newsfirstkannada.com

10 ವರ್ಷದ ಬಳಿಕ ಉಡುಪಿಯಲ್ಲಿ ಮತ್ತೆ ನಕ್ಸಲರಾ.. ಅರಣ್ಯದಲ್ಲಿ ಓಡಾಡಿದ ಆ ನಾಲ್ವರು ಯಾರಿರಬಹುದು?

Share :

Published February 7, 2024 at 7:23am

    ಹಿಂದೆ ನಕ್ಸಲ್ ನಾಯಕ ಸಾಕೆತ್ ರಾಜನ್ ಎನ್‌ಕೌಂಟರ್‌ಗೆ ಬಲಿ

    ಕೇರಳದಲ್ಲಿ ನಕ್ಸಲ್ ವಿರುದ್ಧ ಎನ್‌ಕೌಂಟರ್‌ಗಳು ಹೆಚ್ಚಾಗುತ್ತಿವೆ

    ಕರಾವಳಿ-ಮಲೆನಾಡಲ್ಲಿ ಮತ್ತೆ ಕಾಣಿಸಿದ ನಕ್ಸಲರ ಚಲನವಲನ?

ನಿರಂತರ ಕಾರ್ಯ ಚಟುವಟಿಕೆ ನಡೆಸುತ್ತಿದ್ದ ನಕ್ಸಲರು ಪೊಲೀಸರ ನಿದ್ದೆಗೆಡಿಸಿದ್ದರು. ಆದ್ರೆ ಉಡುಪಿ ಭಾಗದಲ್ಲಿ ನಕ್ಸಲರ ಚಟುವಟಿಕೆಗಳು ಸ್ಥಗಿತಗೊಂಡು 10 ವರ್ಷ ಕಳೆಯಿತು. ಕೇರಳ ಭಾಗದಲ್ಲಿ ನಕ್ಸಲ್ ವಿರುದ್ಧದ ಕಾರ್ಯಾಚರಣೆ, ಎನ್‌ಕೌಂಟರ್‌ಗಳು ಹೆಚ್ಚಾಗಿದೆ. ಹೀಗಾಗಿ ನಕ್ಸಲರು ಮತ್ತೆ ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಕ್ಕೆ ಬಂದಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

10 ವರ್ಷದಿಂದ ತಟಸ್ಥರಾಗಿದ್ದ NNF ಪೊಲೀಸರು ಅಲರ್ಟ್​

ಕರಾವಳಿ ಮತ್ತು ಮಲೆನಾಡನ್ನು ಆವರಿಸಿರುವ ಉಡುಪಿ ಜಿಲ್ಲೆಯಲ್ಲಿ ಮತ್ತೆ ನಕ್ಸಲರ ಹೆಜ್ಜೆ ಸಪ್ಪಳ ಕೇಳಿ ಬಂದಿದ್ಯಂತೆ. ಹೀಗಂಥ ಗ್ರಾಮಸ್ಥರು ಮಾತನಾಡಿಕೊಳ್ತಿದ್ದು, ಕಳೆದ ಕೆಲ ವರ್ಷಗಳಿಂದ ತಣ್ಣಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿದೆ ಎಂಬ ಅನುಮಾನ ಕಾಡತೊಡಗಿದೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮುದೂರು, ಜಡ್ಕಲ್‌ ಹಾಗೂ ಬೆಳ್ಕಲ್ ಭಾಗದಲ್ಲಿ ಮತ್ತೆ ನಕ್ಸಲ್‌ ಚಟುವಟಿಕೆ ಶುರುವಾಗಿದೆ. 4 ಮಂದಿ ಹಸಿರು ಬಣ್ಣದ ಯೂನಿಫಾರಂ ಮಾದರಿಯ ಉಡುಗೆ ತೊಟ್ಟ ಸಶಸ್ತ್ರಧಾರಿಗಳು ಅರಣ್ಯ ಭಾಗದಲ್ಲಿ ಅಡ್ಡಾಡಿದ್ದಾರೆ. ನಾಲ್ವರ ಪೈಕಿ, ಇಬ್ಬರು ಶಸ್ತ್ರ ಹೊಂದಿದ್ದು, ಇಲ್ಲಿನ ಜನರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ್ದಾರೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಇವರು ನಕ್ಸಲರೇ ಇರಬಹುದು ಎಂಬ ಅನುಮಾನವನ್ನು ಸ್ಥಳೀಯ ಕೆಲವು ಜನರು ವ್ಯಕ್ತಪಡಿಸಿದ್ದಾರೆ.

ದಶಕದ ಹಿಂದೆ ಫೆಬ್ರವರಿ 6 ರಂದು, ನಕ್ಸಲ್ ನಾಯಕ ಸಾಕೆತ್ ರಾಜನ್ ಎನ್‌ಕೌಂಟರ್‌ಗೆ ಬಲಿಯಾಗಿದ್ದ. ಇದೇ ದಿನದ ಆಸುಪಾಸು ಸಂಶಯಾಸ್ಪದ ಚಲನವಲನ ಕಂಡುಬಂದಿರುವುದು ವದಂತಿಗೆ ಪುಷ್ಟಿ ನೀಡುತ್ತಿದೆ. ಇನ್ನು ಉಡುಪಿಯಲ್ಲಿ ನಕ್ಸಲರ ಚಟುವಟಿಕೆಗಳನ್ನು ನೋಡೋದಾದ್ರೆ..

  • ಕುಂದಾಪುರದ ಬಸ್ರಿ ಬೇರಿನಲ್ಲಿ ಮೊದಲ ಬಾರಿಗೆ ನಕ್ಸಲರು ಪ್ರತ್ಯಕ್ಷ
  • 2003ರಲ್ಲಿ ಕಾರ್ಕಳದ ಈದುವಿನಲ್ಲಿ‌ ಮೊದಲ ನಕ್ಸಲ್ ಎನ್‌ಕೌಂಟರ್
  • ಶಂಕಿತ ನಕ್ಸಲರಾದ ಪಾರ್ವತಿ‌ ಮತ್ತು ಹಾಜಿಮಾ ಹತ್ಯೆ ಮಾಡಲಾಗಿತ್ತು
  • 2005ರಲ್ಲಿ ದೇವರಬಾಳುನಲ್ಲಿ ಅಜಿತ್ ಕುಸುಬಿ‌ ಮತ್ತು ಉಮೇಶ್ ಹತ್ಯೆ
  • 2005 ಜುಲೈ 28ರಂದು ಹೆಬ್ರಿಯ ಮತ್ತಾವುನಲ್ಲಿ ನೆಲಬಾಂಬ್ ಸ್ಫೋಟ
  • 2008 ಮೇ15 ಸೀತಾನದಿ ಭೋಜ ಶೆಟ್ಟಿ ಮತ್ತು ಸುರೇಶ್ ಶೆಟ್ಟಿ ಹತ್ಯೆ
  • 2008 ಡಿಸೆಂಬರ್ 7ರಲ್ಲಿ ಹಳ್ಳಿಹೊಳೆ ರೈತನ ಹತ್ಯೆ ಮಾಡಿದ್ದ ನಕ್ಸಲರು
  • 2010 ಮಾರ್ಚ್‌ 1ರಂದು ಶಂಕಿತ ನಕ್ಸಲ್ ವಸಂತ ಎಂಬಾತನ ಹತ್ಯೆ
  • 2011 ಡಿ.29 ನಾಡ್ಪಾಲ್‌ನಲ್ಲಿ ಪೊಲೀಸ್‌ ಮಾಹಿತಿದಾರನ ಕೊಲೆ

ಒಂದು ಕಾಲದಲ್ಲಿ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ನಿರಂತರ ಕಾರ್ಯ ಚಟುವಟಿಕೆ ನಡೆಸುತ್ತಿದ್ದ ನಕ್ಸಲರು ಪೊಲೀಸರ ನಿದ್ದೆಗೆಡಿಸಿದ್ದರು. ಆದ್ರೆ ಉಡುಪಿ ಭಾಗದಲ್ಲಿ ನಕ್ಸಲರ ಚಟುವಟಿಕೆಗಳು ಸ್ಥಗಿತಗೊಂಡು 10 ವರ್ಷ ಕಳೆಯಿತು. ಕೇರಳ ಭಾಗದಲ್ಲಿ ನಕ್ಸಲ್ ವಿರುದ್ಧದ ಕಾರ್ಯಾಚರಣೆ, ಎನ್‌ಕೌಂಟರ್‌ಗಳು ಹೆಚ್ಚಾಗಿದೆ. ಹೀಗಾಗಿ ನಕ್ಸಲರು ಮತ್ತೆ ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಕ್ಕೆ ಬಂದಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಸದ್ಯ ಆ ನಾಲ್ವರು ನಕ್ಸಲರೇ ಇರಬಹುದು ಎಂಬ ಅನುಮಾನವನ್ನು ಸ್ಥಳೀಯ ಜನರು ವ್ಯಕ್ತಪಡಿಸಿದ್ದಾರೆ ಹೀಗಾಗಿ ಇಷ್ಟು ದಿನ ತಟಸ್ಥವಾಗಿದ್ದ ಎಎನ್ಎಫ್ ಪೊಲೀಸರು ಮತ್ತೆ ಸಕ್ರಿಯರಾಗಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

10 ವರ್ಷದ ಬಳಿಕ ಉಡುಪಿಯಲ್ಲಿ ಮತ್ತೆ ನಕ್ಸಲರಾ.. ಅರಣ್ಯದಲ್ಲಿ ಓಡಾಡಿದ ಆ ನಾಲ್ವರು ಯಾರಿರಬಹುದು?

https://newsfirstlive.com/wp-content/uploads/2024/02/UDP_Naxalite.jpg

Load More