newsfirstkannada.com

ಸಿನಿಮಾ ಬಳಿಕ ಒಟ್ಟಿಗೆ ಸಂಸತ್​ಗೆ ಎಂಟ್ರಿಕೊಟ್ಟ ಕಂಗನಾ, ಚಿರಾಗ್​.. ಹೇಗಿತ್ತು ಇಬ್ಬರ ಕೆಮಿಸ್ಟ್ರಿ?

Share :

Published June 7, 2024 at 6:13am

  ತೆರೆ ಮೇಲೆ ಲವರ್ಸ್​ ಆಗಿ ಕಾಣಿಸಿಕೊಂಡಿದ್ದರು ಸಂಸತ್ ಮೆಟ್ಟಿಲೇರಲು ರೆಡಿ

  ಬಾಲಿವುಡ್​ ಖ್ಯಾತ ನಟಿ ಕಂಗನಾರನ್ನು ಲವ್​ ಮಾಡುತ್ತಿದ್ರಾ ಚಿರಾಗ್ ಪಾಸ್ವಾನ್

  13 ವರ್ಷಗಳ ಮೊದಲು ಮತ್ತೆ ಒಂದಾದ ಚಿರಾಗ್ ಪಾಸ್ವಾನ್ ಹಾಗೂ ನಟಿ ಕಂಗನಾ

2024 ರ ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್ 4 ರಂದು ಹೊರಬಿದ್ದಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಹಲವು ಸಿನಿಮಾ ತಾರೆಯರು ಚುನಾವಣೆಗೆ ಸ್ಪರ್ಧಿಸಿದ್ದರು. ಅದರಲ್ಲಿ ಬಹುತೇಕ ಸಿನಿಮಾ ತಾರೆಯರು ಗೆಲುವಿನ ಸಾಧಿಸಿದ್ದಾರೆ. ಆದರೆ ಇದೀಗ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಇಬ್ಬರ ನಟ ನಟಿ ಇಬ್ಬರು ಒಟ್ಟಿಗೆ ಸಿನಿಮಾದಲ್ಲಿ ನಟಿಸಿದ್ರು. ಇದೀಗ ಆ ಇಬ್ಬರು ಒಟ್ಟಾಗಿ ಸಂಸತ್ ಮೆಟ್ಟಿಲು ಏರಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: VIDEO: ಏರ್‌ಪೋರ್ಟ್‌ನಲ್ಲಿ ಕಂಗನಾ ರನೌತ್‌ಗೆ ಕಪಾಳ ಮೋಕ್ಷ; ಅಸಲಿಗೆ ಆಗಿದ್ದೇನು?

ಹೌದು, ಬಾಲಿವುಡ್​ ಖ್ಯಾತ ನಟಿ ಕಂಗನಾ ರಣಾವತ್​ ಮತ್ತು ನಟ ಚಿರಾಗ್ ಪಾಸ್ವಾನ್ 2024ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಅವರು ಲೋಕಸಭೆ ಚುನಾವಣೆಯಲ್ಲಿ ಹಾಜಿಪುರದಲ್ಲಿ  ಕ್ಷೇತ್ರದಲ್ಲಿ 53.3% ಭರ್ಜರಿ ಮತಗಳಿಸಿ ದಲಿತ ಐಕಾನ್ ಎಂದು ಹೊರ ಹೊಮ್ಮಿದ್ದಾರೆ.  ಇತ್ತ ಮಂಡಿ ಕ್ಷೇತ್ರದಿಂದ ಕಂಗನಾ ರಣಾವತ್ ಗೆದ್ದು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಇಬ್ಬರು ಸುಮಾರು 13 ವರ್ಷಗಳ ಬಳಿಕ ಮತ್ತೆ ಸಂಸತ್​ಗೆ ಎಂಟ್ರಿ ಕೊಡಲಿದ್ದಾರೆ.

ಆದರೆ ಈ ಹಿಂದೆ 2011ರಲ್ಲಿ, ತನ್ವೀರ್ ಖಾನ್ ನಿರ್ದೇಶನದಲ್ಲಿ ಮೂಡಿ ಬಂದ ಮಿಲೇ ನಾ ಮಿಲೇ ಹಮ್ ಎಂಬ ಸಿನಿಮಾದಲ್ಲಿ ಚಿರಾಗ್ ಪಾಸ್ವಾನ್ ಅಭಿನಯಿಸಿದ್ದರು. ಇದೇ ಸಿನಿಮಾದಲ್ಲಿ ಕಂಗನಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ನಟಿ ನೀರು ಬಾಜ್ವಾ ಮತ್ತು ಚಕ್ ದೇ ಇಂಡಿಯಾ ತಾರೆ ಸಾಗರಿಕಾ ಘಾಟ್ಗೆ ಕೂಡ ಅಭಿನಯಿಸಿದ್ದರು. ಇನ್ನು, ಈ ಸಿನಿಮಾದಲ್ಲಿ ಚಿರಾಗ್ ನಟಿ ಕಂಗನಾ ಬಾಯ್ ಫ್ರೆಂಡ್​ ಆಗಿ ಬಣ್ಣ ಹಚ್ಚಿದ್ದರು. ಆದರೆ ಸಿನಿಮಾ ರಿಲೀಸ್​ ಆಗಿ ಕೆಲವೇ ದಿನಕ್ಕೆ ಮಕಾಡೆ ಮಲಗಿತು. ಈ ಸಿನಿಮಾ ಸೋಲಿನ ಬಳಿಕ ಚಿರಾಗ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಈ ಮಧ್ಯೆ ಕಂಗನಾ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಗಳಿಸಿದರು. ಆದರೆ ಇದೀಗ ಕಾಕತಾಳೀಯವಾಗಿ ಈ ಇಬ್ಬರು ಮೊದಲ ಬಾರಿಗೆ ಜನಶಕ್ತಿ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಚಿರಾಗ್ ಮತ್ತು ಕಂಗನಾ ಎನ್‌ಡಿಎಯ ಒಂದೇ ಸಂಸತ್​ಗೆ ಎಂಟ್ರಿ ಕೊಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿನಿಮಾ ಬಳಿಕ ಒಟ್ಟಿಗೆ ಸಂಸತ್​ಗೆ ಎಂಟ್ರಿಕೊಟ್ಟ ಕಂಗನಾ, ಚಿರಾಗ್​.. ಹೇಗಿತ್ತು ಇಬ್ಬರ ಕೆಮಿಸ್ಟ್ರಿ?

https://newsfirstlive.com/wp-content/uploads/2024/06/kangana2.jpg

Load More