Advertisment

ತುಂಬಾ ದಿನಗಳ ನಂತರ ಕ್ಯಾಮೆರಾ ಕಣ್ಣಿಗೆ ಬಿದ್ದ ಬ್ಯೂಟಿ ಸಮಂತಾ; ಅಬ್ಬಾ.. ಏನಿದರ ಸೀಕ್ರೆಟ್‌?

author-image
Gopal Kulkarni
Updated On
ಸಮಂತಾ ಫ್ಯಾನ್ಸ್​ಗೆ ಬಿಗ್​ ಶಾಕ್​.. ಗುರುತು ಸಿಗದ ಹಾಗೆ ದಿಢೀರ್ ಬದಲಾಗಿ ಬಿಟ್ಟ ಸ್ಯಾಮ್!
Advertisment
  • ತುಂಬಾ ದಿನಗಳ ನಂತರ ಕ್ಯಾಮರಾ ಕಣ್ಣಿಗೆ ಕಾಣಿಸಿದ ನಟಿ ಸಮಂತಾ
  • ಅದೇ ಗ್ಲ್ಯಾಮರ್​, ಅದೇ ಚೆಲುವ ಚೂರು ಬದಲಾಗಿಲ್ಲ ಸೌಂದರ್ಯದ ಗಣಿ
  • ಇಷ್ಟು ದಿನಗಳಾದ ಮೇಲೆ ಯಾವ ಇವೆಂಟ್​ನಲ್ಲಿ ಕಾಣಿಸಿಕೊಂಡರು ನಟಿ?

ಸಮಂತಾ.. ಸೌಂದರ್ಯದ ಜೊತೆ ಜೊತೆಗೆ ನೂರಾರು ವಿವಾದಗಳನ್ನು ಕೂಡ ತನ್ನದಾಗಿಸಿಕೊಂಡಿರುವ ಜನಪ್ರಿಯ ನಟಿ. ತೆಲುಗು ಸಿನಿಮಾದಲ್ಲಿ ತಮ್ಮದೇ ಒಂದು ಹವಾ ಕ್ರಿಯೆಟ್ ಮಾಡಿಕೊಂಡಿರುವ ಸಮಂತಾ ಸೌಂದರ್ಯಕ್ಕೆ ಇನ್ನೊಂದು ಹೆಸರು ಎನ್ನುವಷ್ಟು ಚೆಲುವೆ. ಇತ್ತೀಚೆಗೆ ನಡೆದ ಅವರ ವೈವಾಹಿಕ ಜೀವನದ ವಿವಾದ. ಅವರಿಗೆ ಅನಾರೋಗ್ಯ ಕಾಡುತ್ತಿದೆ ಎಂಬ ಸುದ್ದಿಗಳು ಇವೆಲ್ಲವೂ ಹರಿದಾಡುತ್ತಲೇ ಇದ್ದವು. ಈ ವಿಚಾರವಾಗಿ ಒಂದೇ ಒಂದು ದಿನವೂ ಕೂಡ ಸಮಂತಾ ತಮ್ಮ ಹೇಳಿಕೆಗಳನ್ನಾಗಲಿ, ನಿಲುವುಗಳನ್ನಾಗಿ ಸ್ಪಷ್ಟಪಡಿಸಲಿಲ್ಲ.

Advertisment

ಅಷ್ಟೇ ಏಕೆ, ಸಮಂತ ಹಲವು ವರ್ಷಗಳಿಂದ ಸಾರ್ವಜನಿಕ ಸಂಪರ್ಕದಿಂದಲೇ ದೂರವಿದ್ದರು. ಯಾವುದೇ ದೊಡ್ಡ ದೊಡ್ಡ ಇವೆಂಟ್​ಗಳಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿರಲಿಲ್ಲ. ಕ್ಯಾಮರಾ ಕಣ್ಣುಗಳಿಂದ ಅನೇಕ ವರ್ಷಗಳ ಕಾಲ ದೂರವೇ ಇದ್ದರು. ತಾವಾಯ್ತು ಸಮ್ಮ ಸಿನಿಮಾ ಆಯ್ತು ಎಂದು ಇದ್ದುಕೊಂಡರವರು. ನಾಗಚೈತನ್ಯ ಮರು ಮದುವೆಯಾದಗಲೂ ಸಮಂತಾ ಬಗ್ಗೆ ಏನೇನೋ ಸುದ್ದಿಗಳು ಹರಿದರು ಕೂಡ ಅವರು ಎಂದಿಗೂ ರಿಯಾಕ್ಟ್ ಮಾಡಲಿಲ್ಲ. ಆದ್ರೆ ಸಮಂತಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಒಂದು ಕುತೂಹಲ ಹಾಗೂ ಒಂದು ಆತಂಕ ಮನೆಮಾಡಿತ್ತು. ಸಮಂತಾ ಹೇಗಿದ್ದಾರೆ. ಅರೋಗ್ಯವಾಗಿದ್ದಾರಾ? ಯಾಕೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದರು. ಅಂತಹ ಅಭಿಮಾನಿಗಳಿಗೆ ಈಗ ಹಬ್ಬದೂಟ ಮಾಡಿದಂತಹ ಖುಷಿ ನೀಡಿದ್ದಾರೆ ಆ ನಟಿ.


">January 30, 2025

ತುಂಬಾ ದಿನಗಳ ಬಳಿಕ ಕ್ಯಾಮರ ಕಣ್ಣಿಗೆ ಕಂಡಿರುವ ಸಮಂತಾ ಎಂದಿನಂತೆ ಅದೇ ಸೌಂದರ್ಯದ ಗಣಿಯಂತೆಯೇ ಇದ್ದಾರೆ. ವಿಶ್ವ ಪಿಕಲ್ ಬಾಲ್ ಲೀಗ್​​​ನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ಸಮಂತಾ ಎಂದಿನಂತೆ ಚಿನುಕುರುಳಿಯಂತೆ ನಗು ನಗುತ್ತಲೇ ಇದ್ದಾರೆ. ಅದೇ ಹುರುಪು, ಅದೇ ಚೈತನ್ಯದಿಂದ ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕ್ಯಾಮರಾದ ಮುಂದೆ ಮಾತನಾಡಿದ್ದಾರೆ. ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ.

Advertisment

ಡಾರ್ಕ್​ ಬ್ಲ್ಯೂ ಜಾಕೆಟ್ ಹಾಗೂ ಲೆಗ್ಗಿನ್ಸ್​ ಹಾಕಿಕೊಂಡು ತಲೆಗೊಂದು ಟೋಪಿ ಹಾಕಿಕೊಂಡು ಮಿಂಚುತ್ತಿರುವ ಸಮಂತಾರನ್ನು ಕಂಡ ಅಭಿಮಾನಿಗಳು ಈ ಸೌಂದರ್ಯದ ಗಣಿ ಎಂದಿಗೂ ಬದಲಾಗದ ಗಿಣಿ ಎಂದು ಕೊಂಡಾಡುತ್ತಿದ್ದಾರೆ. ಅವರ ಹಿಂದಿನ ಸೌಂದರ್ಯ ರಾಶಿ ಮತ್ತು ಲವಲವಿಕೆಯನ್ನು ಕಂಡ ಅಭಿಮಾನಿಗಳು ಅಬ್ಬಾ.. ನಮ್ಮ ಸಮಂತಾ ಎಂದಿನಂತೆಯೇ ಇದ್ದಾರೆ. ಇಷ್ಟು ದಿನ ಹರಿದಾಡಿದ ಸುದ್ದಿಗಳೆಲ್ಲವೂ ಸತ್ತು ಹೋದವು ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೊಂದು ಕಡೆ ಸಮಂತಾ ಎಂದಿನ ಬ್ಯೂಟಿಯನ್ನು ಹೊತ್ತುಕೊಂಡು ಈ ಇವೆಂಟ್​ನಲ್ಲಿ ತುಂಬಾ ಚಟುವಟಿಕೆಯಿಂದ ಓಡಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment