ಅಂದು ಡೈಲಾಗ್.. ಇಂದು ದರ್ಶನ್ ಸಾಂಗ್​​ಗೆ ರಕ್ಷಕ್ ಬುಲೆಟ್ ಭರ್ಜರಿ ಡ್ಯಾನ್ಸ್; ಕ್ರೇಜಿಸ್ಟಾರ್ ಏನಂದ್ರು..?

author-image
Veena Gangani
Updated On
ಅಂದು ಡೈಲಾಗ್.. ಇಂದು ದರ್ಶನ್ ಸಾಂಗ್​​ಗೆ ರಕ್ಷಕ್ ಬುಲೆಟ್ ಭರ್ಜರಿ ಡ್ಯಾನ್ಸ್; ಕ್ರೇಜಿಸ್ಟಾರ್ ಏನಂದ್ರು..?
Advertisment
  • ವೀಕ್ಷಕರಿಗೆ ಸಖತ್​ ಮನರಂಜನೆ ನೀಡುತ್ತಿದೆ ಭರ್ಜರಿ ಬ್ಯಾಚುಲರ್ಸ್
  • ರಕ್ಷಕ್​ ಬುಲೆಟ್​ ಭರ್ಜರಿ ಡ್ಯಾನ್ಸ್​ ನೋಡಿ ಎಲ್ಲರೂ ಫುಲ್ ಶಾಕ್
  • ಬಿಗ್​ಬಾಸ್​ ಮೂಲಕ ಸಖತ್​ ಫೇಮಸ್​ ಆಗಿದ್ದ ರಕ್ಷಕ್​ ಬುಲೆಟ್

ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡುತ್ತಿದೆ. ಪ್ರಸ್ತುತವಾಗಿ ಜೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನಡೆಯುತ್ತಿದೆ. ಈ ಬಾರಿಯ ಭರ್ಜರಿ ಬ್ಯಾಚುಲರ್ಸ್​ ಕಾರ್ಯಕ್ರಮದಲ್ಲಿ ಧೂಳೆಬ್ಬಿಸುತ್ತಿದ್ದಾರೆ ರಕ್ಷಕ್​ ಬುಲೆಟ್​. ಹೌದು, ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10 ಮೂಲಕ ಸಖತ್​ ಫೇಮಸ್​ ಆಗಿದ್ದರು ರಕ್ಷಕ್​ ಬುಲೆಟ್​​, ಬಿಗ್​ಬಾಸ್​​ ಬಳಿಕ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ನಲ್ಲಿ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ.

ಇದನ್ನೂ ಓದಿ: ಮೂರನೇ ಮಹಡಿ ಹೊತ್ತಿ ಉರಿಯುತ್ತಿತ್ತು.. ಇಬ್ಬರು ಮಕ್ಕಳನ್ನ ರಕ್ಷಿಸಿ ತಾಯಿ ಗ್ರೇಟ್​ ಎಸ್ಕೇಪ್​..! Video

publive-image

ಇನ್ನೂ, ರಕ್ಷಕ್​ ಬುಲೆಟ್​​ಗೆ ಜೋಡಿಯಾಗಿ ಕನ್ನಡತಿ ಸೀರಿಯಲ್​ ಮೂಲಕ ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರೋ ನಟಿ ರಮೋಲ ಆಯ್ಕೆಯಾಗಿದ್ದಾರೆ. ಈ ಇಬ್ಬರ ಕಾಂಬಿನೇಷನ್​ ವೀಕ್ಷಕರಿಗೆ ಇಷ್ಟವಾಗಿದೆ. ಈ ವಾರ ಬ್ಯಾಚುಲರ್ಸ್​ಗಳಿಗೆ ಹೊಸ ಚಾಲೆಂಜ್​ ಎದುರಾಗಿದೆ. ಅದುವೇ ಲವ್​ ಕೆಮಿಸ್ಟ್ರಿ ರೌಂಡ್. ಬ್ಯಾಚುಲರ್ಸ್ ಮತ್ತು ಏಂಜಲ್ಸ್ ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡ್ಕೊಂಡಿದ್ದಾರೆ ಅಂತ ಈ ರೌಂಡ್ ಮೂಲಕ ಗೊತ್ತಾಗಲಿದೆ. ಹೀಗೆ ಜೀ ಕನ್ನಡ ರಿಲೀಸ್​ ಮಾಡಿರೋ ಪ್ರೋಮೋದಲ್ಲಿ ರಕ್ಷಕ್​ ಬುಲೆಟ್ ಹಾಗೂ ರಮೋಲ ಭರ್ಜರಿ ಡ್ಯಾನ್ಸ್​ ಮಾಡಿದ್ದಾರೆ.

publive-image


ವಿಶೇಷ ಎಂದರೆ ನಟ ದರ್ಶನ್​ ಹಾಗೂ ರಕ್ಷಿತಾ ಅಭಿನಯದ ಸೂಪರ್​ ಹಿಟ್​​ ಸಿನಿಮಾ ಸುಂಟರಗಾಳಿ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ ರಕ್ಷಕ್​ ಬುಲೆಟ್ ಹಾಗೂ ರಮೋಲ. ವೇದಿಕೆ ಮೇಲೆ ಸೇಮ್​ ಸೇಮ್​​ ದರ್ಶನ್​ ಹಾಗೂ ರಕ್ಷಿತಾರಂತೆ ಡ್ಯಾನ್ಸ್​ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಡ್ಯಾನ್ಸ್​ ನೋಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು, ರಮೋಲ ಅರಾಮ್​ ಆಗಿ ಡ್ಯಾನ್ಸ್​ ಮಾಡ್ತಾಳೆ. ನನ್ನ ಕಣ್​ ಅಂತೂ ಅವಳ ಮೇಲೆ ಜಾಸ್ತಿ ಹೋಗುತ್ತೆ ಅಂತ ಹೇಳಿದ್ದಾರೆ.

ಇನ್ನೂ, ಈ ಹಿಂದೆ ಇದೇ ವೇದಿಕೆ ಮೇಲೆ ರಕ್ಷಕ್​ ಬುಲೆಟ್​ ಬುಲ್​ ಬುಲ್​ ಸಿನಿಮಾದ ಒಂದು ಸೀನ್​ ಅನ್ನು ರೀ ಕ್ರಿಯೇಟ್ ಮಾಡಿದ್ದರು. ಇದೇ ವೇಳೆ ರಕ್ಷಕ್​ ಸೇಮ್ ಟು ಸೇಮ್​ ನಟ ದರ್ಶನ್​ರಂತೆ, ರಮೋಲಾ ರಚಿತಾ ರಾಮ್​ನಂತೆ ಬಟ್ಟೆಗಳನ್ನು ತೊಟ್ಟು ಡೈಲಾಗ್​ಗನ್ನು ವೇದಿಕೆ ಮೇಲೆ ರೀ ಕ್ರಿಯೇಟ್ ಮಾಡಿದ್ದಾರೆ. ಹೀಗೆ ಆ ಸಿನಿಮಾದಲ್ಲಿ ನಟ ದರ್ಶನ್ ಹೊಡೆದ ಡೈಲಾಂಗ್​ನಂತೆ ರಕ್ಷಕ್​ ಬುಲೆಟ್​ ಕೂಡ ರೀಪಿಟ್ ಮಾಡಿದ್ದಾರೆ. ಆದ್ರೆ ರಕ್ಷಕ್​ ‘ನಿಮ್ಮನ್ನ ನೋಡ್ತಾ ಇದ್ದ ಹಾಗೆಯೇ ಅಂದುಕೊಂಡೆ. ತಾಯಿ ಚಾಮುಂಡೇಶ್ವರಿನೇ ಬೆಟ್ಟದಿಂದ ಇಳಿದು, ಸೀರೆ-ಒಡವೆ ಎಲ್ಲಾ ಬಿಚ್ಚಿಟ್ಟು, ಪ್ಯಾಂಟು-ಶರ್ಟು ಹಾಕಿಕೊಂಡು ಸ್ವಿಜರ್ಲೆಂಡ್‌ಅಲ್ಲಿ ಒಳ್ಳೇ ಟ್ರಿಪ್‌ ಹೊಡೀತಾ ಇದ್ದಾರೆ ಅಂತ ಹೇಳಿದ್ದರು. ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಬಳಿಕ ರಕ್ಷಕ್ ಬುಲೆಟ್ ಈ ಬಗ್ಗೆ ರಕ್ಷಕ್​ಕ್ಷಮೆ ಕೇಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment