/newsfirstlive-kannada/media/post_attachments/wp-content/uploads/2023/06/Babar_Kohli.jpg)
ಆಫ್ರೋ-ಏಷ್ಯಾ ಕಪ್ (Afro Asia Cup) ಮತ್ತೆ ಪ್ರಾರಂಭವಾಗಲಿದೆ. ಆಫ್ರಿಕನ್ ಕ್ರಿಕೆಟ್ ಅಸೋಸಿಯೇಷನ್ (ACA) ಶನಿವಾರ ವಾರ್ಷಿಕ ಸಭೆ ನಡೆಸಿದೆ. ಈ ವೇಳೆ ಆರು ಜನರ ನೇತೃತ್ವದ ಮಧ್ಯಂತರ ಸಮಿತಿ ರಚಿಸಲಾಗಿದೆ. ಇದು ಏಷ್ಯನ್ ಮತ್ತು ಆಫ್ರಿಕನ್ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಿಕೊಡಲಿದೆ.
ಈ ಸಮಿತಿಯು ಇತರ ದೇಶಗಳ ಕ್ರಿಕೆಟ್ ಸಂಸ್ಥೆಗಳನ್ನು ಸಂಪರ್ಕಿಸಿ ವಿವಿಧ ಖಂಡಗಳ ನಡುವೆ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲು ಒತ್ತಾಯಿಸುತ್ತದೆ. ಅವುಗಳಲ್ಲಿ ಆಫ್ರೋ-ಏಷ್ಯಾ ಕಪ್ ಕೂಡ ಒಂದಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಭಾರತದ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಬಾಬರ್ ಅಜಂ ಒಟ್ಟಿಗೆ ಆಡಲಿದ್ದಾರೆ.
ಇದನ್ನೂ ಓದಿ:ಹಳೇ ಫೋನ್ ಮಾರಾಟ ಮಾಡ್ತಿದ್ದೀರಾ? ಕ್ಷಣದಲ್ಲೇ ನಿಮ್ಮ ಅಕೌಂಟ್ ಖಾಲಿ ಆಗುತ್ತೆ ಹುಷಾರ್..!
ಏಷ್ಯಾ XI ಮತ್ತು ಆಫ್ರಿಕಾ XI ತಂಡಗಳು ಆಫ್ರೋ-ಏಷ್ಯಾ ಕಪ್‌ನಲ್ಲಿ ಮುಖಾಮುಖಿ ಆಗುತ್ತವೆ. 2005ರಲ್ಲಿ ಮೊದಲು ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಆಡಿಸಲಾಯಿತು. 2007ರಲ್ಲಿ ಭಾರತ ಕೂಡ ಆಯೋಜಿಸಿತ್ತು. ಮೂರನೇ ಆವೃತ್ತಿಯನ್ನು 2009ರಲ್ಲಿ ಕೀನ್ಯಾದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆ ವರ್ಷ ಆಫ್ರೋ-ಏಷ್ಯಾ ಕಪ್ ನಡೆಸಲು ಸಾಧ್ಯವಾಗಲಿಲ್ಲ. ಈ ಪಂದ್ಯಾವಳಿ ತುಂಬಾ ವಿಶೇಷವಾಗಿದ್ದು, ಭಾರತ ಮತ್ತು ಪಾಕಿಸ್ತಾನಿ ಆಟಗಾರರು ಒಟ್ಟಿಗೆ ಆಡುವುದನ್ನು ಕಾಣಬಹುದಾಗಿದೆ.
ಎಸಿಎ ಹಂಗಾಮಿ ಅಧ್ಯಕ್ಷ ತವೆಂಗಾ ಮುಕುಲಾನಿ ಮಾಹಿತಿ ನೀಡಿ.. ಕ್ರಿಕೆಟ್‌ನಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸುವುದರ ಜೊತೆಗೆ, ಆಫ್ರೋ-ಏಷ್ಯಾ ಕಪ್ ಎರಡೂ ತಂಡಗಳಿಗೆ ಆರ್ಥಿಕವಾಗಿ ಲಾಭದಾಯಕ. ನಾವು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಆಫ್ರಿಕನ್ ಕ್ರಿಕೆಟ್ ಅಸೋಸಿಯೇಷನ್‌ಗಳನ್ನೂ ಸಂಪರ್ಕಿಸಿದ್ದೇವೆ. ಅವರೆಲ್ಲರೂ ಆಫ್ರೋ-ಏಷ್ಯಾ ಕಪ್ ಪುನರಾರಂಭಿಸುವ ಪರವಾಗಿದ್ದಾರೆ ಎಂದಿದ್ದಾರೆ.
2005ರಲ್ಲಿ ನಡೆದ ಮೂರು ಪಂದ್ಯಗಳ ಸರಣಿಯು 1-1 ಡ್ರಾದಲ್ಲಿ ಕೊನೆಗೊಂಡಿತು. ವೀರೇಂದ್ರ ಸೆಹ್ವಾಗ್, ಶಾಹಿದ್ ಅಫ್ರಿದಿ ಮತ್ತು ಸನತ್ ಜಯಸೂರ್ಯ ಒಟ್ಟಿಗೆ ಆಡಿದ್ದರು. 2007ರಲ್ಲಿ ಏಷ್ಯಾ XI ಆಫ್ರಿಕಾ XI ತಂಡವನ್ನು 3-0 ಅಂತರದಿಂದ ಸೋಲಿಸಿತ್ತು. ಶೋಯೆಬ್ ಅಖ್ತರ್, ಎಂಎಸ್ ಧೋನಿ, ಜಹೀರ್ ಖಾನ್ ಮತ್ತು ಮೊಹಮ್ಮದ್ ಆಸಿಫ್ ಅವರಂತಹ ದಿಗ್ಗಜರು ಪ್ರದರ್ಶನ ನೀಡಿದ್ದರು.
ಇದನ್ನೂ ಓದಿ:ಟ್ರಂಪ್ ಭದ್ರಕೋಟೆಯಲ್ಲಿ ಕಮಲಾ ಹ್ಯಾರಿಸ್ಗೆ ಗೆಲುವು; ಅಮೆರಿಕ ಅಧ್ಯಕ್ಷರಾಗೋದು ಯಾರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ