/newsfirstlive-kannada/media/post_attachments/wp-content/uploads/2025/06/air-india6.jpg)
265 ಮಂದಿಗೆ ಅಂದು ಕರಾಳ ಗುರುವಾರ ಆಗಿತ್ತು. ಯಾರೂ ಕೂಡ ಊಹಿಸಿರಲಿಲ್ಲ ಇಷ್ಟೊಂದು ಘೋರ ದುರಂತ ಸಂಭವಿಸುತ್ತದೆ ಅಂತ. ಆದ್ರೆ, ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ 265 ಜನರ ಪ್ರಾಣ ಹಾರಿ ಹೋಗಿದೆ.
ಇದನ್ನೂ ಓದಿ:ವಿಮಾನ ದುರಂತದ ದಿನ ಈ ನ್ಯೂಸ್ ಪೇಪರ್ನಲ್ಲಿ ಸೇಮ್ ಟು ಸೇಮ್ ಜಾಹೀರಾತು!
ಹೌದು, ಗುಜುರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು ಬರೋಬ್ಬರಿ 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ಲೈನರ್ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಟೇಕ್ಆಫ್ ಆಗಿ ಕೆಲವೇ ಕೆಲವು ನಿಮಿಷಗಳಲ್ಲಿ ಬಿ.ಜೆ. ಮೆಡಿಕಲ್ ಕಾಲೇಜಿನ ಹಾಸ್ಟೆಲ್ಗೆ ಏರ್ ಇಂಡಿಯಾ ವಿಮಾನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕಟ್ಟಡ ಧ್ವಂಸವಾಗಿದೆ. ಇದ್ರಿಂದಾಗಿ ಹಾಸ್ಟೆಲ್ನ ಡೈನಿಂಗ್ ಹಾಲ್ನಲ್ಲಿ ಕುಳಿತು ಊಟ ಮಾಡ್ತಿದ್ದ ವಿದ್ಯಾರ್ಥಿಗಳ ಪೈಕಿ 24 ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟಿದ್ದಾರೆ. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಪವಾಡ ಸದೃಶ ಎಂಬಂತೆ ಬದುಕುಳಿದಿದ್ದಾರೆ.
ಈ ದುರಂತದ ಬೆನ್ನಲ್ಲೇ ವಿಮಾನದ ಆ ಸೀಟ್ಗೆ ಬೇಡಿಕೆ ಹೆಚ್ಚಾಗುತ್ತದೆ. ನಾವು ಸೀಟ್ ಬುಕ್ ಮಾಡ್ತೀವಿ ಅಂತ ಪ್ರಯಾಣಿಕರು ಹೇಳುತ್ತಿದ್ದಾರೆ. ದಿಢೀರ್ ಇದೇ ಸೀಟ್ಗೆ ಡಿಮ್ಯಾಂಡ್ ಹೆಚ್ಚಾಗಿರೋದು ಯಾಕೆ ಗೊತ್ತಾ? ಇಲ್ಲಿ ಕಾರಣವಿದೆ. ಅದು ಏನೆಂದರೆ, ವಿಮಾನ ದುರಂತದಲ್ಲಿ ಅಚ್ಚರಿ ಎಂಬಂತೆ ವಿಶ್ವಾಸ್ ಕುಮಾರ್ ರಮೇಶ್ ಬದುಕಿ ಬಂದಿರೋದು. ಇದೀಗ ಈ ರಮೇಶ್ ಅವರು ವಿಮಾನದಲ್ಲಿ ಕಳಿತುಕೊಂಡು ಪ್ರಯಾಣ ಮಾಡಿದ್ದ 11A ಸೀಟ್ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಈ ಬಗ್ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಹೆಚ್ಚಿನ ಹಣ ಕೊಡ್ತೀವಿ, ನಮಗೆ ಅದೇ ಸೀಟ್ ಬೇಕು ಅಂತ ಬೇಡಿಕೆ ಇಡುತ್ತಿದ್ದಾರೆ. ಎಮರ್ಜೆನ್ಸಿ ಎಕ್ಸಿಟ್ ಬಳಿಯೇ ಇರೋದ್ರಿಂದ ಡಿಮ್ಯಾಂಡ್ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ