ್ಯಗಳಲ್ಲಿ ಭೀಕರ ಪ್ರವಾಹ ಬಂದಿದ್ದು, ಮಕ್ಕಳು ಸೇರಿ ಸುಮಾರು 16 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ದಾಂಡ್​​-ಎ-ಫೋರಿ, ದೋಷಿ, ಫುಲ್​-ಎ-ಖುಮ್ರಿ ನಗರ ಮತ್ತು ಕೆಲವು ಪ್ರಾಂತ್ಯಗಳು ಪ್ರವಾಹದಿಂದ ನಲುಗಿವೆ. ಮಕ್ಕಳು, ಪುರುಷರು, ಮಹಿಳೆಯರು ಪ್ರವಾಹದಿಂದಾಗಿ ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಮನೆಗಳೂ ನಾಶವಾಗಿದೆ.

ಸಂತ್ರಸ್ತನೋರ್ವ ‘‘ಪ್ರವಾಹದಲ್ಲಿ ನನ್ನ ಕುಟುಂಬ 9 ಜನರು ಸಾವನ್ನಪ್ಪಿದ್ದಾರೆ. ಸದ್ಯ 2 ಶವಗಳು ಮಾತ್ರ ಸಿಕ್ಕಿವೆ. ಉಳಿದವರು ಕಾಣೆಯಾಗಿದ್ದಾರೆ’’ ಎಂದು ಹೇಳಿದ್ದಾರೆ.

ಮತ್ತೋರ್ವ ವ್ಯಕ್ತಿ ‘‘ ನನ್ನ ವಿನಂತಿ ಏನೆಂದರೆ, ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿದ್ದೇವೆ. ಅಪ್ಘಾನಿಸ್ತಾನದ ಯಾವುದೇ ಭಾಗಕ್ಕೆ ಏನೇ ಸೌಕರ್ಯ ಮಂಜೂರು ಮಾಡಿದರು ನಮ್ಮನ್ನು ಮರೆಯಬೇಡಿ’’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರೇಮಿಗಳಿಗೆ ಶುಭದಿನ; ಹಣ ಹೂಡಿಕೆ ಮಾಡೋರಿಗೆ ಅನುಕೂಲ; ಇಲ್ಲಿದೆ ಇಂದಿನ ಭವಿಷ್ಯ

ಕಳೆದ ಒಂದು ವಾರದಿಂದ ಭೀಕರ ಪ್ರವಾಹವನ್ನು ಅಪ್ಘಾನಿಸ್ತಾನ ಎದುರಿಸುತ್ತಿದೆ. ಸುಮಾರು 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೂರಾರು ವಸಗಿ ಗೃಹಗಳು ನಾಶವಾಗಿದೆ. ಸಾವಿರಾರು ಕೃಷಿ ಭೂಮಿ ಕೂಡ ನಾಶವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಪ್ರವಾಹ, ಮನೆಗಳು ಸರ್ವನಾಶ.. ಮಕ್ಕಳು ಸೇರಿ 16 ಜನರು ಸಾವು

https://newsfirstlive.com/wp-content/uploads/2024/05/Afghanistan-5.jpg

Load More