/newsfirstlive-kannada/media/post_attachments/wp-content/uploads/2024/07/niveditha.jpg)
ಕನ್ನಡದ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಬದುಕು ಅಂತ್ಯ ಕಂಡಿದೆ. ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಸ್ಟಾರ್ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದರು. ಡಿವೋರ್ಸ್ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಖುದ್ದು ಚಂದನ್, ನಿವೇದಿತಾ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದರು. ಆ ಬೆನ್ನಲ್ಲೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದೂರ ದೂರ ಆಗಿದ್ದಾರೆ. ಆದರೆ ನಿವೇದಿತಾ ಗೌಡ ಅವರು ಆಗಾಗ ಇನ್ಸ್ಟಾಗ್ರಾಮ್ನಲ್ಲಿ ಪ್ರತ್ಯಕ್ಷರಾಗುತ್ತಾ ಇರುತ್ತಾರೆ.
ಇದನ್ನೂ ಓದಿ:PhonePe ರಾಯಭಾರತ್ವದಿಂದ ಹೊರಬರುತ್ತಾರಾ ಕಿಚ್ಚ? ಈ ಸಂಗತಿ ನಿಜಾನಾ?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್, ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಮೂಲಕ ನಿವೇದಿತಾ ಗೌಡ ಅವರು ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ. ಆಗಾಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸದ್ದಿಯಲ್ಲಿ ಇರುತ್ತಿದ್ದರು. ಕೆಲವು ದಿನಗಳಿಂದ ಚಂದನ್ ಶೆಟ್ಟಿ ಡಿವೋರ್ಸ್ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಶೇರ್ ಮಾಡಿಕೊಂಡಿರಲಿಲ್ಲ. ಹೀಗಾಗಿ ಅವರ ಅಭಿಮಾನಿಗಳು ಏಕೆ ನಿವಿ ತುಂಬಾ ಸೈಲೆಂಟ್ ಆಗಿದ್ದೀರಿ? ಯಾವುದೇ ಪೋಸ್ಟ್ ಹಾಕುತ್ತಿಲ್ಲ ಅಂತ ಕಾಮೆಂಟ್ ಮಾಡುತ್ತಿದ್ದರು.
View this post on Instagram
ಡಿವೋರ್ಸ್ ಬೆನ್ನಲ್ಲೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಆ ವಿಡಿಯೋಗಳನ್ನು ನೋಡಿದ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ. ಕಾರಣ ನಿವೇದಿತಾ ಗೌಡ ಅವರು ಕನ್ನಡ ಹಾಡುಗಳನ್ನು ಬಿಟ್ಟು ಉಳಿದ ಎಲ್ಲಾ ಭಾಷೆಯ ಸಾಂಗ್ಗೆ ರೀಲ್ಸ್ ಮಾಡಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳು ಚಂದನ್ ಶೆಟ್ಟಿ ಅವರನ್ನು ಮರೆತ ಹಾಗೇ, ಕನ್ನಡವನ್ನು ಮರೆತು ಬಿಟ್ರಾ ಎಂದು ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ