/newsfirstlive-kannada/media/post_attachments/wp-content/uploads/2025/01/AGHORI-1.jpg)
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ. ಕೋಟಿಗಟ್ಟಲೆ ಭಕ್ತರು, ಸಂತರು, ಸನ್ಯಾಸಿಗಳು ಉತ್ಸವಕ್ಕೆ ಆಗಮಿಸುತ್ತಿದ್ದಾರೆ. ಫೆಬ್ರವರಿ 26 ರವರೆಗೆ ನಡೆಯಲಿರುವ ಕುಂಭಮೇಳದಲ್ಲಿ 45 ಕೋಟಿ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿದೆ.
ಈಗಿನ ಜನಜಂಗುಳಿ ನೋಡಿದರೆ.. ಕುಂಭಮೇಳಕ್ಕೆ ಸರ್ಕಾರ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಭಕ್ತರು ಬರುವ ಸಾಧ್ಯತೆ ಇದೆ. 144 ವರ್ಷಗಳ ನಂತರ ಕುಂಭಮೇಳ ನಡೆಯುತ್ತಿರೋದ್ರಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸ್ತಿದ್ದಾರೆ.
ಪ್ರಯಾಗ್‌ರಾಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಕಿಕ್ಕಿರಿದು ತುಂಬಿವೆ. ಶೃಂಗವೇರಪುರ, ಚಿತ್ರಕೂಟ, ವಾರಣಾಸಿ, ಮಾ ವಿಂಧ್ಯವಾಸಿನಿ ಧಾಮ, ನೈಮಿಸಾರಣ್ಯ ಮತ್ತು ಅಯೋಧ್ಯೆಯಂತಹ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಭಾರಿ ಏರಿಕೆ ಕಂಡಿದೆ. ಅಪಾರ ಜನಸ್ತೋಮದಿಂದ ಶಾಂತಿ ಮತ್ತು ಭದ್ರತೆ ಕಾಪಾಡುವುದು ಪ್ರಯಾಗ್ ರಾಜ್ ಪೊಲೀಸರಿಗೆ ಸವಾಲ್ ಆಗಿದೆ. ಈ ಹಿನ್ನೆಲೆಯಲ್ಲಿ ಅನುಮತಿ ಇಲ್ಲದೆ ಕಾರ್ಯಕ್ರಮ, ಮೆರವಣಿಗೆ, ಉಪವಾಸ ಸತ್ಯಾಗ್ರಹ, ಧರಣಿ ನಡೆಸಬಾರದು ಎಂದು ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ: ‘ನನ್ನ ಸೋಲಿಗೆ ಕಾರಣ ಏನೆಂದರೆ..’ ಕಿಚ್ಚನ ಎದುರು ಗೌತಮಿ ಜಾಧವ್ ಹೇಳಿದ್ದೇನು..?
ದೇಶದ 13 ಅಖಾಡಾಗಳಿಂದ ಸಾಧುಗಳು, ಯೋಗಿಗಳು, ಬಾಬಾಗಳು ಮತ್ತು ಅಘೋರಿಗಳು ಕುಂಭಮೇಳಕ್ಕೆ ಆಗಮಿಸ್ತಿದ್ದಾರೆ. ವಿದೇಶದಿಂದಲೂ ಭಕ್ತರು ಬರುತ್ತಿದ್ದಾರೆ. ಇದೀಗ ಅಘೋರಿಯೊಬ್ಬನ ಶಾಕಿಂಗ್ ವಿಡಿಯೋ ವೈರಲ್ ಆಗಿದೆ. ಅದನ್ನು ನೋಡಿದ ಜನರು ಬೆಚ್ಚಿ ಬೀಳುತ್ತಿದ್ದಾರೆ. ವಿಷಪೂರಿತ ಹಾವು, ತಲೆಬುರುಡೆಗಳನ್ನು ಇಟ್ಟುಕೊಂಡು ಎಂಟ್ರಿ ನೀಡಿದ್ದಾನೆ. ಆದರೆ ಈ ವಿಡಿಯೋ ಯಾವಾಗಿಂದು ಅನ್ನೋದು ಸ್ಪಷ್ಟವಾಗಿಲ್ಲ.
ವಿಡಿಯೋ ವೈರಲ್ ಆಗ್ತಿದ್ದಂತೆಯೇ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ.
- ಈ ಅಘೋರಿ ಬಾಬಾ ಎಲ್ಲಿಂದ ಬಂದಿದ್ದಾನೆ?
- ಆತನ ಮೇಲಿದ್ದ ಹಾವುಗಳು ವಿಷಕಾರಿಯೇ?
- ವಿಷಕಾರಿ ಹಾವುಗಳನ್ನು ಹೀಗೆ ಹಿಡಿದಿಟ್ಟುಕೊಳ್ಳಲು ಸಾಧ್ಯವೇ?
- ಕುಂಭಮೇಳದಲ್ಲಿ ಇದು ನಿಜವಾಗಿ ನಡೆದಿದೆಯೇ..?
ವಿಡಿಯೋದಲ್ಲಿ ಹಾವುಗಳು ಅಘೋರಿ ಬಾಬಾನನ್ನು ಕೆಣಕುತ್ತಿರುವುದು ಕಂಡು ಬರುತ್ತಿದೆ. ಆದರೆ ನಿಜವಾಗಲೂ ಆತ ಅಲ್ಲಿಗೆ ಬಂದಿದ್ದಾನಾ ಎಂಬುದು ಸ್ಪಷ್ಟವಾಗಿಲ್ಲ. ಕುಂಭಮೇಳದಲ್ಲಿ ವಿಚಿತ್ರ ಅಘೋರಿಗಳು ಮತ್ತು ಸಾಧುಗಳು ವಿಶೇಷ ಸಂತೆಯೇ ದೊಡ್ಡ ಆಕರ್ಷಣೆಯಾಗಿದೆ.
ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಸಿಂಗಾರದ ಆರತಿ.. ಈ 1 ನಾಣ್ಯ ಸಿಕ್ಕವರಿಗೆ ಶ್ರೀಮಂತಿಕೆ; ಏನಿದರ ಮಹತ್ವ?
ప్రయాగ్ రాజ్ "మహాకుంభమేళా"లో పాల్గొనడం కోసం హిమాలయ పర్వత సానువుల నుండి విచ్చేసిన "అఘోరాలు" మరియు "నాగ సాధువులు"🙏🙏
విష సర్పాలకే కాదు భూత, ప్రేతాత్మలకు సైతం బెదరని తత్వం, మొక్కవోని ధైర్యం వీరి సొంతం👌 pic.twitter.com/33NYU3GmnW— MalathiReddyTDP (@ManaTDPfamily) January 15, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ