/newsfirstlive-kannada/media/post_attachments/wp-content/uploads/2025/06/Kannada-Actress-Rukmini-Vasanth.jpg)
ಭಾರತೀಯ ಸಿನಿಮಾ ಇತಿಹಾಸದಲ್ಲಿ ನಾಯಕಿಯರ ಕೊರತೆ ಎದುರಾದಾಗ ಹಲವು ಇಂಡಸ್ಟ್ರಿಗಳ ಕೈ ಹಿಡಿದಿದ್ದು, ನಮ್ಮ ಕನ್ನಡದ ನಟಿಯರು. ಈ ಮಾತು ಅಕ್ಷರಶಃ ಸತ್ಯ. ಬಾಲಿವುಡ್‌ನಲ್ಲಿ ನಾಯಕಿಯರ ಬರ ಶುರುವಾಗ್ತಿದ್ದಂತೆ ಇಂಡಸ್ಟ್ರಿ ಕೈ ಹಿಡಿದಿದ್ದೇ ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ. ಬಳಿಕ ಸೌಂದರ್ಯ, ದೀಪಿಕಾ ಪಡುಕೋಣೆ, ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ. ಈಗ ಈ ಲಿಸ್ಟ್ಗೆ ಸೇರಿದ್ದಾರೆ ಕನ್ನಡದ ಮತ್ತೊಬ್ಬ ನಟಿ.
ಟಾಲಿವುಡ್, ಬಾಲಿವುಡ್‌ನಲ್ಲಿ ಈಗ ಕನ್ನಡದ ನಟಿಯರದ್ದೇ ಸದ್ದು. ರಶ್ಮಿಕಾ ಮಂದಣ್ಣ, ಶ್ರೀಲೀಲಾ ದೊಡ್ಡ ದೊಡ್ಡ ಗೆಲುವಿನ ಕಾರಣರಾಗ್ತಿದ್ದಾರೆ. ಇವರ ಪ್ರತಿ ಸಾಂಗ್ ಪ್ರತಿ ಸಿನಿಮಾಗಳೂ ಹಿಟ್ ಆಗ್ತಿದ್ದು, ಇಬ್ಬರಿಗೆ ಬೇಡಿಕೆಯೂ ಹೆಚ್ಚಾಗ್ತಿದೆ. ಈಗ ಈ ಲಿಸ್ಟ್ಗೆ ಹೊಸದಾಗಿ ಸೇರ್ಪಡೆ ಆಗಿರೋದು ರುಕ್ಮಿಣಿ ವಸಂತ್. ಬ್ಯೂಟಿ ಜೊತೆಗೆ ಅತ್ಯದ್ಭುತ ನಟನೆಯಿಂದ ಇಂಡಸ್ಟ್ರಿಗಳ ಆಚೆಗೆ ತಲುಪಿರೋ ರುಕ್ಮಿಣಿಗೆ ಈಗ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳು ಹರಸಿ ಬರುತ್ತಿವೆ.
ರುಕ್ಮಿಣಿ ವಸಂತ್. ಸದ್ಯಕ್ಕೆ ದೊಡ್ಡ ಸೆನ್ಷೇಷನ್ ಸೃಷ್ಟಿಸಿರೋ ನಾಯಕ ನಟಿ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳ ಜೊತೆಗೆ ತಮ್ಮ ನಟನೆ, ಜಾಣ್ಮೆಯ ಮಾತಿನಿಂದ ಎಲ್ಲರ ಗಮನ ಸೆಳೆದಿರೋ ನಟಿ. ಕನ್ನಡದಲ್ಲಿ ಹಿಟ್ ಆದ ಬಳಿಕ, ಈಗ ಪರ ಭಾಷೆಗಳಿಂದಲೂ ಆಫರ್ಗಳು ಹುಡುಕಿ ಬರ್ತಿದೆ. ಇತ್ತೀಚೆಗೆ ವಿಜಯ್ ಸೇತುಪತಿ ಜೊತೆ ಏಸ್ ಅನ್ನೋ ಸಿನಿಮಾದಲ್ಲಿ ನಟಿಸಿದ್ರು. ಸಿನಿಮಾ ಗೆಲ್ಲುವುದರ ಜೊತೆಗೆ ರುಕ್ಮಿಣಿಗೂ ದೊಡ್ಡ ಹೆಸರು ತಂದು ಕೊಟ್ಟಿತ್ತು.
ಇದನ್ನೂ ಓದಿ: ಲಗ್ನ ಪತ್ರಿಕೆ, ಕಲ್ಯಾಣ ಮಂಟಪ ರೆಡಿ ಎಂದಿದ್ದ ವಧು; ಮೆರವಣಿಗೆಯಲ್ಲಿ ಬಂದ ವರನಿಗೆ ಬಿಗ್ ಶಾಕ್!
ಈ ಬೆನ್ನಲ್ಲೇ, ಖ್ಯಾತ ನಿರ್ದೇಶಕ ಮಣಿರತ್ನಂ ರುಕ್ಮಿಣಿಗೆ ಬಿಗ್ ಆಫರ್ ಕೊಟ್ಟಿದ್ದಾರೆ. ಮಣಿರತ್ನಂ ನಿರ್ದೇಶನದ ಹೆಸರಿಡದ ಸಿನಿಮಾಗೆ ನವೀನ್ ಪೊಲಿಶೆಟ್ಟಿ ನಾಯಕನಾಗಿದ್ದು, ಇಷ್ಟರಲ್ಲೇ ಸಿನಿಮಾ ಅಧಿಕೃತವಾಗಿ ಸೆಟ್ಟೇರಲಿದೆ. ಇದಾರಾಚೆಗೆ ಎಲ್ಲರ ಹುಬ್ಬೇರಿಸಿರೋ ಪ್ರಾಜೆಕ್ಟ್ ಅಂದರೆ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ. ಈಗಾಗಲೇ ನಿಮಗೆ ಗೊತ್ತಿರುವಂತೆ ಪ್ರಶಾಂತ್ ನೀಲ್ - ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್‌ನ ಹೊಸ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಸಿನಿಮಾಗೆ ನಾಯಕಿ ಯಾರು ಅನ್ನೋದು ಎಲ್ಲರ ಪ್ರಶ್ನೆ ಆಗಿತ್ತು. ಇದೀಗ ಮೂಲಗಳ ಪ್ರಕಾರ ಈ ಬಿಗ್ ಆಫರ್ ರುಕ್ಮಿಣಿ ವಸಂತ್ ಪಾಲಾಗಿದೆಯಂತೆ.
ಸೌಥ್ ಇಂಡಿಯಾ ಮತ್ತು ಬಾಲಿವುಡ್ ಇಂಡಸ್ಟ್ರಿಗಳಲ್ಲಿ ಕನ್ನಡದ ನಾಯಕಿಯರ ಹವಾ ಜೋರಾಗಿ ನಡೀತಿದೆ. ಇದೀಗ ಎಂಟ್ರಿ ಕೊಟ್ಟಿರೋ ರುಕ್ಮಿಣಿ ಕೂಡ ಅಂಥದ್ದೇ ದೊಡ್ಡ ಹೆಸರು ಮಾಡ್ತಾರೆ ಅನ್ನೋದು ಎಲ್ಲರ ನಿರೀಕ್ಷೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ