/newsfirstlive-kannada/media/post_attachments/wp-content/uploads/2025/05/Suhas-shetty-udupi-Mangalore.jpg)
ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಿದೆ. ನಿನ್ನೆ ರಾತ್ರಿ ನಡೆದ ಡೆಡ್ಲಿ ಅಟ್ಯಾಕ್‌ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಸುಹಾಸ್ ಶೆಟ್ಟಿ ಪಾರ್ಥಿವ ಶರೀರ ಬಂಟ್ವಾಳದ ಪುಳಿಮಜಲಿನಲ್ಲಿರುವ ನಿವಾಸ ತರಲಾಗಿದೆ. ಸುಹಾಸ್ ಶೆಟ್ಟಿ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸುಹಾಸ್ ಶೆಟ್ಟಿ ನಿವಾಸದ ಬಳಿ ಸಾವಿರಾರು ಹಿಂದೂ ಕಾರ್ಯಕರ್ತರು ಜಮಾಯಿಸಿದ್ದು, ಸುಹಾಸ್ ಶೆಟ್ಟಿ ಸಾವಿಗೆ ಕಂಬನಿ ಮಿಡಿದಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಸುಹಾಸ್ ಶೆಟ್ಟಿಯ ಅಂತಿಮ ದರ್ಶನ ಪಡೆದಿದ್ದು, ಸುಹಾಸ್ ಶೆಟ್ಟಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಮಂಗಳೂರು ಉದ್ವಿಗ್ನ, 3 ಕಡೆ ದಾಳಿ!
ಸುಹಾಸ್ ಶೆಟ್ಟಿ ಅಂತಿಮ ಯಾತ್ರೆಯ ಬೆನ್ನಲ್ಲೇ ಮಂಗಳೂರು ಉದ್ವಿಗ್ನಗೊಂಡಿದೆ 3 ಕಡೆ ಪ್ರತೀಕಾರದ ದಾಳಿಯಾಗಿದೆ. ಕಣ್ಣೂರು, ಕೊಂಚಾಡಿ ಹಾಗೂ ಉಳ್ಳಾಲದಲ್ಲಿ ಯುವಕರು ಅಟ್ಯಾಕ್ ಮಾಡಿದ್ದು, ಚಾಕು ಇರಿದಿದ್ದಾರೆ. ಕೊಂಚಾಡಿ ಯುವಕನ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಣ್ಣೂರಿನಲ್ಲಿ ಇರ್ಷಾದ್ ಮೇಲೆ 5 ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ. ಉಳ್ಳಾಲದಲ್ಲಿ ಫೈಜಲ್ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು, ಗಾಯಗಳಾಗಿವೆ.
ಇದನ್ನೂ ಓದಿ: ಮೊದಲೇ ಆತಂಕ ಇತ್ತು, ಮಗನೇ ರಾತ್ರಿ ಬೇಗ ಮನೆಗೆ ಬಾ ಎನ್ನುತ್ತಿದ್ದೆ.. ಸುಹಾಸ್ ಶೆಟ್ಟಿ ತಂದೆ ಕಣ್ಣೀರು
ಇದೇ ವೇಳೆ ಉಡುಪಿಯ 1 ಕಡೆ ಓರ್ವನ ಮೇಲೆ ದಾಳಿಯಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ