262 ಕೋಟಿ ರೂ. ಲಾಭ.. 17 ವರ್ಷದ ಬಳಿಕ ಗ್ರೇಟ್ ನ್ಯೂಸ್ ಕೊಟ್ಟ BSNL; ಇದು ಹೇಗಾಯ್ತು?

author-image
admin
Updated On
262 ಕೋಟಿ ರೂ. ಲಾಭ.. 17 ವರ್ಷದ ಬಳಿಕ ಗ್ರೇಟ್ ನ್ಯೂಸ್ ಕೊಟ್ಟ BSNL; ಇದು ಹೇಗಾಯ್ತು?
Advertisment
  • ಕಳೆದ 17 ವರ್ಷದಿಂದ BSNL ಲಾಸ್​​... ಲಾಸ್​​.. ಲಾಸ್​​​!
  • ಮೊದಲ ಬಾರಿಗೆ ತ್ರೈಮಾಸಿಕವೊಂದರಲ್ಲಿ BSNL​ ಭರ್ಜರಿ ಲಾಭ
  • 262 ಕೋಟಿ ರೂಪಾಯಿ ಲಾಭವನ್ನ ಕಾಣೋಕೆ ಸಾಧ್ಯವಾಗಿದ್ದು ಹೇಗೆ?

ನವದೆಹಲಿ: ಲಾಸ್​​. ಲಾಸ್​​... ಲಾಸ್​​. BSNL​ ಹೆಸರಿಗೂ ಲಾಸ್​ ಅನ್ನೋ ಪದಕ್ಕೂ ಅದೇನು ಸಂಬಂಧಾನೋ ಏನೋ? ಕಳೆದ 17 ವರ್ಷದಿಂದ ಲಾಸ್​​... ಲಾಸ್​​.. ಲಾಸ್​​​.. ಆದ್ರೆ, ಕಹಾನಿ ಮೇ ಟ್ವಿಸ್ಟ್​​ ಅನ್ನೋ ರೀತಿ, ಒಂದು ಸರ್ಪೈಸ್​ ಜೊತೆಗೆ ಶುಭ ಸುದ್ದಿಯೊಂದು ಬ್ರೇಕಿಂಗ್​​ ನ್ಯೂಸ್​​ನಂತೆ ಹೊರಬಂದಿದೆ. ಸರ್ಕಾರಿ ಒಡೆತನದ ಬಿಎಸ್​​ಎನ್​​​ಎಲ್​​ಗೆ ಲಾಸ್​​ ಅನ್ನೋ ವನವಾಸ ಅಂತ್ಯವಾಗಿದ್ದು, ಕೊನೆಗೂ ಲಾಭದತ್ತ ಮುಖ ಮಾಡಿದೆ. ಬಿಎಸ್​​ಎನ್​​ಎಲ್​​ ಸುಮಾರು 2 ದಶಕಗಳ ಹೊಡೆತದಿಂದ ಪುಟಿದೆದ್ದಿದ್ದು ಮೊದಲ ಬಾರಿಗೆ 17 ವರ್ಷಗಳ ನಂತರ ಲಾಭ ಗಳಿಸಿದ್ದೀವಿ ಅಂತಾ ಹೆಮ್ಮೆಯಿಂದ ಹೇಳಿಕೊಂಡಿದೆ.

publive-image

ಸರ್ಕಾರಿ ಸ್ವಾಮ್ಯದ ಟೆಲಿಕಾಮ್ ಸಂಸ್ಥೆ, ಭಾರತ ಸಂಚಾರ ನಿಗಮ ಈ ತ್ರೈಮಾಸಿಕ ಅಂದ್ರೆ, 2024-25ರ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ, 17 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಲಾಭವನ್ನ ಕಂಡಿದೆ. ಬಿಎಸ್​ಎನ್ಎಲ್ ಕೊನೆ ಬಾರಿ ಲಾಭವನ್ನ ಮಾಡಿದ್ದು, 2007ರಲ್ಲಿ. ಸರಿಸುಮಾರು 262 ಕೋಟಿ ರೂಪಾಯಿ ಲಾಭವನ್ನ ತ್ರೈಮಾಸಿಕದಲ್ಲಿ ಮಾಡಿರೋದಾಗಿ BSNL ಘೋಷಿಸಿದೆ.
- ಜ್ಯೋತಿರಾದಿತ್ಯ ಸಿಂಧಿಯಾ, ಸಂವಹನ ಇಲಾಖೆ ಸಚಿವ

17 ವರ್ಷಗಳು ಅಂದ್ರೆ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಆದ್ಮೇಲೆ ಇದೇ ಮೊದಲ ಬಾರಿಗೆ ತ್ರೈಮಾಸಿಕವೊಂದರಲ್ಲಿ BSNL​ ಭರ್ಜರಿ ಲಾಭವನ್ನ ಗಳಿಸಿದೆ. ಅದೂ ಒಂದೆರಡು ಕೋಟಿಯಲ್ಲ 262 ಕೋಟಿ ರೂಪಾಯಿ ಲಾಭವನ್ನ BSNL ಘೋಷಿಸಿದೆ. ಇದನ್ನ ನೋಡಿದ್ಮೇಲೆ ಈ ಬಾರಿಯ ಆದಾಯವೂ ಹೆಚ್ಚಳವಾಗಬಹುದು, ಜೊತೆಗೆ BSNL ಅನುಭವಿಸುತ್ತಿದ್ದ ನಷ್ಟದ ಪ್ರಮಾಣವೂ ಕಡಿಮೆ ಆಗಬಹುದು ಅನ್ನೋ ನಿರೀಕ್ಷೆಯನ್ನ ಭಾರತ ಸಂಚಾರ ನಿಗಮ ಹೊಂದಿದೆ. ಹಾಗಿದ್ರೆ 17 ವರ್ಷಗಳಿಂದ ಬರೀ ಲಾಸ್​ನೇ ನೋಡ್ತಿದ್ದ BSNL ಈ ಬಾರಿ ಇಷ್ಟು ದೊಡ್ಡ ಲಾಭವನ್ನ ಗಳಿಸೋಕೆ ಸಾಧ್ಯವಾಗಿದ್ದು, ಹೇಗೆ? ಈ ಪ್ರಶ್ನೆಗೆ ಉತ್ತರ, BSNL​ನ ಕೆಲ ಬ್ಯುಸಿನೆಸ್ ಸ್ಟ್ರಾಟರ್ಜಿಗಳು.

publive-image

ಬಿಎಸ್​ಎನ್​ಎಲ್​ಗೆ ಸದ್ಯ ಹೊಸ ವೇಗ ಸಿಕ್ಕಿದ್ದು, ತನ್ನ ನೆಟ್​ವರ್ಕ್ ವ್ಯಾಪ್ತಿಯನ್ನ ವಿಸ್ತರಿಸಿಕೊಳುತ್ತಿದೆ. ಜೊತೆಗೆ ಅನಾವಶ್ಯಕ ಖರ್ಚುಗಳನ್ನ ಕೂಡ ಕಡಿಮೆ ಮಾಡಿದೆ ಮತ್ತು ತನ್ನ ಬ್ಯುಸಿನೆಸ್​ನ ಎಲ್ಲಾ ಸೆಗ್​ಮೆಂಟ್​ಗಳಲ್ಲೂ ಅಭಿವೃದ್ಧಿಯನ್ನ ಕಂಡಿದೆ. ಗ್ರಾಹಕರಿಗೆ ನೀಡುವ ಸೇವೆಯಲ್ಲೂ ಸಾಕಷ್ಟು ಬದಲಾವಣೆಗಳನ್ನ ತಂದಿದೆ. ಇದೇ ಕಾರಣಕ್ಕೆ ಈ ಬಾರಿ 262 ಕೋಟಿ ರೂಪಾಯಿ ಲಾಭವನ್ನ ಕಾಣೋಕೆ ಸಾಧ್ಯವಾಗಿದ್ದು. ಇದೇ BSNL ಡಿಸೆಂಬರ್​ ತಿಂಗಳ ವರದಿಯಲ್ಲಿ ಬರೋಬ್ಬರಿ 1,5699.22 ಕೋಟಿ ನಷ್ಟವನ್ನ ಅನುಭವಿಸಿದ್ದಾಗಿ ಹೇಳಿತ್ತು. ಆದ್ರೆ ಈಗ ಮಿಂಚಿನ ವೇಗ ಪಡೆಯೋಕೆ ಕಾರಣ, ಬಿಎಸ್​ಎನ್​ಎಲ್​ ಮಾಡ್ಕೊಂಡ ಹಲವು ಬದಲಾವಣೆಗಳು.

publive-image

ಲಾಭ ಮಾಡಿದ್ದು ಹೇಗೆ BSNL?
ಬಿಎಸ್​ಎನ್​ಎಲ್​ನ ಫೈನಾನ್ಸ್ ಕಾಸ್ಟ್ ಇದರ ಜೊತೆಗೆ ನಿಗಮದಲ್ಲಿ ಆಗುತ್ತಿದ್ದ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲಾಗಿದೆ. ಇದು ಬ್ಯುಸಿನೆಸ್​ಗೆ ಬೂಸ್ಟ್ ಕೊಟ್ಟಿದ್ದು, BSNL ತನ್ನ ಮೊಬಿಲಿಟಿ ಸರ್ವೀಸ್​ನ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 15ರಷ್ಟು ಹೆಚ್ಚಳವನ್ನ ಕಂಡಿದೆ. ಫೈಬರ್ ಟು ಹೋಮ್ ಆದಾಯ ಶೇಕಡ 18ರಷ್ಟು ಮತ್ತು ಲೀಸ್​ ಲೈನ್ ಸರ್ವೀಸ್​ನ ಆದಾಯ ಶೇಕಡ 14ರಷ್ಟು ಹೆಚ್ಚಳವಾಗಿದೆ. ಇನ್ನು, ತನ್ನ ನೆಟ್​ವರ್ಕ್ ವಿಸ್ತರಣೆಯ ಭಾಗವಾಗಿ ಹಿಮದಿಂದಲೇ ತುಂಬಿರುವ ಸಿಯಾಚಿನ್ ಗಡಿಯಿಂದ ಹಿಡಿದು ದಕ್ಷಿಣದ ಕೊನೆಯಲ್ಲಿರುವ ಕನ್ಯಾಕುಮಾರಿವರೆಗೂ BSNL ವ್ಯಾಪಿಸಿಕೊಂಡಿದೆ. ಇದೀಗ 5ಜಿ ನೆಟ್​ವರ್ಕ್​ಗೆ ಅಪ್​ಗ್ರೇಡ್ ಆಗೋದರತ್ತ ಬಿಎಸ್​ಎನ್​ಎಲ್​ ತನ್ನ ಸಿದ್ಧತೆಯನ್ನ ನಡೆಸ್ತಿದೆ. ಇದರಿಂದ ನಿಗಮದ ಆದಾಯ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದ್ದು, ಆರ್ಥಿಕ ವರ್ಷ ಮುಗಿಯೋದ್ರೊಳಗೆ ಅಂದ್ರೆ ಮಾರ್ಚ್ ಅಂತ್ಯದೊಳಗೆ ಇದು ಶೇಕಡ 20ಕ್ಕಿಂತ ಹೆಚ್ಚಾಗುತ್ತೆ ಅಂತ ಅಂದಾಜಿಸಲಾಗಿದೆ.

ಇದನ್ನೂ ಓದಿ: ಕರೆಂಟ್​​ ಬೇಡ; ಬಿಸಿಲು ಸಾಕು; ಒಮ್ಮೆ ರೀಚಾರ್ಜ್​ ಮಾಡಿದ್ರೆ 5 ದಿನ ಬರುತ್ತೆ ಈ ಪವರ್​ ಬ್ಯಾಂಕ್​​ 

ಸದ್ಯ ದೇಶದ ಮೂಲೆ ಮೂಲೆಯಲ್ಲೂ ಬಿಎಸ್​ಎನ್​ಎಲ್ 4ಜಿ ನೆಟ್​ವರ್ಕ್ ಸಿಗ್ತಿದ್ದು, ಕೆಲವೆಡೆ 5ಜಿ ಸೇವೆಗಳನ್ನ ಶುರು ಮಾಡೋದಕ್ಕೆ ಪ್ಲಾನ್ ಸಿದ್ಧವಾಗಿದೆ. ಸದ್ಯದ ಬಿಎಸ್​ಎನ್​ಎಲ್​ನ ವೇಗ, ಇದೇ ರೀತಿ ಮುಂದುವರಿದ್ರೆ, ಲಾಸ್​ನಲ್ಲಿರುವ ನಿಗಮ, ಸಂಪೂರ್ಣವಾಗಿ ಲಾಭದತ್ತ ಸಾಗೋದ್ರಲ್ಲಿ ಅನುಮಾನವೇ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment