newsfirstkannada.com

ರೇವಣ್ಣ ಬಂಧನದ ಬೆನ್ನಲ್ಲೇ ಮೊಬೈಲ್​ ಸೀಜ್​.. ಏನೆಲ್ಲಾ ಸಿಕ್ತು ಗೊತ್ತಾ?

Share :

Published May 5, 2024 at 11:28am

Update May 5, 2024 at 11:34am

    ಮಹಿಳೆ ಕಿಡ್ನಾಪ್​ ಪ್ರಕರಣದ ಹಿನ್ನಲೆ H D ರೇವಣ್ಣ ಬಂಧನ

    ನಿನ್ನೆ ಸಂಜೆ ದೇವೇಗೌಡರ ಮನೆಯಿಂದಲೇ ರೇವಣ್ಣನವರ ಬಂಧನ

    ಮೊಬೈಲ್ ಸೀಜ್ ಮಾಡಿ ಡೇಟಾ ಪರಿಶೀಲನೆ ಮಾಡುತ್ತಿರೋ ಅಧಿಕಾರಿಗಳು

ಹಾಸನ ಅಶ್ಲೀಲ ವಿಡಿಯೋ ಕೇಸ್​​ ಮತ್ತು ಮಹಿಳೆ ಕಿಡ್ನಾಪ್​ ಪ್ರಕರಣದ ಹಿನ್ನಲೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ಬಂಧಿಸಲಾಗಿದೆ. ಎಸ್​ಐಟಿ ತಂಡ ನಿನ್ನೆ ಸಂಜೆ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಆದರೆ ಬಂಧನದ ಬೆನ್ನಲ್ಲೇ ಅವರ ಮೊಬೈಲನ್ನು ಸೀಜ್ ಮಾಡಲಾಗಿದೆ.

ಎಸ್.ಐ.ಟಿ ಅಧಿಕಾರಿಗಳು ರೇವಣ್ಣನವರ ಮೊಬೈಲ್ ಸೀಜ್ ಮಾಡಿದ್ದಲ್ಲದೆ ಡೇಟಾ ಪರಿಶೀಲನೆ ಮಾಡಿದ್ದಾರೆ. ಮೊಬೈಲ್ ಚಾಟಿಂಗ್, ಕಾಲ್, ಸಿಡಿಆರ್ ಪರಿಶೀಲನೆಗೆ ಮುಂದಾಗಿರೋ ಎಸ್.ಐ.ಟಿ ಅಧಿಕಾರಿಗಳು ಮುಂದಾಗಿದ್ದಾರೆ. ಕಿಡ್ನಾಪ್ ಕೇಸ್ ಆಗಿರುವ ಕಾರಣದಿಂದ ಟೆಕ್ನಿಕಲ್ ಎವಿಡೆನ್ಸ್​ಗಾಗಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಅಧಿಕಾರಿಗಳು ಮೊಬೈಲ್​ ಪರಿಶೀಲನೆ ನಡೆಸುತ್ತಿದ್ದಾರೆ. ಪೂರ್ಣ ತನಿಖೆಯ ಬಳಿಕ ಮೊಬೈಲ್​ನಲ್ಲಿ ಏನೆಲ್ಲಾ ಸಿಕ್ತು ಎಂಬ ಸಂಗತಿ ಬಹಿರಂಗಪಡಿಸಲಿದ್ದಾರೆ

ಮೆಡಿಕಲ್​ ಚೆಕಪ್​ ಮಾಡಿಸಿಕೊಂಡ ರೇವಣ್ಣ

ಬಂಧನದ ಬಳಿಕ ಸಿಐಡಿ ಕಚೇರಿಯಿಂದ ಬೌರಿಂಗ್ ಆಸ್ಪತ್ರೆಗೆ ರೇವಣ್ಣರನ್ನ ಕರೆದೊಯ್ದ ಎಸ್​ಐಟಿ ಪೊಲೀಸರು ಮೆಡಿಕಲ್ ಚೆಕಪ್ ಮಾಡಿಸಿದ್ದಾರೆ. ಬರೋಬ್ಬರಿ 2 ಗಂಟೆ ರೇವಣ್ಣ ಆರೋಗ್ಯ ತಪಾಸಣೆ ನಡೆಸಿದ ಆರೋಗ್ಯ ಸಿಬ್ಬಂದಿ, ಬಿ.ಪಿ, ಶುಗರ್, ಯೂರಿನ್, ಬ್ಲಡ್​ ಚೆಕಪ್​ ಮಾಡಿದ್ದಾರೆ. ಈ ವೇಳೆ ರೇವಣ್ಣಗೆ ಅಧಿಕ ರಕ್ತದೊತ್ತಡ ಕಾಣಿಸಿಕೊಂಡ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಇಸಿಜಿ ಸಹ ಮಾಡಿಸಲಾಗಿದೆ.

ಇದನ್ನೂ ಓದಿ: ರೇವಣ್ಣ ಅರೆಸ್ಟ್.. ಭಾರತದತ್ತ ಪ್ರಜ್ವಲ್​ ಮುಖ.. ಇಂದು​ ಬೆಂಗಳೂರಿಗೆ ​ರಿಟರ್ನ್​? 

ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್​ ಚೆಕಪ್​ ಮುಗಿಸಿದ ಬಳಿಕ ಹೆಚ್​.ಡಿ ರೇವಣ್ಣರನ್ನ ಸಿಐಡಿ ಕಚೇರಿಗೆ ವಾಪಸ್​ ಕರೆತರಲಾಯ್ತು. ರೇವಣ್ಣಗಾಗಿ ಹೊಸ ಹಾಸಿಗೆ ಹಾಗೂ ಬೆಡ್ ಶೀಟ್ ವ್ಯವಸ್ಥೆ ಮಾಡಲಾಗಿತ್ತು. ಬಂಧನಕ್ಕೆ ಒಳಗಾಗಿ ಸಿಐಡಿ ಕಚೇರಿಯಲ್ಲೇ ರಾತ್ರಿ ಕಳೆಯುವಂತಾಯ್ತು.

ಇದನ್ನೂ ಓದಿ: 100 ರೂಪಾಯಿಗೆ ಮಗು ಮಾರಾಟ.. ಮದ್ಯವ್ಯಸನಿ ತಾಯಿಯಿಂದ 4 ತಿಂಗಳ ಮಗುವಿನ ರಕ್ಷಣೆ

ರೇವಣ್ಣ ವಿರುದ್ಧ ಮತ್ತಷ್ಟು ಕೇಸ್​ ದಾಖಲಾಗುವ ಸಾಧ್ಯತೆ

ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡ್ತಿರೋ ಹಾಸನ ಅಶ್ಲೀಲ ವಿಡಿಯೋಗಳ ಹರಿದಾಟ ಪ್ರಕರಣ ಸಂಬಂಧ ಎರಡು ಕೇಸ್​ ದಾಖಲಾಗಿದೆ. ಸಂತ್ರಸ್ತೆಯಿಂದಲೇ ಹೊಳೆನರಸೀಪುರ ಠಾಣೆಯಲ್ಲಿ ಮೊದಲ ಕೇಸ್​ ದಾಖಲಾದ್ರೆ, ಸಂತ್ರಸ್ತೆ ಕಿಡ್ನ್ಯಾಪ್ ಮಾಡಿರೋ ಆರೋಪದಡಿ ಮೈಸೂರಿನ ಕೆ.ಆರ್​ ನಗರದಲ್ಲಿ ಎರಡನೇ ಕೇಸ್​ ದಾಖಲಾಗಿ ರೇವಣ್ಣ ಬಂಧನವೂ ಆಗಿದೆ. ಹೀಗಾಗಿ ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣ ಸಂಬಂಧ ಮತ್ತಷ್ಟು ಕೇಸ್​ ದಾಖಲಾಗೋ ಸಾಧ್ಯತೆ ಇದೆ. ಸರ್ಕಾರ ಕಠಿಣ ನಿರ್ಧಾರಗಳ ಕಾರಣಕ್ಕೆ ಇನ್ನಷ್ಟು ಸಂತ್ರಸ್ತೆಯರು ಪ್ರಕರಣ ದಾಖಲಿಸಲು ಮುಂದಾಗಬಹುದು. ಒಂದು ವೇಳೆ ಈ ಸಂಬಂಧ ಇನ್ಯಾವುದೇ ಕೇಸ್​ ದಾಖಲಾದ್ರು ರೇವಣ್ಣ ಹಾಗೂ ಪ್ರಜ್ವಲ್​ ರೇವಣ್ಣಗೆ ಮತ್ತಷ್ಟು ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇವಣ್ಣ ಬಂಧನದ ಬೆನ್ನಲ್ಲೇ ಮೊಬೈಲ್​ ಸೀಜ್​.. ಏನೆಲ್ಲಾ ಸಿಕ್ತು ಗೊತ್ತಾ?

https://newsfirstlive.com/wp-content/uploads/2024/05/H-D-Revanna.jpg

Load More