/newsfirstlive-kannada/media/post_attachments/wp-content/uploads/2024/12/Afghanisthan-Windoless-house.jpg)
ಮನೆಯೊಂದು 3 ಬಾಗಿಲು ಅನ್ನೋ ಕಾಲದಲ್ಲಿ ಕಿಟಕಿಗಳು ಇಲ್ಲದ ಮನೆ ಕಟ್ಟಿದ್ರೆ ಹೇಗಿರುತ್ತೆ. ನಮ್ಮ ದೇಶದಲ್ಲಿ ಊಹಿಸಿಕೊಳ್ಳೋದು ಕಷ್ಟ ಬಿಡಿ. ಆದರೆ ಅಫ್ಘಾನಿಸ್ತಾನದಲ್ಲಿ ಹೊಸ ಮನೆ, ಕಟ್ಟಡಗಳಿಗೆ ಕಿಟಕಿ ಇರಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ.
ಅಫ್ಘಾನಿಸ್ತಾನದಲ್ಲಿ ಸದ್ಯ ತಾಲಿಬಾನ್ ಆಡಳಿತ ಜಾರಿಯಲ್ಲಿದೆ. ತಾಲಿಬಾನ್ ಆಳ್ವಿಕೆಯಲ್ಲಿರುವ ಈ ದೇಶಕ್ಕೆ ಹೊಸ ನಿಯಮ ಜಾರಿಯಾಗಿದೆ. ಇನ್ಮುಂದೆ ಅಫ್ಘಾನಿಸ್ತಾನದಲ್ಲಿ ಮನೆಗಳಿಗೆ ಕಿಟಕಿ ಇಲ್ಲದಂತೆ ನಿರ್ಮಾಣ ಮಾಡಬೇಕೆಂದು ಸೂಚನೆ ನೀಡಲಾಗಿದೆ.
ಕಾರಣವೇನು?
ಮನೆಯ ಕಿಟಕಿಗಳಲ್ಲಿ ಕೆಲಸ ಮಾಡುವ ಮಹಿಳೆಯರು, ಮನೆ ವರಾಂಡದಲ್ಲಿರುವ ಮಹಿಳೆಯರನ್ನು ನೋಡಬಾರದು. ಬಾವಿ ಬಳಿ ನೀರು ತೆಗೆದುಕೊಳ್ಳುವ ಮಹಿಳೆಯರನ್ನು ನೋಡುವುದು ಅಸಭ್ಯ ಕೃತ್ಯಗಳಿಗೆ ಕಾರಣವಾಗುತ್ತೆ. ಕಿಟಕಿ ಮೂಲಕ ಮಹಿಳೆಯರನ್ನು ನೋಡುವುದು ಅಸಭ್ಯ ಕೃತ್ಯಕ್ಕೆ ನಾಂದಿ ಹಾಡುತ್ತೆ. ಹೀಗಾಗಿ ಹೊಸ ಮನೆ, ಕಟ್ಟಡಗಳಲ್ಲಿ ಕಿಟಕಿಗಳನ್ನು ಬಿಡಬಾರದೆಂದು ತಾಲಿಬಾನ್ ಸರ್ಕಾರದಿಂದ ಈ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಅತಿ ಹೆಚ್ಚು ಸಸ್ಯಾಹಾರಿ ಜನಸಂಖ್ಯೆ ಹೊಂದಿರುವ 10 ರಾಷ್ಟ್ರಗಳು ಯಾವುವು? ಭಾರತ ಎಷ್ಟನೇ ಸ್ಥಾನದಲ್ಲಿದೆ?
ವ್ಯಾಪಕ ಟೀಕೆ!
ತಾಲಿಬಾನಿ ವಕ್ತಾರರ ಈ ಕಠಿಣ ನಿರ್ಧಾರ ವಿಶ್ವಾದ್ಯಂತ ಚರ್ಚೆಗೆ ಗುರಿಯಾಗಿದೆ. ಇದು ಸ್ತ್ರೀ ಸ್ವಾತಂತ್ರ್ಯ ಹರಣ, ಮಹಿಳೆಯರ ಹಕ್ಕು ಕಿತ್ತುಕೊಂಡಂತೆ ಅನ್ನೋ ಟೀಕೆ ವ್ಯಕ್ತವಾಗಿದೆ. ಅಲ್ಲದೆ ಅಫ್ಘಾನಿಸ್ತಾನ ಮಹಿಳೆಯರನ್ನು ವ್ಯವಸ್ಥೆಯಲ್ಲಿ ಕೂಡಿ ಹಾಕಲಾಗುತ್ತಿದೆ. ಈ ಬಗ್ಗೆ ವಿಶ್ವ ಸಂಸ್ಥೆ ಕೂಡ ಮೌನ ಆಗಿರೋದು ಯಾಕೆ ಎಂದು ಪ್ರಶ್ನಿಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ