/newsfirstlive-kannada/media/post_attachments/wp-content/uploads/2025/01/China-Health-Emergency.jpg)
ಕೊರೊನಾ ಜೀವ ಹಿಂಡಿದ 5 ವರ್ಷದ ಬಳಿಕ ಮತ್ತೊಮ್ಮೆ ಚೀನಾದ ವೈರಸ್‌ಗಳು ಜಗತ್ತಿಗೆ ಭಯ ಸೃಷ್ಟಿಸಿದೆ. ಈ ಬಾರಿ ಒಂದಲ್ಲ, ಅನೇಕ ವೈರಸ್‌ಗಳು ಚೀನಾ ದೇಶಾದ್ಯಂತ ಅತ್ಯಂತ ವೇಗವಾಗಿ ಹರಡುತ್ತಿದೆ ಅನ್ನೋ ವರದಿಯಾಗಿದೆ. ಕೋವಿಡ್, ಇನ್ ಪ್ಲೂಯೆಂಜಾ A, HMPV, ಮೈಕೋ ಪ್ಮಾಸ್ಲಾ ನ್ಯೂಮೋನಿಯಾ ವೈರಸ್ ಹರಡುತ್ತಿರೋದ್ರಿಂದ ಚೀನಾದಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಲಾಗಿದೆ.
ಈಗಾಗಲೇ ಚೀನಾದ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಾ ಇದೆ. ಚೀನಾದ ಆರೋಗ್ಯ ಇಲಾಖೆ ಅಧಿಕಾರಿಗಳು ವೈರಸ್ ಹರಡುವಿಕೆ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಚೀನಾ ಜನರು ಮತ್ತೊಮ್ಮೆ ಸಾಂಕ್ರಾಮಿಕ ರೋಗದ ಕಾಟದಿಂದ ತತ್ತರಿಸುತ್ತಿದ್ದು, ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ.
ರಾಯಿಟರ್ಸ್ ವರದಿ ಪ್ರಕಾರ, ಚೀನಾದ ಉತ್ತರ ಪ್ರಾಂತ್ಯದಲ್ಲಿ 14 ವರ್ಷದೊಳಗಿನ ಮಕ್ಕಳಲ್ಲಿ ಈ HMPV ವೈರಸ್ ಹರಡುತ್ತಿದೆ. ಎಚ್‌ಎಂಪಿವಿ ಅನ್ನು 2001ರಲ್ಲಿ ಮೊದಲ ಬಾರಿಗೆ ಸಂಶೋಧನೆ ಮೂಲಕ ಪತ್ತೆ ಮಾಡಲಾಗಿತ್ತು.
HMPV ಅಂದರೆ ಹ್ಯೂಮನ್ ಮೆಟಪನ್ಯೂಮೋ ವೈರಸ್ ಎಂದರ್ಥ. 14 ವರ್ಷದೊಳಗಿನ ಮಕ್ಕಳಲ್ಲಿ ಎಚ್‌ಎಂಪಿವಿ ಕೇಸ್‌ಗಳು ಹೆಚ್ಚಾಗಿ ಕಂಡು ಬಂದಿದೆ. ಎಚ್‌ಎಂಪಿವಿಯಿಂದ ಜ್ವರ, ಕೋವಿಡ್ ಲಕ್ಷಣಗಳೇ ರೋಗಿಗಳಲ್ಲಿ ಇರುತ್ತವೆ. ಮಕ್ಕಳ ಆಸ್ಪತ್ರೆಯಲ್ಲಿ ನ್ಯೂಮೋನಿಯಾ, ವೈಟ್ ಲಂಗ್ಸ್ ಅನಾರೋಗ್ಯದ ಕೇಸ್‌ಗಳೇ ಹೆಚ್ಚು ಕಂಡು ಬರುತ್ತಿದೆ.
ಎಚ್‌ಎಂಪಿವಿಗೆ ಸದ್ಯ ಚೀನಾದಲ್ಲಿ ಯಾವುದೇ ವ್ಯಾಕ್ಸಿನ್ ಇಲ್ಲ ಎಂದು ಶಾಂಘೈ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ನ್ಯೂಮೋನಿಯಾದ ಮೂಲ ಯಾವುದೆಂದು ಗೊತ್ತಾಗುತ್ತಿಲ್ಲ ಎಂದು ಚೀನಾ ಹೇಳಿದೆ. ಚೀನಾದ ನ್ಯಾಷನಲ್ ಡೀಸೀಸ್ ಕಂಟ್ರೋಲ್, ಪ್ರಿವೆನ್ಷನ್ ಅಡ್ಮಿನಿಸ್ಟ್ರೇಷನ್‌ನಿಂದ ಲ್ಯಾಬ್ ಪರೀಕ್ಷೆಗೆ ಮಾರ್ಗಸೂಚಿ ನೀಡಲಾಗಿದೆ.
HMPV ವೈರಸ್ ಲಕ್ಷಣಗಳು ಏನು?
ಕೆಮ್ಮು, ಜ್ವರ, ಮೂಗು ಕಟ್ಟಿಕೊಳ್ಳುವುದು, ಉಸಿರಾಟದಲ್ಲಿ ಸಮಸ್ಯೆ
ಇನ್ ಕ್ಯೂಬೇಷನ್ ಅವಧಿ ಮೂರರಿಂದ 6 ದಿನಗಳು
ವೈರಸ್ ತಗುಲಿದ 3 ರಿಂದ 6 ದಿನಗಳಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಳ್ಳುತ್ತವೆ
HMPV ವೈರಸ್ ತಡೆಯುವುದು ಹೇಗೆ?
ಮನೆಗೆ ಬಂದಾಗ ಸೋಪ್‌ನಿಂದ ಕೈ ತೊಳೆಯಬೇಕು
ಕೈ ತೊಳೆಯದೆ ಕಣ್ಣು, ಮೂಗು , ಮುಖ, ಬಾಯಿ ಮುಟ್ಟಿಕೊಳ್ಳಬಾರದು
ವೈರಸ್ ಸೋಂಕಿತ ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳಬೇಕು
ಒಂದು ವೇಳೆ ಸೋಂಕು ತಗುಲಿದರೆ ಐಸೋಲೇಷನ್ ಆಗಬೇಕು
ಕೆಮ್ಮುವಾಗ, ಕೈ, ಮುಖವನ್ನು ಮುಚ್ಚಿಕೊಳ್ಳಬೇಕು
ವೈರಸ್ ಸೋಂಕಿತ ವ್ಯಕ್ತಿಗಳ ಜೊತೆ ಕಾಫಿ ಕಪ್, ಪಾತ್ರೆಗಳನ್ನು ಹಂಚಿಕೊಳ್ಳಬಾರದು
ವೈರಸ್ ಸೋಂಕಿದ್ದಾಗ ಮನೆಯಲ್ಲಿ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯಬೇಕು
ಇದರ ಜೊತೆಗೆ ರಿನೋವೈರಸ್ ಕೂಡ ವೇಗವಾಗಿ ಹರಡುತ್ತಿದೆ. ಈ ವೈರಸ್‌ಗಳಿಂದ ಜನರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವಯಸ್ಸಾದವರು, ಮಕ್ಕಳು ಇದಕ್ಕೆ ತುತ್ತಾಗುತ್ತಾರೆ. ಈ ಮೂರು ನಾಲ್ಕು ವೈರಸ್‌ಗಳ ಹರಡುವಿಕೆಯಿಂದ ಚೀನಾದ ಜನರು ತತ್ತರಿಸಿದ್ದಾರೆ. ಈಗಲೇ ಈ ವೈರಸ್‌ಗಳಿಗೆ ಯಾವುದೇ ವ್ಯಾಕ್ಸಿನ್ ಇಲ್ಲ ಎಂದು ಚೀನಾ ವೈದ್ಯರು ಕೈ ಚೆಲ್ಲಿ ಕುಳಿತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ