SSLC ನಂತರ ಮುಂದೇನು ಅಂತಾ ಇನ್ನೂ ಡಿಸೈಡ್ ಮಾಡಿಲ್ವಾ..? ಎಷ್ಟೊಂದು ಡಿಪ್ಲೊಮ ಕೋರ್ಸ್​ಗಳು..!

author-image
Ganesh
Updated On
SSLC ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ, ಉಡುಪಿ 2ನೇ ಸ್ಥಾನ; ನಿಮ್ಮ ಜಿಲ್ಲೆಗೆ ಯಾವ ಸ್ಥಾನ?
Advertisment
  • SSLC ನಂತರ ನೀವು ಏನೆಲ್ಲ ಓದಲು ಅವಕಾಶ ಇದೆ..?
  • ಡಿಪ್ಲೊಮದಲ್ಲಿ ವಿವಿಧ ಸರ್ಟಿಫಿಕೇಟ್ ಕೋರ್ಸ್​ಗಳು
  • ನಿಮ್ಮ ಆಸಕ್ತಿಗೆ ತಕ್ಕಾದ ಕೋರ್ಸ್​ಗಳ ಬಗ್ಗೆ ಕಂಪ್ಲೀಟ್ ಮಾಹಿತಿ

2025ರ SSLC ಪರೀಕ್ಷೆ ಮುಗಿದಿದ್ದು, ಈಗಾಗಲೇ ರಿಸಲ್ಟ್​ ಕೂಡ ಅನೌನ್ಸ್​ ಆಗಿದೆ. ಫಲಿತಾಂಶ ಬಂದಿರೋ ಕಾರಣ SSLC ಆದ್ಮೇಲೆ ಮುಂದೇನು? ಅನ್ನೋ ಪ್ರಶ್ನೆ ವಿದ್ಯಾರ್ಥಿಗಳಿಗೆ ಎದುರಾಗಿರುತ್ತೆ. ಪೋಷಕರು ಕೂಡ ಅದೇ ಚಿಂತೆಯಲ್ಲೇ ಇದ್ದಾರೆ. SSLC ನಂತರ ಏನು ಮಾಡಬೇಕು? ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು? ಅನ್ನೋ ಬಗ್ಗೆ ಕಂಪ್ಲೀಟ್​ ಡೀಟೈಲ್ಸ್ ಇಲ್ಲಿದೆ.

SSLC, ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ. ಕಾರಣ 1ನೇ ಕ್ಲಾಸಿನಿಂದ SSLCವರೆಗೂ ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಆಯ್ಕೆಗಳು ಇರೋದಿಲ್ಲ. ಎಲ್ಲರೂ ಎಲ್ಲವನ್ನೂ ಓದಬೇಕು. ಮೊದಲ ಬಾರಿಗೆ SSLC ಬಳಿಕ ಇವರಿಗೆ ಬೇಕಾದ ಕೋರ್ಸ್​ ಮಾಡಬಹುದು. ತುಂಬಾ ಆಪ್ಷನ್ಸ್​ ಇರೋದರಿಂದ ಯಾವ ಕೋರ್ಸ್​ ಮಾಡಬೇಕು ಅನ್ನೋ ಸಂಧಿಗ್ಧ ಪ್ರಶ್ನೆ, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎದುರಾಗೋದು ಕಾಮನ್​.

ಸಾಮಾನ್ಯವಾಗಿ SSLC ಬಳಿಕ ಎಲ್ಲರೂ ಚೂಸ್​ ಮಾಡೋದು ಪಿಯುಸಿ. ಪಿಯುಸಿಯಲ್ಲಿ ಬೇರೆಬೇರೆ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಬಹುದು. ಈ ಕೋರ್ಸ್‌ನಲ್ಲಿ ಮೂರು ವಿಭಾಗಗಳಲ್ಲಿ ಎಂದರೆ ಸೈನ್ಸ್, ಕಾಮರ್ಸ್, ಆರ್ಟ್ಸ. ಈ ವಿಭಾಗಗಳಲ್ಲಿ ಓದಬಹುದು. ನಿಮಗೆ ಯಾವುದು ಸೂಕ್ತ ಎನಿಸುತ್ತದೆ ಆ ಕೋರ್ಸ್‌ನಲ್ಲಿ ಅಧ್ಯಯನ ಮಾಡಬಹುದು.

ಇದನ್ನೂ ಓದಿ:ಸುಪ್ರೀಂಕೋರ್ಟ್ 52ನೇ ಮುಖ್ಯ ನ್ಯಾಯಮೂರ್ತಿಯಾಗಿ BR ಗವಾಯಿ ಪ್ರಮಾಣ ವಚನ ಸ್ವೀಕಾರ

publive-image

ಪಿಯುಸಿ ಸೈನ್ಸ್​ 

ಎಸ್‌ಎಸ್‌ಎಲ್‌ಸಿ ಮುಗಿಸಿದವರು ಪಿಯುಸಿ ಮಾಡಬೇಕು ಅಂತಿರುತ್ತಾರೆ. ಅದರಲ್ಲೂ ಸೈನ್ಸ್​ ಮಾಡಬೇಕು ಅನ್ನೋರು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಜೀವಶಾಸ್ತ್ರ ಅಂದರೆ PCMB ಮಾಡಬಹುದು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ ಅಂದ್ರೆ PCMC ಕೂಡ ಬೆಸ್ಟ್​​ ಚಾಯ್ಸ್​. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ ಅಂದ್ರೆ PCME ಕೂಡ ಆಯ್ಕೆ ಮಾಡಿಕೊಳ್ಳಬಹುದು.

ಕಾಮರ್ಸ್​​​ ಕೋರ್ಸ್​ಗಳು..

ಇನ್ನು ವಾಣಿಜ್ಯ ವಿಭಾಗದಲ್ಲಿ ಯಾರಿಗೆ ಅರ್ಥಶಾಸ್ತ್ರ ಮತ್ತು ಅಕೌಂಟೆನ್ಸಿ ವಿಷಯದಲ್ಲಿ ತಮ್ಮ ವೃತ್ತಿಜೀವನ ಕಟ್ಟಿಕೊಳ್ಳಬೇಕು ಅನ್ನೋ ಆಸಕ್ತಿ ಇದೆಯೋ ಅವರು ಕಾಮರ್ಸ್​​ ತೆಗೆದುಕೊಳ್ಳಬಹುದು. ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಹಣಕಾಸು ಸಲಹೆಗಾರರಾಗಿ, ಚಾರ್ಟರ್ಡ್‌ ಅಕೌಂಟೆಂಟ್ ಕ್ಷೇತ್ರದಲ್ಲಿ ಮುಂದುವರೆಯುವುದಕ್ಕೆ ಅವಕಾಶ ನೀಡುತ್ತದೆ. ಯಾವ ವಿದ್ಯಾರ್ಥಿ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಮುಂದುವರಿಯುವ ಆಸಕ್ತಿ ಇದೆಯೋ ಅವರು ಕೂಡ ಕಾಮರ್ಸ್​​ ಮಾಡಬಹುದು.

ಇನ್ನೂ ಆರ್ಟ್ಸ್​​ ಬಗ್ಗೆ..

ಕಲೆ- ಭಾಷಾ ವಿಷಯದಲ್ಲಿ ಪಾಂಡಿತ್ಯ ಇರೋರು ಆರ್ಟ್ಸ್​ ತೆಗೆದುಕೊಳ್ಳಬಹುದು. ಇದು ಹಲವಾರು ಅವಕಾಶಗಳನ್ನು ಒದಗಿಸಿಕೊಡಬಹುದು. ಪತ್ರಿಕೋದ್ಯಮ, ಡಿಸೈನಿಂಗ್, ಸೋಶಿಯಲ್ ವರ್ಕ್ ಹೀಗೆ ಹಲವು ಕ್ಷೇತ್ರದಲ್ಲಿ ಮುಂದುವರಿಯಲು ಆರ್ಟ್ಸ್​ ಮಾಡೋದು ಉತ್ತಮ. ಮುಂದೆ ಸಿವಿಲ್​ ಸರ್ವೀಸ್​, ಟೀಚಿಂಗ್​​ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು.

ಇಷ್ಟೇ ಅಲ್ಲ ಎಸ್ಎಸ್ಎಲ್ಸಿ ನಂತರ ಡಿಪ್ಲೊಮ ಇಂಜಿನಿಯರಿಂಗ್ ಮಾಡುವುದಕ್ಕೂ ಅವಕಾಶವಿದೆ. ಅದಲ್ಲದೆ ಎಸ್‌ಎಸ್‌ಎಲ್ಸಿ ಜೊತೆಗೆ ಸರ್ಟಿಫಿಕೇಟ್ ಕೋರ್ಸ್​ಗಳು ಬೇಕಾಗಿದ್ದಲ್ಲಿ ಇಂಜಿನಿಯರಿಂಗ್‌ನಲ್ಲಿ ನೀವು ಡಿಪ್ಲೊಮ ಮಾಡಬಹುದು.

ಇದನ್ನೂ ಓದಿ: NHM ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ ಗುಡ್​ನ್ಯೂಸ್​.. ಬಿಗ್ ಆಫರ್ ಕೊಟ್ಟ ಆರೋಗ್ಯ ಇಲಾಖೆ..!

publive-image

ಇಂಜಿನಿಯರಿಂಗ್ ಡಿಪ್ಲೊಮ ಕೋರ್ಸುಗಳು ಯಾವುದು ಅಂತಾ ನೋಡೋದಾದ್ರೆ.. ಡಿಪ್ಲೊಮ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಡಿಪ್ಲೊಮ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಡಿಪ್ಲೊಮ ಇನ್ ಸಿವಿಲ್ ಇಂಜಿನಿಯರಿಂಗ್, ಡಿಪ್ಲೊಮ ಇನ್ ಕಂಪ್ಯೂಟರ್ ಸೈನ್ಸ್.. ಇವು ಎಂಜಿನಿಯರಿಂಗ್ ಡಿಪ್ಲೊಮ ಕೋರ್ಸ್‌ಗಳು. SSLC ಬಳಿಕ ಈ ಕೋರ್ಸ್​ಗಳು ಮಾಡಬಹುದು.
ವಿದ್ಯಾರ್ಥಿಗಳು ಎಂಜಿನಿಯರಿಂಗ್ ಡಿಪ್ಲೊಮ ಕೋರ್ಸ್ ಅಲ್ಲದೆ ಬೇರೆ ಡಿಪ್ಲೊಮಾ ಕೋರ್ಸ್‌ಗಳನ್ನು ಕೂಡ ಆಯ್ಕೆ ಮಾಡುವುದಕ್ಕೆ ಅವಕಾಶವಿದೆ. ಆದರೆ ವಿದ್ಯಾರ್ಥಿಗಳು ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವಾಗ ಮೊದಲು ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸುವುದು ಉತ್ತಮ.

ಡಿಪ್ಲೊಮ ಇನ್ ಫಾರ್ಮಸಿ, ಡಿಪ್ಲೊಮ ಇನ್ ನರ್ಸಿಂಗ್ ಮತ್ತು ಮಿಡ್ ವೈಫರಿ, ಡಿಪ್ಲೊಮ ಇನ್ ಇಂಟೀರಿಯರ್ ಡಿಸೈನಿಂಗ್, ಡಿಪ್ಲೊಮ ಇನ್ ಪ್ರಿಂಟಿಂಗ್ ಟೆಕ್ನಾಲಜಿ, ಡಿಪ್ಲೊಮ ಟೂಲ್ ಆಂಡ್ ಡೈ ಮೇಕಿಂಗ್, ಡಿಪ್ಲೊಮ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ, ಡಿಪ್ಲೊಮ ಇನ್ ಪೌಲ್ಟ್ರಿ, ಡಿಪ್ಲೊಮ ಇನ್ ಲೆದರ್ ಟೆಕ್ನಾಲಜಿ, ಡಿಪ್ಲೊಮ ಇನ್ ಮ್ಯೂಸಿಕ್(ಕರ್ನಾಟಿಕ್ ಮತ್ತು ಸಂಗೀತ), ಡಿಪ್ಲೊಮ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಡಿಪ್ಲೊಮ ಇನ್ ಫುಡ್ ಟೆಕ್ನಾಲಜಿ ಹೀಗೆ ಹಲವು ಆಯ್ಕೆಳಿವೆ. ನಿಮಗೆ ಯಾವುದು ಸುಲಭ ಎನಿಸುತ್ತದೋ ಅದನ್ನೇ ಮಾಡೋದು ಬೆಸ್ಟ್​.

ಇದನ್ನೂ ಓದಿ: ಹುದ್ದೆಗಳಿಗೆ ಅರ್ಜಿ ಆಹ್ವಾನ.. ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿದ್ರೆ 50 ಸಾವಿರಕ್ಕಿಂತ ಹೆಚ್ಚು ಸ್ಯಾಲರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment