/newsfirstlive-kannada/media/post_attachments/wp-content/uploads/2025/03/rakshak5.jpg)
ರಕ್ಷಕ್ಗೆ ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದರೇ ಕಪ್ಪು ಮಸಿ ಹಾಕ್ತೀವಿ ಎಂದು ಹಿಂದೂ ಮುಖಂಡ ತೇಜಸ್ ಅವರು ವಾರ್ನಿಂಗ್ ಕೊಟ್ಟಿದ್ದಾರೆ. ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ ಮತ್ತು ಹಿಂದೂ ಪವಿತ್ರ ದೇವತೆಯಾದ ಚಾಮುಂಡೇಶ್ವರಿ ತಾಯಿಯ ಅವಹೇಳನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ರೀಲ್ಸ್ಗಾಗಿ ಮಚ್ಚು ಹಿಡಿದ ವಿನಯ್, ಬುಜ್ಜಿ ಜೈಲು ಪಾಲು.. ರಜತ್ ಪತ್ನಿ ಕಣ್ಣೀರು! ಇವತ್ತು ಜಾಮೀನು ಸಿಗುತ್ತಾ?
ಹೊಸ ಕಲಾವಿದ ಎಂದು ಗುರುತಿಸಲ್ಪಡುವ ರಕ್ಷಕ್ ಬುಲೆಟ್ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಅವಹೇಳನ ಮಾತನಾಡಿದ್ದಾರೆ. ಹಿಂದೂ ಧರ್ಮದ ಅತ್ಯುನ್ನತ ಮಾತೃಸ್ವರೂಪಿ ದೇವರಾದ ತಾಯಿ ಚಾಮುಂಡೇಶ್ವರಿಯ ಅವಹೇಳವನ್ನು ಕಾರ್ಯಕ್ರಮ ಒಂದರಲ್ಲಿ ಸಾರ್ವಜನಿಕವಾಗಿ ಮಾಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುತ್ತಿದೆ.
ರಕ್ಷಕ್ ಹೊಡೆದ ಡೈಲಾಗ್ ಏನು?
‘ನಿಮ್ಮನ್ನ ನೋಡ್ತಾ ಇದ್ದ ಹಾಗೆಯೇ ಅಂದುಕೊಂಡೆ. ತಾಯಿ ಚಾಮುಂಡೇಶ್ವರಿನೇ ಬೆಟ್ಟದಿಂದ ಇಳಿದು, ಸೀರೆ-ಒಡವೆ ಎಲ್ಲಾ ಬಿಚ್ಚಿಟ್ಟು, ಪ್ಯಾಂಟು-ಶರ್ಟು ಹಾಕಿಕೊಂಡು ಸ್ವಿಜರ್ಲೆಂಡ್‌ಅಲ್ಲಿ ಒಳ್ಳೇ ಟ್ರಿಪ್ ಹೊಡೀತಾ ಇದ್ದಾರೆ. ಇದೇ ಡೈಲಾಗ್ ಇದೀಗ ವಿವಾದದ ಕಿಡಿ ಹೊತ್ತಿಸಿದೆ. ಹೀಗಾಗಿ ಬಿಗ್ ಬಾಸ್ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ ಹಾಗೂ ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಅಲ್ಲದೇ ರಕ್ಷಕ್ ಬುಲೆಟ್ ವಿರುದ್ಧ ಇಂದು ಹಿಂದೂ ಕಾರ್ಯಕರ್ತ ಮಹೇಶ್ ಎಂಬುವವರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ದೂರು ಸಲ್ಲಿಸುತ್ತಿದ್ದಾರೆ.
ಹಿಂದೂ ಮುಖಂಡ ತೇಜಸ್ ಹೇಳಿದ್ದೇನು?
ಈ ಬಗ್ಗೆ ಮಾತಾಡಿದ ಹಿಂದೂ ಮುಖಂಡ ತೇಜಸ್, ಖಾಸಗಿ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಬಗ್ಗೆ ರಕ್ಷಕ್ ಬುಲೆಟ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕೂಡಲೇ ಅವರು ಕ್ಷಮೆಯಾಚಿಸಬೇಕು. ಚಾಮುಂಡೇಶ್ವರಿ ಬಳಿ ಹೋಗಿ ತಪ್ಪು ಕಾಣಿಕೆಯನ್ನ ಸಲ್ಲಿಸಬೇಕು. ಆ ಸಂದರ್ಭದಲ್ಲೂ ಮೈಸೂರಿನಲ್ಲಿ ದರ್ಶನ್ ಮೇಲೆ ಕಂಪ್ಲೇಂಟ್ ಮಾಡಲಾಗಿತ್ತು. ಎಲ್ಲರೂ ದರ್ಶನ್ ಆಗೋಕೆ ಆಗಲ್ಲ. ರಚಿತಾ ರಾಮ್ ಅವರು ನಾನು ಚಾಮುಂಡೇಶ್ವರಿ ಭಕ್ತೆ ಅಂತಾರೆ. ಈ ಡೈಲಾಗ್ ಕೇಳಿದಾಗ ನಕ್ಕಿದ್ದಾರೆ. ಭಕ್ತಿ ಅನ್ನೋದು ಕೇವಲ ಬಾಯಿ ಮಾತಿಗೆ ಮಾತ್ರ ಸೀಮಿತ ಆಗಿದೆ. ಕೂಡಲೇ ಪ್ರಶ್ನೆ ಮಾಡಿದಿದ್ರೆ ಅವರ ಭಕ್ತಿನಾ ಮೆಚ್ಚಬಹುದಿತ್ತು. ಅವರ ಮೇಲೂ ಕಂಪ್ಲೇಂಟ್ ಕೊಡ್ತೀವಿ. ರಕ್ಷಕ್ ಕ್ಷಮೆ ಕೇಳದಿದ್ರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡ್ತೀವಿ. ರಕ್ಷಕ್ಗೆ ಕಪ್ಪು ಮಸಿ ಹಾಕ್ತೀವಿ. ಕೂಡಲೇ ಕ್ಷಮೆ ಕೇಳಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ