ಹೇ ಕೃಷ್ಣ.. ತಿರುಪತಿ ಬೆನ್ನಲ್ಲೇ ಮಥುರಾ ದೇವಾಲಯದ ಪ್ರಸಾದದ ಮೇಲೂ ಅನುಮಾನ!

author-image
admin
Updated On
ಹೇ ಕೃಷ್ಣ.. ತಿರುಪತಿ ಬೆನ್ನಲ್ಲೇ ಮಥುರಾ ದೇವಾಲಯದ ಪ್ರಸಾದದ ಮೇಲೂ ಅನುಮಾನ!
Advertisment
  • ದಕ್ಷಿಣ ಭಾರತದಲ್ಲಿ ತಿಮ್ಮಪ್ಪನ ಪ್ರಸಾದದಿಂದ ಅಲ್ಲೋಲ ಕಲ್ಲೋಲ
  • ಮಥುರಾದ ಕೃಷ್ಣ ದೇವಾಲಯದ ಪ್ರಸಾದದ ಬಗ್ಗೆಯೂ ಆಕ್ಷೇಪ
  • ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ನಡೆಯೇನು?

ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು, ಮೀನಿನ ಎಣ್ಣೆಯ ಕಲಬೆರಕೆ ಕೋಟ್ಯಾಂತರ ಭಕ್ತರಿಗೆ ಆಘಾತವನ್ನು ತಂದಿದೆ. ಈ ಅಪವಿತ್ರದ ವಿಚಾರ ಬೆಳಕಿಗೆ ಬಂದ ಮೇಲೆ ತಿರುಮಲದ ವೆಂಕಟೇಶ್ವರ ದೇವಾಲಯದಲ್ಲಿ ಮಹಾಶಾಂತಿ ಯಾಗ ಮಾಡಿ ಸಂಪ್ರೋಕ್ಷಣಾ ಕಾರ್ಯ ಮಾಡಲಾಗಿದೆ.

publive-image

ದಕ್ಷಿಣ ಭಾರತದಲ್ಲಿ ಈ ತಿಮ್ಮಪ್ಪನ ಪ್ರಸಾದ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವಾಗಲೇ ಉತ್ತರ ಭಾರತದಲ್ಲೂ ಕಲಬೆರಕೆಯ ಕೂಗು ಕೇಳಿ ಬಂದಿದೆ. ಉತ್ತರ ಪ್ರದೇಶ ಮಥುರಾದ ಕೃಷ್ಣ ದೇವಾಲಯದ ಪ್ರಸಾದದ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಅವರು ಈ ಬಗ್ಗೆ ಗಮನಹರಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

publive-image

ಮಥುರಾ ದೇವಾಲಯದಲ್ಲಿ ಖೋವಾ ಪ್ರಸಾದ ನೀಡಲಾಗುತ್ತಿದೆ. ಆದರೆ ಅದು ಈಗ ಗುಣಮಟ್ಟದಿಂದ ಕೂಡಿಲ್ಲ ಸಂಸದೆ ಡಿಂಪಲ್ ಯಾದವ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರವು ಮಥುರಾ ದೇವಾಲಯದ ಪ್ರಸಾದದ ಗುಣಮಟ್ಟದ ಕಡೆ ಗಮನ ಕೊಡಬೇಕು ಎಂದಿದ್ದಾರೆ.

ಇದನ್ನೂ ಓದಿ: ಸರ್ಕಾರದಿಂದ ದೇಗುಲ, ಮಠಗಳನ್ನ ಮುಕ್ತಗೊಳಿಸಿ -ಸಂಚಲನ ಮೂಡಿಸಿದ ಮಂತ್ರಾಲಯ ಶ್ರೀಗಳ ಹೇಳಿಕೆ 

ಉತ್ತರಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಇಂತಹದೊಂದು ಆಕ್ಷೇಪ ವ್ಯಕ್ತಪಡಿಸಿರೋದು ಆತಂಕಕ್ಕೆ ಕಾರಣವಾಗಿದೆ. ಇದರ ಜೊತೆಗೆ ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರು ಕೂಡ ಇದೇ ಮಾತನ್ನು ಹೇಳಿದ್ದಾರೆ. ನಾನು ಕೂಡ 2 ವರ್ಷದಿಂದ ಪ್ರಸಾದದ ಗುಣಮಟ್ಟದ ಬಗ್ಗೆ ಹೇಳುತ್ತಿದ್ದೇನೆ. ಮಥುರಾ ಬೃಂದಾವನ ದೇವಾಲಯದ ಪ್ರಸಾದದ ಬಗ್ಗೆ ತನಿಖೆಯಾಗಬೇಕು ಎಂದು ಬ್ರಿಜ್ ಭೂಷಣ್ ಸಿಂಗ್ ಅವರು ಒತ್ತಾಯಿಸಿದ್ದಾರೆ.

ತಿರುಪತಿ ಲಡ್ಡು ಪ್ರಸಾದ ಇಡೀ ದೇಶದಲ್ಲೇ ಸಂಚಲನವನ್ನು ಸೃಷ್ಟಿಸಿದೆ. ಮಥುರಾ ದೇವಾಲಯಕ್ಕೂ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಸದ್ಯ ಪ್ರತಿಪಕ್ಷ ನಾಯಕರ ಈ ಆರೋಪ ರಾಜಕೀಯ ತಿರುವು ಪಡೆದಿದೆ. ಆದರೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಈ ಬಗ್ಗೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತೆ ಅನ್ನೋದು ಕೃಷ್ಣ ಭಕ್ತರಿಗೆ ಮಹತ್ವದ್ದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment