Advertisment

ದರ್ಶನ್ ಕೊಲೆ ಆರೋಪ ಬೆನ್ನಲ್ಲೇ ‘ಡಿ ಗ್ಯಾಂಗ್’ ಟೈಟಲ್ ಗೆ ಭಾರೀ ಡಿಮ್ಯಾಂಡ್! ಮೊದಲು ರಿಜಿಸ್ಟರ್​ ಮಾಡಿಸಿದ್ಯಾರು?

author-image
AS Harshith
Updated On
ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್‌.. ದರ್ಶನ್ ಗ್ಯಾಂಗ್‌ನಲ್ಲಿ ಮತ್ತೊಬ್ಬ ಅನಾಮಧೇಯ; ಸ್ಫೋಟಕ ಮಾಹಿತಿ ಇಲ್ಲಿದೆ
Advertisment
  • ‘ಡಿ ಗ್ಯಾಂಗ್’ ಟೈಟಲ್ ಗೆ ಭಾರೀ ಡಿಮ್ಯಾಂಡ್
  • ನಟ ದರ್ಶನ್ ಕೊಲೆ ಆರೋಪ ಬೆನ್ನಲ್ಲೇ ಹೆಚ್ಚಾಯ್ತು ಬೇಡಿಕೆ
  • ದರ್ಶನ್​ ಬಗ್ಗೆ ಕದ್ದು ಮುಚ್ಚಿ ಸಿನಿಮಾ ಬರ್ತಿದ್ಯಾ? ಹೀಗೊಂದು ಅನುಮಾನ

ಸ್ಯಾಂಡಲ್​ವುಟ್​ ನಟ ದರ್ಶನ್ ಕೊಲೆ ಆರೋಪ ಬೆನ್ನಲ್ಲೇ ‘ಡಿ ಗ್ಯಾಂಗ್’ ಟೈಟಲ್ ಗೆ ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿದೆಯಂತೆ. ಆದರೆ ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರ ಈ ಟೈಟಲ್ ರಿಜಿಸ್ಟರ್ ಮಾಡಲು ಹಿಂದೇಟು ಹಾಕಿದೆ. ಈ ಕುರಿತಾಗಿ ನಿರ್ದೇಶಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

Advertisment

ನಿರ್ದೇಶಕ ರಾಕಿ ದಾವಣಗೆರೆಯ FM ಫಿಲ್ಮ್ಸ್ ಬ್ಯಾನರ್ ಅಡಿ ‘ಡಿ ಗ್ಯಾಂಗ್​’ ಟೈಟಲ್​ ನೋಂದಣಿ ಮುಂದಾಗಿದ್ದರು. ಆದರೆ ಚಲನಚಿತ್ರ ವಾಣಿಜ್ಯ ಮಂಡಳಿ ನೋಂದಣಿಗೆ ಅವಕಾಶ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಫೇಸ್ ಬುಕ್​ನಲ್ಲಿ ಈ ಕುರಿತಾಗಿ ನಿರ್ದೇಶಕ ರಾಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಗಲಾಟೆ.. ಕ್ಷುಲ್ಲಕ ಕಾರಣಕ್ಕೆ ಅರಣ್ಯಾಧಿಕಾರಿಯನ್ನು ಅಟ್ಟಾಡಿಸಿ ಕೊಲೆ

ಎರಡು ವರ್ಷಗಳಿಂದಲೂ ‘ಡಿ ಗ್ಯಾಂಗ್’ ಶೀರ್ಷಿಕೆ ಮೇಲೆ ಕೆಲಸ ಮಾಡಿದ್ದೇವೆ. ಅದಕ್ಕೆ ಸಾಕ್ಷಿಯಾಗಿ ಯೂಟ್ಯೂಬ್ ನಲ್ಲಿ ಹಾಡು ಕೂಡ ಇದೆ. ಈಗ ನಡೆಯುತ್ತಿರುವ ದರ್ಶನ್ ಪ್ರಕರಣಕ್ಕೂ ನಮ್ಮ ಟೈಟಲ್​ಗೂ ಸಂಬಂಧ ಇಲ್ಲ. ಆದರೂ ವಾಣಿಜ್ಯ ಮಂಡಳಿ ಅವರು ನೋಂದಣಿ ಮಾಡಿಕೊಡಲಿಲ್ಲ. ಮುಂದೆ ದೊಡ್ಡ ನಿರ್ಮಾಪಕರು ಅಥವಾ ದೊಡ್ಡ ನಿರ್ದೇಶಕರಿಗೆ ಟೈಟಲ್ ಕೊಟ್ಟರೆ ಏನ್ ಕತೆ?. ಆಗ ಮಾತನಾಡಲು ಸಾಕ್ಷಿ ಬೇಕು ಅಂತ ಫೇಸ್ ಬುಕ್ ನಲ್ಲಿ‌ ಹಾಕಿದ್ದೇನೆ ಎಂದು ನಿರ್ದೇಶಕ ರಾಕಿ ಪೋಸ್ಟ್ ಮಾಡಿದ್ದಾರೆ.

Advertisment

publive-image

ಇದನ್ನೂ ಓದಿ: ಅಮ್ಮನಿಗೆ ಅನಾರೋಗ್ಯ, ಕಣ್ಣೀರು ಹಾಕಿತ್ತಿರೋ ಅಕ್ಕ.. ದರ್ಶನ್​ ನಂಬಿ ಜೈಲು ಸೇರಿದ ನಂದೀಶ್ ಕುಟುಂಬಕ್ಕೆ ಸಂಕಷ್ಟ

ವಾಣಿಜ್ಯ ಮಂಡಳಿ ‘ಡಿ ಗ್ಯಾಂಗ್’ ಹೆಸರು ನೋಂದಣಿ ಮಾಡಿಕೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮತ್ತೊಂದೆಡೆ ಕೊಲೆ ಆರೋಪಿ ದರ್ಶನ್ ಗ್ಯಾಂಗ್ ಮೇಲೆ ಕದ್ದು ಮುಚ್ಚಿ ಹೊಸ ಸಿನಿಮಾ ಬರ್ತಿದ್ಯಾ ಎಂಬ ಅನುಮಾನ ಕಾಡತೊಡಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment