ವಾರ್ನಿಂಗ್‌ ಕೊಟ್ರು ಬುದ್ಧಿ ಕಲಿಯದ ಬುಜ್ಜಿ.. ರಜತ್ ಕಿಶನ್ ಮತ್ತೆ ಮಾಡಿಕೊಂಡ ಯಡವಟ್ಟು ಏನು?

author-image
Veena Gangani
Updated On
ವಾರ್ನಿಂಗ್‌ ಕೊಟ್ರು ಬುದ್ಧಿ ಕಲಿಯದ ಬುಜ್ಜಿ.. ರಜತ್ ಕಿಶನ್ ಮತ್ತೆ ಮಾಡಿಕೊಂಡ ಯಡವಟ್ಟು ಏನು?
Advertisment
  • ಮಾರ್ಚ್ 25ರಂದು ಪೋಲಿಸರ ಕೈಯಲ್ಲಿ ಲಾಕ್​ ಆಗಿದ್ದ ಸ್ಪರ್ಧಿಗಳು
  • ಬಿಗ್​ಬಾಸ್​ ಮಾಜಿ ಸ್ಪರ್ಧಿಗಳಾಗಿದ್ದ ವಿನಯ್ ಗೌಡ, ರಜತ್​ ಕಿಶನ್​
  • ಪೊಲೀಸರು ವಾರ್ನಿಂಗ್​ ಕೊಟ್ಟು ಬುದ್ಧಿ ಕಲಿಯದ ಬುಜ್ಜಿ ರಜತ್​

ಬಿಗ್​ಬಾಸ್​ ಮಾಜಿ ಸ್ಪರ್ಧಿಗಳು ಸೋಷಿಯಲ್​ ಮೀಡಿಯಾದಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಬಿಗ್​ಬಾಸ್​ ಮಾಜಿ ಸ್ಪರ್ಧಿಯಾಗಿದ್ದ ರಜತ್​ ಕಿಶನ್ ಅದೇ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

ಇದನ್ನೂ ಓದಿ:BREAKING: ಬಿಗ್ ಬಾಸ್ ಖ್ಯಾತಿಯ ರಜತ್‌ ಕಿಶನ್ ಮತ್ತೆ ಬಂಧನ.. ಕಾರಣವೇನು?

publive-image

ಸೋಷಿಯಲ್​ ಮೀಡಿಯಾದಲ್ಲಿ ಮಚ್ಚು ಹಿಡಿದ ರೀಲ್ಸ್ ವೈರಲ್​ ಆಗುತ್ತಿದ್ದಂತೆ ವಿನಯ್ ಗೌಡ ಹಾಗೂ ರಜತ್​ ಕಿಶನ್​ನನ್ನು ಮಾರ್ಚ್ 25ರಂದು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆಯುತ್ತಿದ್ದಂತೆ ರಜತ್​ ಪತ್ನಿ ಅಕ್ಷತಾ ಫೈಬರ್ ಮಚ್ಚನ್ನು ನೀಡಿದ್ದರು. ರೀಲ್ಸ್​ನಲ್ಲಿ ಬಳಸಿದ ಅಸಲಿ ಮಚ್ಚಿಗೂ ಹಾಗೂ ಪೊಲೀಸರಿಗೆ ನೀಡಿದ್ದ ಫೈಬರ್ ಮಚ್ಚಿಗೂ ತುಂಬಾನೇ ವ್ಯತ್ಯಾಸ ಇದ್ದಿದ್ದರಿಂದ ಆರೋಪಿಗಳನ್ನು ಬಂಧನವಾಗಿತ್ತು.

publive-image

ಆದ್ರೆ ವಿಚಾರಣೆ ವೇಳೆ ರಜತ್​ ಅಸಲಿ ಸತ್ಯ ಬಾಯ್ಬಿಟ್ಟಿದ್ದರು. ಚಿತ್ರದುರ್ಗದ ರೇಣುಕಾಸ್ವಾಮಿ ಮೃತದೇಹ ಬಿಸಾಡಿದ್ದ ಸುಮ್ಮನಹಳ್ಳಿ ರಾಜಕಾಲುವೆ ಜಾಗದಲ್ಲೇ ರಜತ್ ಮಚ್ಚು ಬಿಸಾಡಿರೋದಾಗಿ ಒಪ್ಪಿಕೊಂಡಿದ್ದರು. ಆ ಕೂಡಲೇ ಪೊಲೀಸ್ ವಿನಯ್ ಹಾಗೂ ರಜತ್​ರನ್ನು ಸುಮ್ಮನಹಳ್ಳಿ ರಾಜಕಾಲುವೆ ಬಳಿ ಕರೆದುಕೊಂಡು ಹೋಗಿ ಮಹಜರ್ ನಡೆಸಿದ್ದರು. ಆದ್ರೆ, ಪೊಲೀಸರ ಮಹಜರ್ ವೇಳೆಯೂ ರೀಲ್ಸ್​ನಲ್ಲಿ ಬಳಸಿದ್ದ ಮಚ್ಚು ಪತ್ತೆಯಾಗಿರಲಿಲ್ಲ.

publive-image

ರೀಲ್ಸ್‌ನಲ್ಲಿ ಬಳಸಿದ್ದ ಮಚ್ಚು ಎಲ್ಲಿ ಹೋಯ್ತು ಅನ್ನೋ ಸ್ಪಷ್ಟ ಮಾಹಿತಿ ಇನ್ನೂ ಪೊಲೀಸರಿಗೆ ಲಭ್ಯವಾಗಿಲ್ಲ. ರೀಲ್ಸ್ ಕೇಸ್‌ನಲ್ಲಿ ಈಗಾಗಲೇ ರಜತ್ ಹಾಗೂ ವಿನಯ್​ ಗೌಡ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದರು. ಕೋರ್ಟ್‌ ಷರತ್ತು ಬದ್ಧ ಜಾಮೀನು ನೀಡಿದ ಹಿನ್ನೆಲೆಯಲ್ಲಿ ರಿಲೀಸ್ ಆಗಿದ್ದರು. ಆದ್ರೆ ಇದೀಗ ಮತ್ತೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ರಜತ್ ಕಿಶನ್ ಅವರು ಇಂದು ಮತ್ತೆ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

publive-image

ಹೀಗಿರುವಾಗ ರಜತ್​ ಕಿಶನ್​ ತಾನು ಇನ್​ಸ್ಟಾದಲ್ಲಿ ಶೇರ್ ಮಾಡಿಕೊಂಡ ವಿಡಿಯೋವನ್ನು ಡಿಲೀಟ್​ ಮಾಡಿರಲಿಲ್ಲ. ಆದ್ರೆ ರಜತ್​ ವಿಡಿಯೋ ಡಿಲೀಟ್​ ಮಾಡಿಲ್ಲ ಅನ್ನೋ ವಿಚಾರದ ಬಗ್ಗೆ ನ್ಯೂಸ್​ಫಸ್ಟ್​ ಸುದ್ದಿ ಬಿತ್ತರಿಸಿತ್ತು. ನ್ಯೂಸ್​​ ಫಸ್ಟ್​ ಸುದ್ದಿ ಬಿತ್ತರಿಸಿ ಬೆನ್ನಲ್ಲೇ ಪೊಲೀಸರ ಸೂಚನೆ ಮೆರೆಗೆ ರೀಲ್ಸ್ ಡಿಲೀಟ್ ಮಾಡಿದರು ರಜತ್ ಕಿಶನ್.

publive-image

ಇನ್ನೂ, ಪ್ರಕರಣದಲ್ಲಿ ಜಾಮೀನು ನೀಡಿದ್ದ ನ್ಯಾಯಾಲಯ ಪ್ರತಿ ವಿಚಾರಣೆಗೆ ಹಾಜರಾಗುವಂತೆ ಷರತ್ತು ವಿಧಿಸಿತ್ತು. ಆದ್ರೆ ರಜತ್ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿ ರಜತ್ ವಿರುದ್ಧ ವಾರೆಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ರಜತ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ರಜತ್ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಇಂದು ಮಧ್ಯಾಹ್ನ 1 ಗಂಟೆ ವೇಳೆಗೆ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment