ಮಡೆನೂರು ಮನು ಬೆನ್ನಲ್ಲೇ ಮತ್ತೊಬ್ಬ ಕಾಮಿಡಿ ಕಿಲಾಡಿ ನಟನ ಮೇಲೆ ಸಂತ್ರಸ್ತೆ ಗಂಭೀರ ಆರೋಪ.. ಏನದು?

author-image
Veena Gangani
Updated On
ಮಡೆನೂರು ಮನು ಬೆನ್ನಲ್ಲೇ ಮತ್ತೊಬ್ಬ ಕಾಮಿಡಿ ಕಿಲಾಡಿ ನಟನ ಮೇಲೆ ಸಂತ್ರಸ್ತೆ ಗಂಭೀರ ಆರೋಪ.. ಏನದು?
Advertisment
  • ಅಪ್ಪಣ್ಣನಿಂದ ಕಿರುಕುಳ ಅನುಭವಿಸಿದ ಸಂತ್ರಸ್ತೆ ಏನಂದ್ರು?
  • ಹಾಸ್ಯ ಕಲಾವಿದ ಅಪ್ಪಣ್ಣ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪ
  • ಮಡೆನೂರು ಮನು ಪ್ರಕರಣ ಬೆನ್ನಲ್ಲೇ ಮತ್ತೊಂದು ಆಡಿಯೋ ವೈರಲ್

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಡೆನೂರು ಮನು ಪೊಲೀಸ್​ ವಶದಲ್ಲಿ ಇರೋವಾಗಲೇ ಮತ್ತೊಬ್ಬ ಹಾಸ್ಯ ನಟನ ಮೇಲೆ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು ನಟಿಗೆ ಬ್ಲಾಕ್ ಮೇಲ್.. ಮಡೆನೂರು ಮನು ಮೇಲೆ ಸಾಲು ಸಾಲು ಆರೋಪ

publive-image

ಹೌದು, ಸಂತ್ರಸ್ತೆ ಆರೋಪದಂತೆ ಖಾಸಗಿ ವಿಡಿಯೋ ಬಗ್ಗೆ ರಾತ್ರಿಯಿಡೀ ಮನು ಬಳಿ ವಿಚಾರಿಸಿದ್ದಾರೆ. ಈಗಾಗಲೇ ಆರೋಪಿಯ ಮೊಬೈಲ್ ಪರಿಶೀಲನೆ ಮಾಡಲಾಗಿದ್ದು, ಯಾವುದೇ ಖಾಸಗಿ ವಿಡಿಯೋ, ಫೋಟೋ ಪತ್ತೆಯಾಗಿಲ್ಲ ಎನ್ನಲಾಗ್ತಿದೆ. ಬದಲಿಗೆ ಇಬ್ಬರು ಜೊತೆಯಲ್ಲಿ ಇರೋ ಕೆಲ ಪೋಟೋಗಳು ಹಾಗೂ ರಿಯಾಲಿಟಿ ಶೋ ಸೆಟ್​ನಲ್ಲಿ ತೆಗೆಸಿಕೊಂಡ ಕೆಲ ಪೋಟೋಗಳು ಪತ್ತೆಯಾಗಿದೆ. ಹೀಗಾಗಿ ಸಂತ್ರಸ್ತೆಗೆ ನೀವು ಮಾಡಿರುವ ಆರೋಪಗಳಿಗೆ ಪೂರಕವಾದ ಸಾಕ್ಷ್ಯ ನೀಡುವಂತೆ ಪೊಲೀಸರು ನೊಟೀಸ್ ನೀಡಲು ಮುಂದಾಗಿದ್ದಾರೆ.

publive-image

ಆದ್ರೆ, ಇದರ ಮಧ್ಯೆ ಮಡೆನೂರು ಮನು ಬೆನ್ನಲ್ಲೇ ಸಂತ್ರಸ್ತೆ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಸಂತ್ರಸ್ತೆ ಮಾತಾಡಿರೋ ಆಡಿಯೋವೊಂದು ವೈರಲ್ ಆಗುತ್ತಿದೆ. ಆ ಆಡಿಯೋದಲ್ಲಿ ಹಾಸ್ಯ ಕಲಾವಿದ ಅಪ್ಪಣ್ಣ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ. ಡಿಯರ್ ಸತ್ಯ, ರಾಮಾರ್ಜುನ, ಪೈಲ್ವಾನ್ ಸಿನಿಮಾಗಳಲ್ಲಿ ನಟಿಸಿರೋ ಅಪ್ಪಣ್ಣ ರಾಮದುರ್ಗ ಮೇಲೆ ನಟಿ ಕಿರುತೆರೆ ನಟಿ ಗಂಭೀರವಾಗಿ ಆರೋಪ ಮಾಡಿದ್ದಾರೆ.

publive-image

ಸಂತ್ರಸ್ತೆ ಆಡಿಯೋದಲ್ಲಿ ಆರೋಪ ಮಾಡಿದ್ದೇನು?

ಕಾಮಿಡಿ ಕಿಲಾಡಿಗಳಲ್ಲಿ ಅಪ್ಪಣ್ಣ ರಾಮದುರ್ಗ ಅಂತ ಇದ್ದಾನೆ. ಅಪ್ಪಣ್ಣ ಕಾಮಿಡಿ ಕಿಲಾಡಿಗಳು ಸೀಸನ್ 2ನಿಂದನೂ ನನಗೆ ಹಿಂಸೆ ಕೊಡ್ತಾನೇ ಇದ್ದ. ಶೋಗಳಿಗೆ ಕರೆದುಕೊಂಡು ಹೋಗಿ ನನಗೆ ಹಿಂಸೆ ಕೊಡ್ತಾನೆ ಇದ್ದ. ಅಪ್ಪಣ್ಣ ನನಗೆ ಕೆಟ್ಟ ದೃಷ್ಟಿಯಲ್ಲಿ ನೋಡ್ತಿದ್ದ. ದಿನೇ ದಿನೇ ನನಗೆ ಮಾನಸಿಕವಾಗಿ ಹಿಂಸೆ ತುಂಬಾ ಟಾರ್ಚರ್​ ಕೊಡ್ತಾ ಇದ್ದ. ನನ್ನ ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಆಗಲು ಅಪಣ್ಣನೇ ಕಾರಣ. ನಾನು ಆತ್ಮಹ* ಮಾಡ್ಕೊಂಡ್ರೆ ಅದಕ್ಕೆ ಅಪ್ಪಣ್ಣನೇ ಕಾರಣ.  ನನ್ನ ಜೀವನ ನರಕ ಮಾಡಿರೋ ಅಪ್ಪಣ್ಣನ ಸುಮ್ನೆ ಬಿಡ್ಬೇಡಿ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment