Advertisment

ಸೇತುವೆ ಮೇಲೆ ನಿಂತು ನೋಡುವಾಗಲೇ ನದಿಗೆ ಬಿದ್ದ ಬ್ರಿಡ್ಜ್​.. ಇಬ್ಬರು ನಿಧನ, ಕಾಣೆ ಆದವರಿಗಾಗಿ ಹುಡುಕಾಟ

author-image
Bheemappa
Updated On
ಸೇತುವೆ ಮೇಲೆ ನಿಂತು ನೋಡುವಾಗಲೇ ನದಿಗೆ ಬಿದ್ದ ಬ್ರಿಡ್ಜ್​.. ಇಬ್ಬರು ನಿಧನ, ಕಾಣೆ ಆದವರಿಗಾಗಿ ಹುಡುಕಾಟ
Advertisment
  • ಪ್ರವಾಸಿ ತಾಣ ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ರು
  • ಗಂಭೀರವಾಗಿ ಗಾಯಗೊಂಡಿರುವ 32 ಜನರು, 6 ಮಂದಿ ಕ್ರಿಟಿಕಲ್​
  • ನದಿ ನೀರಿಗೆ ಕುಸಿದು ಬಿದ್ದ ಸೇತುವೆ, ಕೊಚ್ಚಿಕೊಂಡು ಹೋದ ಜನ

ಮುಂಬೈ: ಪುಣೆಯಲ್ಲಿ ಇಂದ್ರಯಾಣಿ ನದಿಗೆ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಬಿದ್ದು ಇಬ್ಬರು ಪ್ರಾಣ ಕಳೆದುಕೊಂಡಿದ್ದು 32 ಪ್ರವಾಸಿಗರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ 6 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

Advertisment

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ಮಾತನಾಡಿ, ಪುಣೆಯಲ್ಲಿರುವ ಇಂದ್ರಯಾಣಿ ನದಿಗೆ ಇರುವ ಸೇತುವೆ ಕುಸಿದು ಬಿದ್ದಿದೆ. ಈ ವೇಳೆ ಸೇತುವೆ ಮೇಲಿದ್ದ ಜನರು ಸಡನ್ ಆಗಿ ನೀರಿಗೆ ಬಿದ್ದಿದ್ದಾರೆ. ಘಟನೆಯಲ್ಲಿ ಇಬ್ಬರು ಪ್ರವಾಸಿಗರು ಕೊನೆಯುಸಿರೆಳೆದಿದ್ದಾರೆ. 32ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು 6 ಜನರ ಸ್ಥಿತಿ ಹೇಳತೀರದಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಾಲಿಗಾಗಿ ಅಲ್ಲವೇ ಅಲ್ಲ, ಕತ್ತೆಗಳಿಗೆ ಭಾರೀ ಬೇಡಿಕೆ; ಡಾಂಕಿ ಲಕ್ಷ ಲಕ್ಷ ರೂಪಾಯಿಗೆ ಮಾರಾಟ!

publive-image

ಈಗ ಮಳೆಗಾಲ ಆಗಿದ್ದರಿಂದ ಹೆಚ್ಚಿನ ಪ್ರವಾಸಿಗರು ಪುಣೆಯಲ್ಲಿರುವ ಕುಂಡಮಾಲಾ ಪ್ರದೇಶಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಂದು ಭಾನುವಾರ ಆಗಿದ್ದರಿಂದ ಜನಪ್ರಿಯ ಪ್ರವಾಸಿ ತಾಣದ ಸೌಂದರ್ಯ ಸವಿಯಲು ಹೆಚ್ಚಿನ ಸಂಖ್ಯೆಯಲ್ಲೇ ಜನರು ಆಗಮಿಸಿದ್ದರು. ಈ ವೇಳೆ ಬ್ರಿಡ್ಜ್​ ಮೇಲೆ ಜನರು ಇರುವಾಗಲೇ ಕುಸಿದು ನದಿಯಲ್ಲಿ ಹರಿಯುತ್ತಿರುವ ನೀರಿಗೆ ಬಿದ್ದಿದೆ. ಇದರಿಂದ ಇಬ್ಬರು ಸಾವನ್ನಪ್ಪಿದ್ದು 32 ಜನರು ಗಂಭೀರವಾಗಿದ್ದಾರೆ. ಕೆಲವರು ನೀರಿನಲ್ಲಿ ಹರಿದುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

Advertisment

ಇನ್ನು ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​​ಡಿಆರ್​ಎಫ್​) ಆಗಮಿಸಿದೆ. ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದು ಕೆಲವರನ್ನು ರಕ್ಷಣೆ ಮಾಡಲಾಗಿದೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾದವರಿಗೆ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment