newsfirstkannada.com

Rain: ಬೆಂಗಳೂರಿಗೆ ಕೊನೆಗೂ ಮಳೆರಾಯನ ಎಂಟ್ರಿ; ಇಂದು ವರುಣನ ಆರ್ಭಟ ಎಲ್ಲೆಲ್ಲಿ?

Share :

Published April 19, 2024 at 3:54pm

Update April 19, 2024 at 3:57pm

    ಯಲಹಂಕ ಸೇರಿ ಕೆಲವು ಭಾಗದಲ್ಲಿ ತುಂತುರು ಮಳೆಯ ಸಿಂಚನ

    ಕೊನೆಗೂ ಬೆಂಗಳೂರಲ್ಲಿ ಸಾಧಾರಣ ಮಳೆ ಆಗುವ ಮುನ್ಸೂಚನೆ

    ರಾಜ್ಯದಲ್ಲಿ ಇಂದು ಮತ್ತು ನಾಳೆಯೂ ಗುಡುಗು, ಸಿಡಿಲು ಸಹಿತ ಮಳೆ

ಬೆಂಗಳೂರು: ಸಾಕಪ್ಪಾ ಸಾಕು ಸೆಕೆ, ಬಿರು ಬಿಸಿಲಿಗೆ ಬೆವತು ಹೋಗಿರುವ ಬೆಂಗಳೂರಿಗರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಸುಮಾರು ನಾಲ್ಕೈದು ತಿಂಗಳ ಬಳಿಕ ಸಿಲಿಕಾನ್ ಸಿಟಿಯಲ್ಲಿ ವರ್ಷದ ಮೊದಲ ಮಳೆಯಾಗಿದೆ. ಇಂದು ಯಲಹಂಕ ಸೇರಿದಂತೆ ಕೆಲವು ಭಾಗದಲ್ಲಿ ಕೆಲ ಹೊತ್ತು ತುಂತುರು ಮಳೆಯಾಗಿದೆ. ಇದರ ಜೊತೆಗೆ ರಾಜ್ಯದ ಹವಮಾನ ಇಲಾಖೆ ಉದ್ಯಾನನಗರಿ ತಂಪಾಗುವ ಮಹತ್ವದ ಸುಳಿವು ನೀಡಿದೆ.

ಬರೋಬ್ಬರಿ 5 ತಿಂಗಳ ಬಳಿಕ ಹವಾಮಾನಶಾಸ್ತ್ರಜ್ಞರು ಬೆಂಗಳೂರಲ್ಲಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಹೇಳಿದೆ. ತಮಿಳುನಾಡು, ತೆಲಂಗಾಣದಿಂದ ಬೇಸಿಗೆ ಮಳೆಯ ಮಾರುತ ಬೆಂಗಳೂರಿಗೆ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ದಕ್ಷಿಣ ಒಳನಾಡಿನ ಭಾಗದಲ್ಲಿ ಇಂದು ಮತ್ತು ನಾಳೆ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಹೊರೆತುಪಡಿಸಿ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 64.5 ಮಿಲಿ ಮೀಟರ್‌ನಿಂದ 115.5 ಮಿಲಿ ಮೀಟರ್‌ವರೆಗೂ ಧಾರಾಕಾರ ಮಳೆಯಾಗಲಿದೆ ಎನ್ನಲಾಗಿದೆ. ಇಂದು ಚಿಕ್ಕಮಂಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ದಕ್ಷಿಣ, ಉತ್ತರ ಕರ್ನಾಟಕದ ಹಲವು ಜಿಲ್ಲೆಯಲ್ಲಿ ಮಳೆಯಾಗಲಿದೆ.

ಇದನ್ನೂ ಓದಿ: RAIN ALERT: ಬೆಂಗಳೂರಿನ ಹಲವೆಡೆ ಇಂದು ಬೇಸಿಗೆ ಮಳೆ; ರಾಜ್ಯದಲ್ಲಿ ಗುಡುಗು, ಮಿಂಚಿನ ವರ್ಷಧಾರೆ

ಇಂದು ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮೈಸೂರು, ರಾಮನಗರ, ಶಿವಮೊಗ್ಗದ ಒಂದೆರಡು ಸ್ಥಳಗಳಲ್ಲಿ ಗುಡುಗು ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಉತ್ತಮ ಮಳೆಗಾಗಿ ಎಲ್ಲರೂ ಕಾಯುತ್ತಿರುವಾಗಲೇ ರಾಜ್ಯದ ವಾತಾವರಣದಲ್ಲಿ ಮತ್ತೊಂದು ದಾಖಲೆಯಾಗಿದೆ. ಇಂದು ಕರ್ನಾಟಕ ರಾಜ್ಯದಲ್ಲಿ ಕಳೆದ 7 ವರ್ಷಕ್ಕೆ ಹೋಲಿಸಿದರೆ ಎರಡನೇ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. 2017ರ ಬಳಿಕ ರಾಯಚೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 44.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rain: ಬೆಂಗಳೂರಿಗೆ ಕೊನೆಗೂ ಮಳೆರಾಯನ ಎಂಟ್ರಿ; ಇಂದು ವರುಣನ ಆರ್ಭಟ ಎಲ್ಲೆಲ್ಲಿ?

https://newsfirstlive.com/wp-content/uploads/2024/04/RAIN-RAIN.jpg

Load More