/newsfirstlive-kannada/media/post_attachments/wp-content/uploads/2025/01/MAHA-KUMBH-4.jpg)
ಉತ್ತರ ಪ್ರದೇಶದ ದೇವ ಪ್ರಯಾಗದಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಕಳೆದ 30 ದಿನಗಳ ಅಂತರದಲ್ಲಿ 7 ಅಗ್ನಿ ದುರಂತ ಎದುರಾಗಿವೆ. ಈ ಹಿಂದೆ ಹೀಗೆ ಆಗಿತ್ತಾ? ಆ ಅಘೋರಿ ಒಬ್ಬರ ಭವಿಷ್ಯವಾಣಿಯಂತೆಯೇ ನಡೆಯುತ್ತಿದೆಯೇ? ಅಷ್ಟಕ್ಕೂ ಆ ಅಘೋರಿ ನಾಗಾ ಸಾಧು ನುಡಿದ ಭವಿಷ್ಯ ಎಂಥದ್ದು ಗೊತ್ತಾ? ಆ ವಿವರ ಇಲ್ಲಿದೆ ನೋಡಿ.
ಅಘೋರಿ ಭವಿಷ್ಯವಾಣಿ.. ಹೆಣದ ರಾಶಿಯೇ ಬೀಳಲಿದೆಯೇ?
ಮಹಾಕುಂಭಮೇಳದಲ್ಲಿ ಈ ಓರ್ವ ಅಘೋರಿ ಸಾಧು ಅಚ್ಚರಿ ಮೂಡಿಸುತ್ತಿದ್ದಾರೆ. ಮಿಂಚು ಹರಿಯುವ ಘಳಿಗೆಯಲ್ಲಿ ಕಾಣಿಸಿಕೊಳ್ಳುವ ಈ ಅಘೋರಿ ಸಾಧು ಬೆಚ್ಚಿಬೀಳಿಸುವ ಭವಿಷ್ಯವಾಣಿ ನುಡಿದಿದ್ದಾರೆ. ಇದೀಗ ಆಧ್ಯಾತ್ಮದ ರಾಜಧಾನಿ ದೇವ ಪ್ರಯಾಗದಲ್ಲಿ ಇದೇ ವಿಚಾರ ಚರ್ಚೆ ಆಗುತ್ತಿದೆ. ಮಾ ಗಂಗೆಯ ಬಗ್ಗೆ ಬೆಚ್ಚಿಬೀಳಿಸೋ ಭವಿಷ್ಯವಾಣಿ ನುಡಿದಿದ್ದಾರೆ. ಇದೇ ಭವಿಷ್ಯ ಇದೀಗ 13 ಅಖಾಡಗಳನ್ನೂ ಚಿಂತೆಗೀಡುಮಾಡಿತ್ತು. ಇದಕ್ಕೆ ಪೂರಕ ಎನ್ನುವಂತೆಯೇ ಇದೀಗ ಮಹಾಕುಂಭಮೇಳದಲ್ಲಿ ಮೂವತ್ತು ದಿನಗಳ ಅಂತರದಲ್ಲಿ ಏಳು ಸಲ ಅಗ್ನಿ ಪ್ರಮಾದ ಎದುರಾಗಿದೆ.
30 ದಿನಗಳ ಅಂತರದಲ್ಲಿ ಏನಿದು 7 ಅಗ್ನಿ ಪ್ರಮಾದಗಳು?
ಮಹಾಕುಂಭಮೇಳದಲ್ಲಿ ಏಳು ದಿನಗಳಲ್ಲಿ ಅಗ್ನಿ ಪ್ರಮಾದ ಎದುರಾಗಿದ್ದು ವಿಲಕ್ಷಣ ಸಂಗತಿಗಳನ್ನು ಹೇಳುತ್ತಿದೆ. ಜನವರಿ 19ರಂದು ಮೊದಲ ಸಲ ಗೀತಾ ಪ್ರೆಸ್ ಕ್ಯಾಂಪ್ ಅಗ್ನಿ ಪ್ರಮಾದಕ್ಕೆ ಬಲಿ ಆಗಿ ಸುಟ್ಟು ಹೋಯ್ತು. ಜನವರಿ 30ರಂದು ಛತ್ನಾಗ್ ಘಾಟ್ ಬಳಿಯ ಟೆಂಟ್ ಸಿಟಿ ಸುಟ್ಟು ಬೂದಿ ಆಯ್ತು. ಫೆಬ್ರವರಿ 7ರಂದು ಶಂಕರಾಚಾರ್ಯ ಮಾರ್ಗದಲ್ಲಿದ್ದ ಸೆಕ್ಟರ್ 18ರಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಫೆಬ್ರವರಿ 13ರಂದು ಮತ್ತೊಂದು ಅಗ್ನಿ ಪ್ರಮಾದ ಕಾಣಿಸಿಕೊಂಡಿತ್ತು. ಫೆಬ್ರವರಿ 15ರಂದು ಅಗ್ನಿ ದುರಂತ ಕಂಡಿತ್ತಾದ್ರೂ ಯಾವುದೇ ಸಮಸ್ಯೆ ಆಗಲಿಲ್ಲ. ಇದೀಗ ಫೆಬ್ರವರಿ 17ರಂದು ಎರಡು ಕಡೆ ಅಗ್ನಿ ಅವಘಡ ಸಂಭವಿಸಿದೆ. ಸೆಕ್ಟರ್8 ಹಾಗೂ ಸೆಕ್ಟರ್ 18ರ ಬಜರಂಗಿದಾಸ್ ಮಾರ್ಗದಲ್ಲಿ ಅಗ್ನಿಪ್ರಮಾದ ಕಾಣಿಸಿಕೊಂಡಿತ್ತು. ಇದೆಲ್ಲವೂ ಆ ಅಘೋರಿ ಭವಿಷ್ಯವಾಣಿಯನ್ನೇ ನೆನಪಿಸುತ್ತಿವೆ.
ಇದನ್ನೂ ಓದಿ: ಕುಂಭ ಮೇಳ ಕಾಲ್ತುಳಿತಕ್ಕೆ ಹೋಗ್ಬಿಟ್ಟ ಅಂದ್ಕೊಂಡ ಕುಟುಂಬ.. ತಿಥಿ ಕಾರ್ಯದ ವೇಳೆ ನಗುನಗುತ್ತ ಎಂಟ್ರಿ ಕೊಟ್ಟ..!
ಕಾಗೆ ಆಡಿದ ಮಾತಿನಂತೆಯೇ ಆಗಸ ಕಪ್ಪಾಗೋ ಕಾರಣಿಕ!
ದೇವ ಪ್ರಯಾಗದ ಸ್ಮಶಾನ ಘಾಟ್ನಲ್ಲಿನ ಕಾಗೆಗಳ ಮರ್ಮರ ಕಾಲಪುರುಷ ಅಘೋರಿ ಕಿವಿಗೆ ಬಿದ್ದಿದ್ದು ಹೀಗೆ ಎನ್ನಲಾಗುತ್ತಿದೆ.. ಅಂತ್ಯವಿಲ್ಲದ ಮಾರಣಹೋಮ ನಡೆಯಲಿದೆ. ಭೂಮಿ ತನ್ನ ಶ್ವಾಸವನ್ನೇ ಬದಲಿಸೋ ದಿನ ಬರುತ್ತದೆ. ಇದಕ್ಕೂ ಮುನ್ನವೇ ಇಡೀ ನೀಲಾಕಾಶ ಕಪ್ಪಾಗಲಿದೆ ಅನ್ನೋ ಇದೇ ಸುಳಿವನ್ನು ಆಧರಿಸಿಯೇ ನಾಗಾ ಸಾಧು ಈ ಭವಿಷ್ಯವಾಣಿ ನುಡಿದಿದ್ರು. ಮುಂದಿನ ಕುಂಭಮೇಳದ ಹೊತ್ತಿಗೆ ದೇವ ಪ್ರಯಾಗದ ಚಿತ್ರಣವೇ ಬದಲಾಗಲಿದೆ. ಅಷ್ಟೇ ಅಲ್ಲ, ಮಾ ಗಂಗೆ ಕೂಡ ತನ್ನ ದಿಕ್ಕು ದೆಸೆಗಳನ್ನೇ ಬದಲಿಸಿಕೊಳ್ಳಲಿದೆ. ಕಣ್ಣಿಗೆ ಕಾಣದೇ ಇದ್ದ ಸರಸ್ವತಿ ನದಿ ಉಕ್ಕಿ ಹರಿಯಲಿದೆ ಅನ್ನೋ ಕಾರ್ಣಿಕ ನುಡಿದಿದ್ರು. ಸದ್ಯದ ಅಗ್ನಿ ಪ್ರಮಾದಗಳು ಕಾರ್ಣಿಕ ನಿಜವಾಗ್ತಿದ್ಯಾ ಅನ್ನೋ ಅನುಮಾನ ಮೂಡಿಸುತ್ತಿದೆ.
ವಿಶೇಷ ವರದಿ : ಬಸವರಾಜು ಸಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ