/newsfirstlive-kannada/media/post_attachments/wp-content/uploads/2025/05/RAIN-26.jpg)
ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಮುಂಗಾರು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರ್ನಾಟಕ ಹವಾಮಾನ ಇಲಾಖೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದೆ. ಅದರಲ್ಲೂ ಜೂನ್ 09 ರಿಂದ 13 ರವರೆಗೆ ಭಾರೀ ಮಳೆ ಸಾಧ್ಯತೆ ಇದೆ ಎಂದಿದೆ. ಅಲ್ಲದೇ ಹಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಯಾವೆಲ್ಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​..
ಜೂನ್ 11: ಬಳ್ಳಾರಿ, ದಾವಣಗೆರೆ, ವಿಜಯನಗರ
ಜೂನ್ 12: ವಿಜಯನಗರ, ಕೊಡಗು, ದಾವಣಗೆರೆ, ಚಿಕ್ಕಬಳ್ಳಾಪುರ, ಬಳ್ಳಾರಿ, ವಿಜಯಪುರ, ಕಲಬುರಗಿ, ಬೆಳಗಾವಿ, ಬಾಲಕೋಟೆ ಮತ್ತು ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇನ್ನು, ಮಲೆನಾಡು, ಕರಾವಳಿ ಭಾಗದಲ್ಲೂ ಮಳೆರಾಯ ಆರ್ಭಟಿಸಲಿದ್ದಾನೆ.
ಇದನ್ನೂ ಓದಿ: ಬೆಂಗಳೂರಲ್ಲಿ ಒಂದು ಪಾಪದ ಕೆಲಸ.. ಪತ್ನಿಯ ರುಂಡ ಕಡಿದು ಠಾಣೆಗೆ ಬಂದ ಪತಿ, ಕಂದಮ್ಮ ಅನಾಥ
ಕಳೆದ ಎರಡ್ಮೂರು ವಾರಗಳ ಹಿಂದೆ ರಾಜ್ಯದಲ್ಲಿ ಭಾರೀ ಮಳೆಯಾಗಿತ್ತು. ಇದರಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದರು. ಒಂದು ವಾರ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ಬರಲು ಸಿದ್ಧನಾಗಿದ್ದಾನೆ. ಹವಾಮಾನ ಇಲಾಖೆಯ ಈ ಸುದ್ದಿ ಅನ್ನದಾತರಿಗೆ ಗುಡ್​​ನ್ಯೂಸ್ ಆಗಿದೆ. ಮುಂಗಾರ ಆರಂಭದಲ್ಲಿ ಬಿತ್ತನೆ ಕಾರ್ಯಗಳು ಶುರುವಾಗಬೇಕಿದೆ.
ಇದನ್ನೂ ಓದಿ: ಮದುವೆ ಆಗ್ತಿದ್ದ ಪತಿಗೆ ಮಂಟಪದಲ್ಲೇ ಚಪ್ಪಲಿ ಏಟು ಕೊಟ್ಟ ಪತ್ನಿ.. ಚಿತ್ರದುರ್ಗದಲ್ಲಿ ಶಾಕಿಂಗ್ ಘಟನೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us