/newsfirstlive-kannada/media/post_attachments/wp-content/uploads/2024/06/Umapathy-Gowda-ON-Darshan-Arrest-Case.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಂಧನವಾಗಿದೆ. ದರ್ಶನ್ ಬಂಧಿಸಿರುವ ಪೊಲೀಸರು ಕೊಲೆ ಕೇಸ್‌ನ ಇಂಚಿಂಚು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ನಟ ದರ್ಶನ್ ಅರೆಸ್ಟ್ ಆದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ.
ದರ್ಶನ್ ಅವರ ಅರೆಸ್ಟ್ ಜೊತೆಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರು ಮಾತನಾಡಿರುವ ಹಳೇ ವಿಡಿಯೋಗಳು ಸಖತ್ ವೈರಲ್ ಆಗಿದೆ. ಉಮಾಪತಿ ಅವರ ಅಭಿಮಾನಿಗಳು, ನೆಟ್ಟಿಗರು ಕೆಲವೊಂದು ವಿಡಿಯೋಗಳನ್ನು ಇನ್ಸ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಾ ವೈರಲ್ ಮಾಡಿದ್ದಾರೆ.
ಇದನ್ನೂ ಓದಿ: ಪಟ್ಟಣಗೆರೆ ಶೆಡ್‌ನಲ್ಲಿ ಪವಿತ್ರಾ ಗೌಡ ಕಣ್ಣೀರು.. ಪಕ್ಕದಲ್ಲೇ ನಿಂತಿದ್ದ ದರ್ಶನ್ ಮಾಡಿದ್ದೇನು?
ನಿರ್ಮಾಪಕ ಉಮಾಪತಿ ಅವರು ಜೀವನದಲ್ಲಿ ಎಲ್ಲರೂ ನಮ್ಮನ್ನು ಹೊಗಳಬೇಕು. ಮರ್ಯಾದೆ ಕೊಡಬೇಕು ಅಂತ ಏನಿಲ್ಲ. ಮರ್ಯಾದೆಯನ್ನು ಸಂಪಾದನೆ ಮಾಡೋಣ. ಇವತ್ತು ನಾನು ತಗಡೇ ಇರಬಹುದು. ನಾಳೆ ದಿವಸ ಚಿನ್ನದ ತಗಡು ಆಗಬಹುದು. ಸಮಯ, ಸಂದರ್ಭ ಎಲ್ಲದಕ್ಕೂ ಉತ್ತರ ಕೊಡುತ್ತೆ. ಹಿಂಗೇ ಜೀವನ ಇರಲ್ಲ, ಎಲ್ಲೋ ಒಂದು ಕಡೆ ಮೇಲಿದ್ದವರು ಕೆಳಗೆ ಬೀಳುತ್ತಾರೆ ಎಂದಿದ್ದರು.
ಇದನ್ನೂ ಓದಿ:VIDEO: ಕೊಲೆಯಾದ ಜಾಗದಲ್ಲಿ ಕೈ ಕಟ್ಟಿ ನಿಂತ ಚಾಲೆಂಜಿಂಗ್ ಸ್ಟಾರ್ ದರ್ಶನ್; ಪೊಲೀಸರು ಕೇಳಿದ್ದೇನು?
View this post on Instagram
ಇನ್ನು, ನಾವು ಇನ್ನೊಬ್ಬರ ಮನೆ ಆಳು ಮಾಡಲು ನಿಂತ್ರೆ ನಮ್ಮ ಮನೆ ಆಳಾಗುತ್ತೆ. ನಾವು ಇನ್ನೊಬ್ಬರ ಮನೆ ಉದ್ಧಾರ ಮಾಡಿದ್ರೆ ನಮ್ಮ ಮನೆಯೂ ಉದ್ಧಾರವಾಗುತ್ತೆ. ನಾನು ಹಿಂಗೆ ಮಾಡ್ತೀನಿ, ಹಂಗೆ ಮಾಡ್ತೀನಿ ಅಂದ್ರೆ ಮಾಡ್ರಿ. ಅವತ್ತು ನನ್ನ ಕ್ಯಾಪಾಸಿಟಿ ಏನು ಅಂತ ನಾನು ತೋರಿಸುತ್ತೇನೆ. ಯಾವುದೇ ಆ್ಯಂಗಲ್‌ನಲ್ಲಿ ಆದ್ರೂ ನಾನು ನಿಮ್ಮೆಲ್ಲರಿಗಿಂತ ಒಂದು ಲೆವೆಲ್ ಜಾಸ್ತಿನೇ ಇರುತ್ತೇನೆ ಎಂದು ಉಮಾಪತಿ ಅವರು ಹೇಳಿದ್ದರು.
ರಾಬರ್ಟ್ ಸಿನಿಮಾದ ಬಳಿಕ ದರ್ಶನ್ ಹಾಗೂ ಉಮಾಪತಿ ಅವರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದ್ದು, ಇಬ್ಬರ ಮಧ್ಯೆ ಸಖತ್ ವಾಗ್ವಾದ ನಡೆದಿತ್ತು. ದರ್ಶನ್ ಅವರ ಮಾತಿಗೆ ನಿರ್ಮಾಪಕ ಉಮಾಪತಿ ಅವರು ಕೌಂಟರ್ ಕೊಟ್ಟಿದ್ದರು. ಇದೀಗ ಉಮಾಪತಿ ಅವರು ಆಡಿದ್ದ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ವೈರಲ್ ವಿಡಿಯೋಗಳನ್ನು ಉಮಾಪತಿ ಶ್ರೀನಿವಾಸ ಗೌಡ ಅವರು ತಮ್ಮ ಇನ್ಸ್‌ಸ್ಟಾಗ್ರಾಂ ಸ್ಟೇಟಸ್‌ಗೆ ಹಾಕಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ