newsfirstkannada.com

ಮೈಸೂರಿಗೆ ಯದುವೀರ್‌ ಎಂಟ್ರಿ ಕೊಡ್ತಿದ್ದಂತೆ ಪ್ರತಾಪ್‌ ಸಿಂಹ ಸೈಲೆಂಟ್? ಕಾಂಗ್ರೆಸ್‌ಗೆ ವರವಾಗುತ್ತಾ?

Share :

Published March 15, 2024 at 2:53pm

Update March 15, 2024 at 2:55pm

    ಯದುವೀರ್ ಭೇಟಿಗೆ ಸಮಯ ನೀಡದ ಪ್ರತಾಪ್ ಸಿಂಹ ನಾಪತ್ತೆ?

    ಎಲ್ಲಿಯೂ ಕಾಣಿಸದೆ, ಯಾರ ಕೈಗೂ ಸಿಗದೆ ಮೌನಕ್ಕೆ ಜಾರಿದ ಸಿಂಹ!

    ಸಂಸದ ಪ್ರತಾಪ್​ ಸಿಂಹ ಸೈಲೆಂಟ್‌ ಕಾಂಗ್ರೆಸ್ ಪಕ್ಷಕ್ಕೆ ವರವಾಗುತ್ತಾ?

ಲೋಕಸಭಾ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರ ಹೈವೋಲ್ಟೇಜ್‌ ಕದನವಾಗಿ ಬದಲಾಗಿದೆ. ರಾಜವಂಶಸ್ಥ ಯದುವೀರ್‌ಗೆ ಬಿಜೆಪಿ ಟಿಕೆಟ್​​ ಅನೌನ್ಸ್ ಆಗ್ತಿದ್ದಂತೆ ಸಂಸದ ಪ್ರತಾಪ್​ ಸಿಂಹ ಅವರು ಸೈಲೆಂಟ್ ಆಗಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಯದುವೀರ್ ಆ್ಯಕ್ಟೀವ್​ ಆಗ್ತಿದ್ದಂತೆ ಸಂಸದ ಸಿಂಹ ಮೌನಕ್ಕೆ ಜಾರಿರೋದು ಹಲವು ಪ್ರಶ್ನೆಗಳನ್ನ ಹುಟ್ಟು ಹಾಕಿದೆ.

ಲೋಕಸಭಾ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ತಮಗೆ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದರು. ಆದರೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ರಾಜರ ಕುಟುಂಬದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಳಿಕ ಖುದ್ದು ಯದುವೀರ್ ಭೇಟಿಗೆ ಸಮಯ ನೀಡದ ಪ್ರತಾಪ್ ಸಿಂಹ ಅವರು ಎಲ್ಲಿಯೂ ಕಾಣಿಸದೆ ತಮ್ಮ ಅಸಮಾಧಾನ ಹೊರ ಹಾಕಿದ್ರು.

ಮೈಸೂರು ಚುನಾವಣಾ ಕಣದಲ್ಲಿ ಯದುವೀರ್ ಆ್ಯಕ್ಟೀವ್​ ಆಗ್ತಿದ್ದಂತೆ ಸಂಸದ ಪ್ರತಾಪ್ ಸಿಂಹ ಸೈಲೆಂಟ್ ಆಗಿರೋದು ಸ್ಪಷ್ಟವಾಗಿದೆ. ಪ್ರಚಾರಕ್ಕೆ ಆಗಮಿಸುತ್ತಿದ್ದಂತೆ ಮೈಸೂರು ಜಿಲ್ಲೆಯ ಎಲ್ಲಾ ನಾಯಕರು ಯದುವೀರ್​ಗೆ ಭರ್ಜರಿ ಸ್ವಾಗತ ಕೋರಿದ್ರು. ಪಕ್ಷದ ಕಚೇರಿ, ನಾಯಕರ ಮನೆಗೆ ಅಭ್ಯರ್ಥಿ ಯದುವೀರ್ ಭೇಟಿ‌ ನೀಡಿದ್ರು. ರಸ್ತೆ ಬದಿ ಕುಳಿತು ಜಿಲ್ಲಾ ಮುಖಂಡರ ಜೊತೆ ಯದುವೀರ್ ಟೀ ಕುಡಿದಿದ್ರು. ಆದ್ರೆ ಎಲ್ಲಿಯೂ ಕಾಣಿಸದೆ, ಯಾರ ಕೈಗೂ ಸಿಗದ ಸಂಸದ ಪ್ರತಾಪ್​ ಸಿಂಹ ಮೌನಕ್ಕೆ ಜಾರಿದ್ದಾರೆ.

ಮೈಸೂರು ಲೋಕಸಭಾ ಚುನಾವಣೆಗೆ ಟಿಕೆಟ್ ಪ್ರಕಟವಾದ ಮೇಲೆ ಬಿಜೆಪಿಗೆ ಬಂಡಾಯದ ಭಯ ಶುರುವಾಗಿದೆ. ಕಾಂಗ್ರೆಸ್ ಪಕ್ಷ ಕೂಡ ಇನ್ನೂ ಅಭ್ಯರ್ಥಿ ಪ್ರಕಟ ಮಾಡಿಲ್ಲ. ಹೀಗಿರುವಾಗ ಬಿಜೆಪಿ ನಾಯಕರ ಅಸಮಾಧಾನ ಮೈಸೂರು ಚುನಾವಣೆಗೆ ಹೊಸ ತಿರುವು ನೀಡುವ ಸಾಧ್ಯತೆ ಇದೆ.

ಮೌನದ ಬಗ್ಗೆ ಪ್ರತಾಪ ಸಿಂಹ ಸ್ಪಷ್ಟನೆ

ಸಂಸದ ಪ್ರತಾಪ ಸಿಂಹ್ ಅವರ ಮೌನದ ಬಗ್ಗೆ ನ್ಯೂಸ್ ಫಸ್ಟ್ ವರದಿ ಮಾಡಿತ್ತು. ಈ ಬೆಳವಣಿಗೆಯ ಪ್ರತಾಪ ಸಿಂಹ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಹಾಲಿ ಆಗಿದ್ದೇನೆ, ಮಾಜಿ ಆದರೂ ಜೊತೆಗಿರುವೆ. ನನ್ನ ಕೈಲಾದ ಕೆಲಸ ಮಾಡಿಕೊಡ್ತೀನಿ. ಟಿಕೆಟ್ ತಪ್ಪಿದೆ ಅಂತ ಕರೆ ಮಾಡಲು ಅಂಜಬೇಡಿ. ಸೋಮವಾರದಿಂದ ಪ್ರಚಾರ ಕಾರ್ಯಕ್ಕೆ ಬರ್ತೀನಿ ಎಂದು ಟ್ವೀಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈಸೂರಿಗೆ ಯದುವೀರ್‌ ಎಂಟ್ರಿ ಕೊಡ್ತಿದ್ದಂತೆ ಪ್ರತಾಪ್‌ ಸಿಂಹ ಸೈಲೆಂಟ್? ಕಾಂಗ್ರೆಸ್‌ಗೆ ವರವಾಗುತ್ತಾ?

https://newsfirstlive.com/wp-content/uploads/2024/03/PRATAP-SIMHA-3.jpg

Load More