newsfirstkannada.com

ಹೆಚ್‌.ಡಿ ರೇವಣ್ಣ ಎಲ್ಲಿದ್ದಾರೆ? ಮಗನಂತೆ ಅಪ್ಪನಿಗೂ ಲುಕ್‌ ಔಟ್ ನೋಟಿಸ್‌; ಅರೆಸ್ಟ್ ಪಕ್ಕಾ?

Share :

Published May 3, 2024 at 8:23pm

Update May 3, 2024 at 8:28pm

    ಮೂರು ದಿನಗಳಿಂದ ರೇವಣ್ಣ ಅವರು ಬಹಿರಂಗವಾಗಿ ಕಾಣಿಸಿಕೊಂಡಿಲ್ಲ

    ಎರಡನೇ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡ ಹೆಚ್‌.ಡಿ ರೇವಣ್ಣ

    ಯಾವ ದೇಶಕ್ಕೆ ಹೋದ್ರು ಹಿಡ್ಕೊಂಡು ಬರ್ತೀವಿ ಎಂದಿರುವ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಹೆಚ್‌.ಡಿ ರೇವಣ್ಣ ಫ್ಯಾಮಿಲಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಕಿರುಕುಳ, ಅತ್ಯಾಚಾರ, ಕಿಡ್ನಾಪ್ ಪ್ರಕರಣ ದಾಖಲಾದ ಮೇಲೆ SIT ಪೊಲೀಸರ ತನಿಖೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಹಾಸನದಲ್ಲೂ ಅಶ್ಲೀಲ ವಿಡಿಯೋಗೆ ಸಂಬಂಧ ಪಟ್ಟ ಸಾಕ್ಷ್ಯ ಕಲೆ ಹಾಕುತ್ತಿರುವ ತನಿಖಾ ತಂಡ ಆರೋಪಿಗಳನ್ನು ವಿಚಾರಣೆ ನಡೆಸಲು ಮುಂದಾಗಿದೆ. ಹೆಚ್‌.ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಅವರ ವಿಚಾರಣೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸಿರೋ ಎಸ್ಐಟಿ ತಂಡ ಇಂದು ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರಿಗೂ ಲುಕ್‌ ಔಟ್ ನೋಟಿಸ್ ನೀಡಿದೆ.

ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಹೆಚ್‌.ಡಿ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು. ಆದರೆ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿದ್ದು, ಸಮಯಾವಕಾಶ ಕೋರಿದ್ದಾರೆ. ಇನ್ನು ಹೆಚ್.ಡಿ ರೇವಣ್ಣ ಅವರು ಕೂಡ ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಲುಕ್‌ ಔಟ್ ನೋಟಿಸ್ ನೀಡಲಾಗಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಯಾವುದೇ ದೇಶದಲ್ಲಿದ್ರೂ ಹಿಡಿದು ತರುತ್ತೇವೆ: ಸಿಎಂ ಸಿದ್ದರಾಮಯ್ಯ 

ಪ್ರಜ್ವಲ್ ರೇವಣ್ಣ ವಿರುದ್ಧ ಗಂಭೀರ ಆರೋಪ ಕೇಳಿ ಬಂದ ಮೇಲೆ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಆದರೆ ಕಳೆದ ಮೂರು ದಿನಗಳಿಂದ ರೇವಣ್ಣ ಅವರು ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಎರಡನೇ ಪ್ರಕರಣ ದಾಖಲಾದ ಬಳಿಕ ರೇವಣ್ಣ ಅವರು ತಲೆಮರೆಸಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗಲು ನೋಟಿಸ್ ಕೊಟ್ಟರು ರೇವಣ್ಣ ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರಂತೆ ಹೆಚ್‌.ಡಿ ರೇವಣ್ಣ ಕೂಡ ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ. ಹೀಗಾಗಿ ತಲೆಮರೆಸಿಕೊಂಡಿರುವ ರೇವಣ್ಣ ಅವರಿಗೆ ಪ್ರಜ್ವಲ್‌ ರೇವಣ್ಣ ಅವರಂತೆ ಲುಕ್‌ಔಟ್ ನೋಟಿಸ್ ನೀಡಲಾಗಿದೆ.

ಎಸ್‌ಐಟಿ ತನಿಖೆ ನಡೆಯುತ್ತಿರುವಾಗಲೇ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಪ್ರಜ್ವಲ್ ರೇವಣ್ಣ ಯಾವ ದೇಶಕ್ಕೆ ಹೋದ್ರು ಹಿಡ್ಕೊಂಡು ಬರ್ತೀವಿ ಎಂದು ಹೇಳುತ್ತಿದ್ದಾರೆ. ಈ ಬೆಳವಣಿಗೆಯ ಮಧ್ಯೆ ನಾಳೆ ಹೆಚ್‌.ಡಿ ರೇವಣ್ಣ ಅವರು 2ನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ನಾಳೆ ಹೆಚ್‌.ಡಿ ರೇವಣ್ಣ ಅವರಿಗೆ ಬೇಲ್ ಸಿಗದಿದ್ರೆ ಬಂಧಿಸುವ ಸಾಧ್ಯತೆಯೂ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಚ್‌.ಡಿ ರೇವಣ್ಣ ಎಲ್ಲಿದ್ದಾರೆ? ಮಗನಂತೆ ಅಪ್ಪನಿಗೂ ಲುಕ್‌ ಔಟ್ ನೋಟಿಸ್‌; ಅರೆಸ್ಟ್ ಪಕ್ಕಾ?

https://newsfirstlive.com/wp-content/uploads/2023/06/Prajwal-Revanna.jpg

Load More