newsfirstkannada.com

VIDEO: ನಾವ್ ರೊಕ್ಕ ಕೊಡಂಗಿಲ್ಲ.. ಕರೆಂಟ್ ಬಿಲ್ ಬಳಿಕ KSRTC ಬಸ್‌ಗಳಲ್ಲಿ ಮಹಿಳೆಯರ ಪಟ್ಟು

Share :

24-05-2023

    200 ಯುನಿಟ್ ಉಚಿತ ವಿದ್ಯುತ್ ಭರವಸೆ

    ಕರೆಂಟ್ ಬಿಲ್ ಕಟ್ಟಲ್ಲ, ಟಿಕೆಟ್ ತಗಳೋದಿಲ್ಲ

    ಬಸ್ ಕಂಡಕ್ಟರ್ ಮೇಲೆ ಮಹಿಳೆಯರ ವಾರ್

200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಈ ಭರವಸೆ ಈಡೇರಿಸಲು ರಾಜ್ಯದ ಜನ ಒತ್ತಾಯಿಸುತ್ತಿದ್ದಾರೆ. ಕರೆಂಟ್ ಬಿಲ್ ಕಟ್ಟಲ್ಲ ಅಂತಾ ಪಟ್ಟು ಹಿಡಿದಿರುವ ಬೆನ್ನಲ್ಲೇ KSRTC ಬಸ್‌ಗಳಲ್ಲಿ ಮಹಿಳೆಯರು ಟಿಕೆಟ್ ಖರೀದಿ ಮಾಡಲ್ಲ ಎಂದು ಹೇಳುತ್ತಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ನಾವು ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವ ಭರವಸೆ ನೀಡಿದ್ರು. ಇದೀಗ ರಾಜ್ಯದ ಹಲವೆಡೆ ಬಸ್‌ಗಳಲ್ಲಿ ಟಿಕೆಟ್ ಪಡೆಯಲು ಮಹಿಳೆಯರು ನಿರಾಕರಿಸುತ್ತಿದ್ದಾರೆ. ವಿಜಯನಗರದಲ್ಲಿ ಕಂಡೆಕ್ಟರ್ ಟಿಕೆಟ್ ತೆಗೆದುಕೊಳ್ಳಿ ಎಂದಿದ್ದಕ್ಕೆ ಮಹಿಳೆ ಫುಲ್ ಗರಂ ಆಗಿದ್ದಾರೆ. ಹೆಣ್ಮಕ್ಕಳಿಗೆ ಬಸ್ ದರ ಫ್ರೀ ಎಂದಿದ್ದಾರಲ್ರೀ ನಾವು ಟಿಕೆಟ್ ತೆಗೆದುಕೊಳ್ಳಲ್ಲ ಎಂದು ಸಖತ್ ಕ್ಲಾಸ್ ತಗೊಂಡಿದ್ದಾರೆ.

ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ಬಸ್ ಟಿಕೆಟ್ ಪಡೆಯಲು ಕಂಡೆಕ್ಟರ್ ಜೊತೆ ಅಜ್ಜಿ ವಾಗ್ವಾದ ನಡೆಸಿದ್ದಾರೆ. ಬಸ್ ನಿರ್ವಾಹಕ ಟಿಕೆಟ್‌ ಪಡೆಯುವಂತೆ ಅಜ್ಜಿಗೆ ಮನವಿ ಮಾಡಿದ್ದಾರೆ. ಆದ್ರೆ ಬಸ್ ಓಡಾಟ ಫ್ರೀ ಇದೆ. ದುಡ್ಡು ಕೊಡಬೇಡ ಎಂದು ನಮ್ಮ ಶಾಸಕರು ಹೇಳಿದ್ದಾರೆ ಎಂದು ಅಜ್ಜಿ ದಬಾಯಿಸಿದ್ದಾರೆ. ಬೇಕಿದ್ರೆ ನಡು ರಸ್ತೆಯಲ್ಲೇ ನನ್ನನ್ನು ಇಳಿಸಿ, ಆದ್ರೆ ಟಿಕೆಟ್ ಮಾತ್ರ ತಗೊಳ್ಳಲ್ಲ ಎಂದು ಅಜ್ಜಿ ಪಟ್ಟು ಹಿಡಿದಿದ್ದಾರೆ. ಸರ್ಕಾರದ ಆದೇಶ ಇನ್ನೂ ನಮಗೆ ಬಂದಿಲ್ಲ ಎಂದು ಬಸ್ ಕಂಡಕ್ಟರ್ ಎಷ್ಟೇ ಹೇಳಿದ್ರೂ ಅಜ್ಜಿ ಮಾತ್ರು ಯಾವುದೇ ಕಾರಣಕ್ಕೂ ಟಿಕೆಟ್ ಪಡೆಯಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಅಜ್ಜಿ ಕಂಡಕ್ಟರ್ ಜೊತೆ ಟಿಕೆಟ್‌ಗಾಗಿ ಜಗಳ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ನಾವ್ ರೊಕ್ಕ ಕೊಡಂಗಿಲ್ಲ.. ಕರೆಂಟ್ ಬಿಲ್ ಬಳಿಕ KSRTC ಬಸ್‌ಗಳಲ್ಲಿ ಮಹಿಳೆಯರ ಪಟ್ಟು

https://newsfirstlive.com/wp-content/uploads/2023/05/No-Bus-Ticket.jpg

Load More