ಕಮಲ್ ಹಾಸನ್ ಬಳಿಕ ರಾಮ್ ಗೋಪಾಲ್ ವರ್ಮಾ ಕನ್ನಡ ವಿರೋಧಿ ಹೇಳಿಕೆ; ಗೋಲ್ಡನ್ ಸ್ಟಾರ್ ಗಣೇಶ್ ತಿರುಗೇಟು

author-image
admin
Updated On
ಕಮಲ್ ಹಾಸನ್ ಬಳಿಕ ರಾಮ್ ಗೋಪಾಲ್ ವರ್ಮಾ ಕನ್ನಡ ವಿರೋಧಿ ಹೇಳಿಕೆ; ಗೋಲ್ಡನ್ ಸ್ಟಾರ್ ಗಣೇಶ್ ತಿರುಗೇಟು
Advertisment
  • ಅಮಿತಾಭ್ ಬಚ್ಚನ್ ಅವರಿಂದ ಸೌಥ್‌ ಸಿನಿಮಾ ಬದುಕುಳಿದಿದೆ
  • ದಕ್ಷಿಣ ಭಾರತದ ಸಿನಿಮಾ ರಂಗಕ್ಕೆ ಅಪಮಾನ ಮಾಡುವ ಹೇಳಿಕೆ
  • ರಾಮ್‌ ಗೋಪಾಲ್ ವರ್ಮಾ ಹೇಳಿಕೆಗೆ ಸ್ಯಾಂಡಲ್‌ವುಡ್ ಖಂಡನೆ

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಅನ್ನೋ ಕಮಲ್ ಹಾಸನ್ ಹೇಳಿಕೆ ಬೆನ್ನಲ್ಲೇ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಅವರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಮ್ ಗೋಪಾಲ್ ವರ್ಮಾ ಇಡೀ ದಕ್ಷಿಣ ಭಾರತದ ಸಿನಿಮಾ ರಂಗಕ್ಕೆ ಅಪಮಾನ ಮಾಡುವ ಹೇಳಿಕೆ ನೀಡಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚೆಗೆ ಮಾತನಾಡಿದ್ದ ರಾಮ್ ಗೋಪಾಲ್ ವರ್ಮಾ ಅವರು ಸೌಥ್ ಇಂಡಿಯಾ ಸಿನಿಮಾಗಳು ಅಮಿತಾಭ್ ಬಚ್ಚನ್ ಅವರಿಂದ ಬದುಕುಳಿದಿದೆ. ಅಮಿತಾಭ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡಿ ದಕ್ಷಿಣ ಭಾರತದ ಸ್ಟಾರ್ ನಟರು ಅಭಿಮಾನಿಗಳ ದೇವರಾಗಿದ್ದಾರೆ ಎಂದಿದ್ದರು.

publive-image

ಇದಿಷ್ಟೇ ಅಲ್ಲ ರಾಮ್‌ ಗೋಪಾಲ್ ವರ್ಮಾ ಅವರು 1990ರಲ್ಲಿ ಅಮಿತಾಭ್ ಬಚ್ಚನ್ ಅವರ ಶೈಲಿ ನೋಡಿ ಸೂಪರ್ ಸ್ಟಾರ್‌ಗಳು ಮಸಾಲಾ ಚಿತ್ರಗಳನ್ನು ಮಾಡಲು ಮುಂದಾದರು. ರಜನಿಕಾಂತ್, ಚಿರಂಜೀವಿ, ಎನ್‌.ಟಿ ರಾಮ ರಾವ್ ಸೇರಿ ಹಲವು ದಕ್ಷಿಣ ಭಾರತದ ನಟರು ಅಭಿಮಾನಿಗಳ ಸೂಪರ್ ಸ್ಟಾರ್ ಆದರು ಎಂದಿದ್ದಾರೆ.

ಇದನ್ನೂ ಓದಿ: ಮೊದಲು ಶಿವಣ್ಣನ ಭೇಟಿ ಮಾಡ್ತೀನಿ; ಜೈಲಿನಿಂದ ರಿಲೀಸ್ ಆದ ಮಡೆನೂರು ಮನು ಹೇಳಿದ್ದೇನು? 

ರಾಮ್‌ ಗೋಪಾಲ್ ವರ್ಮಾ ಅವರ ಈ ಹೇಳಿಕೆಯನ್ನ ಸ್ಯಾಂಡಲ್‌ವುಡ್ ನಟರು ಟೀಕಿಸಿದ್ದಾರೆ. ಅಮಿತಾಭ್ ಬಚ್ಚನ್ ರೀಮೇಕ್ ಸಿನಿಮಾಗಳಿಂದ ಅಣ್ಣಾವ್ರು ಗೆದ್ದಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಕ್ಕೆ ಗಣೇಶ್ ಅವರು ಗರಂ ಆಗಿದ್ದಾರೆ. ಅವರ ಸ್ಟೇಟ್‌ಮೆಂಟ್‌ಗೆ ರಿಯಾಕ್ಷನ್ ಕೊಡೋದೇ ದೊಡ್ಡ ತಪ್ಪು. ಡಾ. ರಾಜ್‌ಕುಮಾರ್ ಬಗ್ಗೆ ಮಾತಾಡಿದ್ರೆ, ಆಕಾಶಕ್ಕೆ ಉಗಿದಂತೆ. ಇಂತಹ ಹೇಳಿಕೆಗೆಲ್ಲಾ ರಿಯಾಕ್ಟ್ ಮಾಡಬಾರದು ಎಂದು ತಿರುಗೇಟು ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment