Advertisment

ಗುಜರಾತ್, ರಾಜಸ್ಥಾನ್, ಜಮ್ಮುಕಾಶ್ಮೀರ, ಹರಿಯಾಣದಲ್ಲಿ ನಡೆಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಿಕೆ

author-image
admin
Updated On
ತುಂಬಾನೇ ಸ್ಪೆಷಲ್ಲಾಗಿದೆ ‘ಆಪರೇಷನ್ ಸಿಂಧೂರ’ ಹೆಸರು.. ಇದರ ಅರ್ಥ ಏನು..?
Advertisment
  • ಭಾರತ, ಪಾಕ್ ಗಡಿಗಳಲ್ಲಿನ 4 ರಾಜ್ಯಗಳಲ್ಲಿ ಶೀಘ್ರದಲ್ಲೇ ಮಾಕ್​ ಡ್ರಿಲ್!
  • ಲಾಸ್ಟ್ ಚಾನ್ಸ್ ಕೊಟ್ರು ನರಿಬುದ್ಧಿ ಬಿಡದ ಪಾಕಿಸ್ತಾನಕ್ಕೆ ಮತ್ತೆ ನಡುಕ
  • ಉಗ್ರರ ಬೆದರಿಕೆಗಳ ವಿರುದ್ಧ ಸಾಮಾನ್ಯರು ಹೇಗೆ ಹೋರಾಡಬೇಕು?

ನವದೆಹಲಿ: ಇಂದು ಸಂಜೆ ಗುಜರಾತ್, ರಾಜಸ್ತಾನ್, ಜಮ್ಮುಕಾಶ್ಮೀರ್, ಹರಿಯಾಣದಲ್ಲಿ ನಡೆಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಿಕೆ ಆಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕ  ನಿಗದಿ ಆಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

Advertisment

ಪಹಲ್ಗಾಮ್​ ದಾಳಿಗೆ ಪ್ರತೀಕಾರವಾಗಿ ಭಾರತ, ಆಪರೇಷನ್​ ಸಿಂಧೂರ್​ ​ಮೂಲಕ ಭಯೋತ್ಪಾದಕರ ಅಡುಗುತಾಣಗಳನ್ನ ಧ್ವಂಸ ಮಾಡಿ, ಪಾಕ್​ಗೆ ನಡುಕ ಹುಟ್ಟಿಸಿತ್ತು. ಇತ್ತೀಚೆಗಷ್ಟೇ ಭಾರತ, ಪಾಕಿಸ್ತಾನದ ನಡುವಿನ ಉದ್ವಿಗ್ನತೆಗೆ ಸಣ್ಣ ಬ್ರೇಕ್​ ಕೂಡ ಬಿದ್ದಿತ್ತು. ಕದನ ವಿರಾಮ ಆಪರೇಷನ್‌ ಸಿಂಧೂರಕ್ಕೂ ಅಲ್ಪ ವಿರಾಮ ನೀಡಿತ್ತು.

publive-image

ಪಾಕ್ ಜೊತೆ ಗಡಿ ಹಂಚಿಕೊಂಡಿರೋ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಮಾಕ್​ ಡ್ರಿಲ್​ಗೆ ಸಿದ್ಧತೆಯಾಗಿದೆ. ಭಯೋತ್ಪಾದಕರ ಬೆದರಿಕೆಗಳ ವಿರುದ್ಧ ಸಾಮಾನ್ಯರು ಹೇಗೆ ಹೋರಾಡಬೇಕು. ದಾಳಿ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳೇನು. ಪ್ರತಿಕ್ರಿಯಿಸಿಬೇಕಾದ ತಂತ್ರಗಳೇನು ಅನ್ನೋದಕ್ಕಾಗಿ ಮಾಕ್ ​ಡ್ರಿಲ್​ ನಡೆಯಲಿದೆ.

ಈ ಮೂಲಕ ಆಪರೇಷನ್​ ಸಿಂಧೂರ್​ ಇನ್ನೂ ನಿಂತಿಲ್ಲ ಅನ್ನೋ ಸಂದೇಶ ಪಾಕ್​ಗೆ ರವಾನೆಯಾಗಲಿದೆ. ಎಷ್ಟು ಬಾರಿ ಇದು ಲಾಸ್ಟ್​ ಚಾನ್ಸ್​ ಎಂದು ಭಾರತ, ಪಾಕ್​ ಅವಕಾಶ ಕೊಟ್ಟರೂ ತನ್ನ ನರಿಬುದ್ಧಿ ತೋರಿಸುತ್ತಲೇ ಇದೆ.

Advertisment

ಇದನ್ನೂ ಓದಿ: ರೈತರಿಗೆ ಕೇಂದ್ರ ಸರ್ಕಾರದಿಂದ ಬಂಪರ್‌.. ರಾಗಿ, ಜೋಳ, ತೊಗರಿ ಬೆಳೆಯ ಕನಿಷ್ಠ ಬೆಂಬಲ ಬೆಲೆ ಏರಿಕೆ 

ಭಾರತ ಆಪರೇಷನ್​ ಸಿಂಧೂರ್​​ನಲ್ಲಿ ಸಾರ್ವಜನಿಕರನ್ನ ಗುರಿಯಾಗಿಟ್ಟುಕೊಳ್ಳದೇ ಭಯೋತ್ಪಾದಕ ಅಡಗುತಾಣಗಳು, ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿ, ಪಾಕಿಸ್ತಾನಕ್ಕೆ ಮತ್ತು ಭಯೋತ್ಪಾದಕರಿಗೆ ಮುಟ್ಟಿ ನೋಡುಕೊಳ್ಳುವಂಥ ಹೊಡೆತ ಕೊಟ್ಟಿತ್ತು. ಆದರೆ ಪಾಕ್​ ಬುದ್ಧಿ ಹಾಗಲ್ಲ. ಭಾರತೀಯ ಅಮಾಯಕ ಜನರ ಮೇಲೂ ದಾಳಿ ನಡೆಸುತ್ತೆ. ಹಾಗಾಗಿ ಈ 4 ಗಡಿ ಭಾಗಗಳಲ್ಲಿ ಭಯೋತ್ಪಾದಕ ಬೆದರಿಕೆಗಳ ವಿರುದ್ಧ ಹೋರಾಡಲು ಅಣಕು ಪ್ರದರ್ಶನ ಅನಿವಾರ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment