/newsfirstlive-kannada/media/post_attachments/wp-content/uploads/2024/09/PAVITRA_DARSHAN.jpg)
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ಚಾಮಿ ಕೇಸ್ನಲ್ಲಿ ನಟ ದರ್ಶನ್ಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಹೈಕೋರ್ಟ್ ನೀಡಿರುವ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆ ಆಗಲಿದೆ.
ಸುಪ್ರಿಂ ಕೋರ್ಟ್ಗೆ ಮೇಲ್ಮನವಿ ಮಾಡಲು ಗೃಹ ಇಲಾಖೆ ಈಗಾಗಲೇ ಅನುಮತಿ ನೀಡಿದೆ. ಲೇಟೆಸ್ಟ್ ವಿಚಾರ ಏನೆಂದರೆ ಪೊಲೀಸರು ಕಡತಗಳನ್ನು ಗೃಹ ಇಲಾಖೆಗೆ ರವಾನೆ ಮಾಡಿದ್ದಾರೆ. ಈಗಾಗಲೇ ಚಾರ್ಜ್ ಶೀಟ್ ಅನ್ನು ಪೊಲೀಸರು ಕನ್ನಡದಿಂದ ಇಂಗ್ಲಿಷ್ಗೆ ಭಾಷಾಂತರ ಮಾಡಿಸಿದ್ದಾರೆ. ಈ ಎಲ್ಲಾ ಕಡತಗಳನ್ನು ಗೃಹ ಇಲಾಖೆಗೆ ರವಾನೆ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ನಾಳೆ ಸುಪ್ರೀಂ ಕೋರ್ಟ್ಗೆ ಎಸ್ಪಿಪಿ ಮೇಲ್ಮನವಿ ಸಲ್ಲಿಸಲಿದ್ದಾರೆ.
ಇದನ್ನೂ ಓದಿ:ಯಶಸ್ವಿ ಜೈಸ್ವಾಲ್ ಔಟ್ ಇಲ್ಲ.. ಅಂಪೈರ್ ಮೋಸದಿಂದ ಆಸ್ಟ್ರೇಲಿಯಾಗೆ ಗೆಲುವು..!
ಪವಿತ್ರಾಗೂ ಸಂಕಷ್ಟ..!
ಡಿಸೆಂಬರ್ 13 ರಂದು ಹೈಕೋರ್ಟ್ ಏಕಸದಸ್ಯ ಪೀಠ ದರ್ಶನ್, ಪವಿತ್ರಗೌಡ ಸೇರಿ ಒಟ್ಟು ಏಳು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಇವರೆಲ್ಲರ ಜಾಮೀನು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಆಗಲಿದೆ. ದರ್ಶನ್, ಪವಿತ್ರಾಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್, ಜಗದೀಶ್ಗೆ ಜಾಮೀನು ಸಿಕ್ಕಿದೆ. ಸುಪ್ರೀಂ ಕೋರ್ಟ್ ಅನ್ ರೆಕಾರ್ಡ್ ವಕೀಲರಾಗಿ ಅನಿಲ್.ಸಿ ನಿಶಾನಿ ಅವರನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ:ನಟ ದರ್ಶನ್, ಕಿಚ್ಚ ಸುದೀಪ್ ಅಭಿಮಾನಿಗಳ ಮಧ್ಯೆ ಮತ್ತೆ ವಾರ್! ಬಾಸಿಸಂ ಕಾಲ ಮುಗಿತಾ? VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ