/newsfirstlive-kannada/media/post_attachments/wp-content/uploads/2025/05/tmk-love-fake.jpg)
ಬೆಂಗಳೂರು: ಪ್ರೀತ್ಸೆ.. ಪ್ರೀತ್ಸೆ ಅಂತ ಹಿಂದೆ ಬಿದ್ದವನು ಮದುವೆಯಾಗಿ 3 ತಿಂಗಳಿಗೆ ಪರಾರಿಯಾಗಿರೋ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಎಂಟು ದಿನ ಮುಂಚೆಯೇ ಮುಂಗಾರು ಎಂಟ್ರಿ.. ಕರ್ನಾಟಕಕ್ಕೆ ಮುಂಗಾರಿನ ಅಭಿಷೇಕ ಯಾವಾಗ..?
ಹೌದು, ಕುಣಿಗಲ್ ಮೂಲದ ಯುವತಿ ಬೆಂಗಳೂರಿನ ಖಾಸಗಿ ಮಾಲ್ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಹೇಮಂತ್ ಕುಮಾರ್ ಎಂಬಾತ ಆಕೆಗೆ ಪರಿಚಯ ಆಗಿದ್ದ. ನಂತರ ಈ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿಕೊಂಡಿದೆ. ಆ ಪ್ರೀತಿಗೆ ಸಾಕ್ಷಿ ಎಂಬಂತೆ ಕಳೆದ ಫೆಬ್ರವರಿಯಲ್ಲಿ ಇಬ್ಬರು ಮದುವೆಯಾಗಿದ್ದರು. ಮದುವೆ ನಂತರ ಸ್ನೇಹಿತನ ರೂಮಿನಲ್ಲಿ ಇಬ್ಬರು ಸಂಸಾರ ಮಾಡಿದ್ದರಂತೆ. ಆದ್ರೆ ಮಹಿಳೆಯ ಚಾರಿತ್ರ್ಯ ಸರಿ ಇಲ್ಲ ಅಂತ ಹೇಮಂತ್ ಹೇಳಿದ್ದಾನಂತೆ.
ಅಲ್ಲದೇ ಹಣಕ್ಕಾಗಿ ಕಿರುಕುಳ ಕೊಟ್ಟು ಪತಿಯಿಂದ ದೂರ ಮಾಡಿದ್ದಾರೆ. ಹೊಸ ಮನೆ ಮಾಡೋದಾಗಿ ಹಣ ಮತ್ತು ಚಿನ್ನ ಪಡೆದಿದ್ದಾನೆ. ನನಗೆ ನೀನೇ ಬೇಕು ಅಂದ್ರೆ ದರ್ಶನ್ ರೀತಿ ಕೊಲೆ ಮಾಡ್ತೀನಿ ಎಂದು ಬೆದರಿಕೆ ಹಾಕಿದ್ದಾನೆ ಅಂತ ಸಂತ್ರಸ್ತೆ ಆರೋಪ ಮಾಡಿದ್ದಾಳೆ. ಸದ್ಯ ಈ ಸಂಬಂಧ ಪಶ್ಚಿಮ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ