/newsfirstlive-kannada/media/post_attachments/wp-content/uploads/2025/06/dog1.jpg)
ಬೆಂಗಳೂರು: ಮಹದೇವಪುರದ ಅಪಾರ್ಟ್ಮೆಂಟ್​ವೊಂದರಲ್ಲಿ ಮಹಿಳೆಯೊಬ್ಬಳು ತಾನು ಸಾಕಿದ್ದ ಲ್ಯಾಬ್ರಡಾರ್ ರಿಟ್ರೈವರ್ ನಾಯಿಗೆ ಚಿತ್ರ ಹಿಂಸೆ ಕೊಟ್ಟು ಸಾಯಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ ಜೀವ ಬಿಟ್ಟಿರೋ ನಾಯಿ ಮೃತದೇಹದ ಜೊತೆ ವಾಸ ಮಾಡಿರುವ ಶಾಕಿಂಗ್ ಘಟನೆ ಬೆಳಕಿಗೆ ಬಂದಿತ್ತು.
/newsfirstlive-kannada/media/post_attachments/wp-content/uploads/2025/06/Labrador-Retriever1.jpg)
ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಇದಾದ ಬಳಿಕ ಅಧಿಕಾರಿಗಳ ಮುಂದೆ ಮಹಿಳೆ ಶ್ವಾನ ಜೀವಬಿಟ್ಟು ನಾಲ್ಕು ದಿನ ಕಳೆದರು ಬದುಕಲಿ ಎಂದು ಪೂಜೆ ಮಾಡಿದ್ದೇನೆ. ಅದರ ಮುಂದೆ ಶಿವನ ಫೋಟೋ ಇಟ್ಟು ಶ್ವಾನ ಬದುಕಲಿ ಎಂದು ಪೂಜೆ ಮಾಡಿಸಿದ್ದೇನೆ ಅಂತ ಹೇಳಿ ಕೊಟ್ಟಿದ್ದಳು ಮಹಿಳೆ.
/newsfirstlive-kannada/media/post_attachments/wp-content/uploads/2025/06/Labrador-Retriever2.jpg)
ಆದ್ರೆ ಇದೀಗ ಬಗೆದಷ್ಟು ಮಹಿಳೆ ತ್ರಿಪರ್ಣಾಳ ಅವತಾರ ಬಯಲಾಗ್ತಿದೆ. ಪಾಲಿಕೆ ಅಧಿಕಾರಿಗಳಿಗೆ ಸೂಸೈಡ್​ ಮಾಡಿಕೊಳ್ಳೋದಾಗಿ ತ್ರಿಪರ್ಣಾ ಬೆದರಿಸ್ತಿದ್ದಾಳಂತೆ. ತ್ರಿಪರ್ಣಾ ಸಾಕ್ತಿದ್ದ ನಾಯಿಗಳ ನಿರಂತರ ಗೋಳಾಟ, ಚೀರಾಟಕ್ಕೆ ತ್ರಿಪರ್ಣಾ ವಿರುದ್ಧ ಈ ಹಿಂದೆಯೇ ಅಧಿಕಾರಿಗಳು ವಾರ್ನಿಂಗ್ ಕೊಟ್ಟಿದ್ರಂತೆ. ಅಂದಿನಿಂದ ತ್ರಿಪರ್ಣಾ ಸಾಕಿದ ಶ್ವಾನಗಳು ಪಾಲಿಕೆ ಅಬ್ಸರ್ವೇಷನ್​ನಲ್ಲಿದ್ವು. ಇದರಿಂದ ಸಮಯ ಕೊಡಬೇಕು. ಅದ್ಹೇಗೆ ದಿಢೀರ್ ಅಂತ ಬರ್ತೀರಾ ಅಂತಾ ತ್ರಿಪರ್ಣಾ ಹೈಡ್ರಾಮಾ ಸೃಷ್ಟಿಸಿದ್ದಾಳೆ. ಇಂತಹ ಕೇಸ್​ನಲ್ಲಿ ಸಮಯ ಕೊಡಲು ಬರಲ್ಲ ಎಂದಾಗ ತ್ರಿಪರ್ಣಾ ತಬ್ಬಿಬ್ಬಾಗಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us