/newsfirstlive-kannada/media/post_attachments/wp-content/uploads/2025/01/AGHORIS.jpg)
ಉತ್ತರಪ್ರದೇಶದ ಪವಿತ್ರ ಕ್ಷೇತ್ರವಾದ ಪ್ರಯಾಗರಾಜ್ನಲ್ಲಿ ಈಗಾಗಲೇ ಮಹಾಕುಂಭಮೇಳಕ್ಕೆ ಭರ್ಜರಿ ತಯಾರಿ ನಡೆದಿದೆ. ಜನವರಿ 14ರಿಂದ ಆರಂಭವಾಗಲಿರುವ ಮಹಾಕುಂಭಮೇಳಕ್ಕೆ ದೇಶದ ಮೂಲೆ ಮೂಲೆಯಿಂದ ಸ್ವಾಮಿಗಳು, ಅರ್ಚಕರು. ಶಿವಭಕ್ತರು, ನಾಗಾಬಾಬಾಗಳು ಬರುತ್ತಾರೆ. ಪ್ರಯಾಗರಾಜ ಕೇವಲ ಭಕ್ತ ಸಾಗರದಿಂದಲೇ ತುಂಬಿ ಹೋಗುತ್ತದೆ. ಈ ಪವಿತ್ರ ಸ್ನಾನದಲ್ಲಿ ಅಖಾರಾಸ್, ಮಹಾಮಂಡಳೇಶ್ವರರು ಮತ್ತು ಅಘೋರಿ ಸಾಧಯಗಳು ಕೂಡ ಭಾಗಿಯಾಗುತ್ತಾರೆ.
ಈ ಒಂದು ಲೇಖನದಲ್ಲಿ ನಾವು ಅಘೋರಿಗಲ ಲೋಕ ಹೇಗಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಲಿದ್ದೇವೆ. ಅಘೋರಿಗಳ ವಿಚಾರದಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಅವರನ್ನು ಕಂಡರೆ ಅನಾವಶ್ಯಕ ಭಯಗಳು ಕೂಡ ಇವೆ. ಆದ್ರೆ ಅಘೋರಿಗಳು ನಮ್ಮ ಕಲ್ಪನೆ ಹಾಗೂ ಭಯದ ಆಚೆ ಒಂದು ವಿಚಿತ್ರ ವಿಸ್ಮಯವಾದ ಬದುಕನ್ನು ಬದುಕುತ್ತಾರೆ.
ಅಘೋರಿ ಸಾಧುಗಳನ್ನು ತಾಂತ್ರಿಕರು, ತಂತ್ರವಿದ್ಯೆಯನ್ನು ಕರಗತ ಮಾಡಿಕೊಂಡವರು, ವಶೀಕರಣ ಅವರಿಗೆ ಅತ್ಯಂತ ಸುಲಭವಾದ ಕೆಲಸ ಹೀಗೆ ಹಲವು ಕಲ್ಪನೆಗಳು ಇವೆ. ಆದ್ರೆ ಅಘೋರಿಗಳು ಪಕ್ಕಾ ಪರಶಿವನ ಮಹಾಭಕ್ತರು. ಕಪಾಲಿಕ ಸಂಪ್ರದಾಯವನ್ನು ತಮ್ಮದಾಗಿಸಿಕೊಂಡಿರುವ ಇವರು. ಸಾಮಾನ್ಯವಾಗಿ ಕಪಾಲವೊಂದನ್ನು ಧರಿಸಿಕೊಂಡು ಅಲೆದಾಡುವುದು ನಮಗೆ ಕಾಣಸಿಗುತ್ತದೆ. ಅಘೋರಿ ಎಂಬ ಪದ ಸಂಸ್ಕೃತದ ಅಘೋರ್ ಪದದಿಂದ ಬಂದಂತಹುದು. ಇದರ ಅರ್ಥ ನಿರ್ಭಯ. ಭಯವೇ ಇಲ್ಲದವರು ಅಂತ. ಶಿವನ ಜೊತೆ ಜೊತೆಗೆ ಅಘೋರಿಗಳು ಶಕ್ತಿದೇವತೆ ಕಾಳಿಯನ್ನು ಕೂಡ ಆರಾಧಿಸುತ್ತಾರೆ. ಸದಾ ಮೈತುಂಬ ಭಸ್ಮವನ್ನು ಧಿರಿಸಿರುವ ಇವರು. ರುದ್ರಾಕ್ಷೆ ಮಾಲೆಯೊಂದಿಗೆ ಕಂಗೊಳಿಸುತ್ತಿರುತ್ತಾರೆ. ಇವರ ಧಿರಿಸಿನಲ್ಲಿ ಸದಾ ಒಂದು ತಲೆಬುರಡೆ ಇದ್ದೇ ಇರುತ್ತದೆ.
ಅಘೋರಿಗಳು ಸಾಮಾನ್ಯವಾಗಿ ಜನಸಂದಣಿಯಿಂದ ದೂರ ಇರುತ್ತಾರೆ. ಸಾಮಾಜಿಕ ವ್ಯವಸ್ಥೆಯಿಂದ ಅಂತರವನ್ನು ಕಾಯ್ದುಕೊಂಡಿರುತ್ತಾರೆ. ಅವರ ಸಾಮಾನ್ಯವಾಗಿ ಕುಂಭಮಮೇಳದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಾಣಸಿಗುತ್ತಾರೆ. ಸಾಮಾನ್ಯವಾಗಿ ಅಘೋರಿಗಳು ಸ್ಮಷಾನಗಳಲ್ಲಿ ವಾಸಿಸುತ್ತಾರೆ. ಇಲ್ಲವೇ ಜನ ಸದ್ದು ಗದ್ದಲ ಇಲ್ಲದ ಕಡೆ ಅವರ ವಾಸವಿರುತ್ತದೆ. ಅಲ್ಲಿಯೇ ತಮ್ಮ ಆಧ್ಯಾತ್ಮಿಕ ಸಾಧನೆಯನ್ನು ಮಾಡುತ್ತಾರೆ. 18ನೇ ಶತಮನಾದಲ್ಲಿ ಬಾಬಾ ಕಿನರಾಮ್ ಅವರು ತಿಳಿಸಿರುವ ಹಾದಿಯಲ್ಲಿಯೇ ಈ ಅಘೋರಿಗಳು ನಡೆಯುತ್ತಾರೆ .ಅಘೋರಿಗಳು ಸಾಮಾನ್ಯಾವಾಗಿ ಹುಟ್ಟುಕೊಳ್ಳುವುದೇ ವಾರಾಣಸಿಯಲ್ಲಿ ನಂತರ ದೇಶದ ಮೂಲೆ ಮೂಲೆಗೆ ತೆರಳಿ ತಮ್ಮ ಆಧ್ಯಾತ್ಮ ಸಾಧನೆಯಲ್ಲಿ ತೊಡಗಿಕೊಳ್ಳುತ್ತಾರೆ.
ಅಘೋರಿಗಳು ತಮ್ಮ ಅತಿಹೆಚ್ಚು ಸಮಯವನ್ನು ಕಳೆಯುವುದು ಧ್ಯಾನದಲ್ಲಿಯೇ. ಶಿವನನ್ನೇ ಅವರು ಸರ್ವಶಕ್ತ, ಸರ್ವವ್ಯಾಪಿ ಹಾಗೂ ಸರ್ವಜ್ಞ ಎಂದು ನಂಬಿ ಪೂಜೆ ಮಾಡುತ್ತಾರೆ. ಜನನ ಹಾಗೂ ಮರಣಗಳ ಭಯವನ್ನು ಮೀರಿರುವ ಈ ಅಘೋರಿಗಳ ಭಯ ಮೀರಲೆಂದೇ ಶವಗಳನ್ನು ಸುಡುವ ಜಾಗದಲ್ಲಿ ಹೆಚ್ಚು ಕಾಣಸಿಗುತ್ತಾರೆ. ಅವರು ಹೆಣಗಳ ಜೊತೆ ಬದುಕು ಸಾಗಿಸಲು ಹಿಂದೆ ಮುಂದೆ ನೋಡುವುದಿದೆ. ರಾತ್ರಿ ಹೆಚ್ಚು ಅವರು ಅರೆಬೆಂದ ಹೆಣವನ್ನು ತಿನ್ನುತ್ತಾರೆ. ಅರೆಬೆಂದ ಹೆಣವನ್ನು ತಿನ್ನುವುದರು ಅವರ ಪದ್ಧತಿಯಲ್ಲಿ ಒಂದು ಭಾಗ ಎಂದು ಹೇಳಲಾಗುತ್ತದೆ. ಈ ಕಾರ್ಯವನ್ನು ಅವರು ಯಾವುದೇ ಭಯವಿಲ್ಲದೇ ಮಾಡಿದಾಗ ಮಾತ್ರ , ಅವರ ತಮ್ಮ ಧಾರ್ಮಿಕ ಪದ್ಧತಿಗಳನ್ನು ಬೆಳೆಸಲು ಯೋಗ್ಯರು ಎಂಬ ಮಾತುಗಳು ಇವೆ.
ಇದನ್ನೂ ಓದಿ:ಗೋವಿಂದನ 6 ಭಕ್ತರು ಕೊನೆಯುಸಿರು.. ಕಾಲ್ತುಳಿತಕ್ಕೆ ಅಸಲಿ ಕಾರಣ ಏನು?
ಶೈವ ಪಂಥದ ಒಂದು ಭಾಗ ಎಂದು ಹೇಳಲಾಗುತ್ತದೆ. 150 ವರ್ಷಗಳ ಕಾಳ ಬದುಕಿದ್ದ 18ನೇ ಶತಮನಾದ ಬಾಬಾ ಕೀನಾರಾಮ್ ಅವರು ಈ ಅಘೋರಿ ಪಂಥಕ್ಕೆ ನಾಂದಿ ಹಾಡಿದರು ಎಂದು ಇತಿಹಾಸಗಳು ಹೇಳುತ್ತವೆ. ಅಘೋರಿಗಳತತ್ವಗಲೇ ವಿವಕಸಾರಾ, ರಾಮಗೀತಾ, ಮಾರರಸಲ ಮತ್ತು ಉನ್ಮುನಿರಾಮ್ ಎಂಬ ಗ್ರಂಥಗಳಲ್ಲಿ ಅಘೋರಿಗಳ ಆಚರಣೆ ಬದುಕುವ ಪದ್ಧತಿಗಳನ್ನು ವಿವರಿಸಲಾಗಿದೆ. ಇತಿಹಾಸ ಹೇಳುವ ಪ್ರಕಾರ ಬಾಬಾ ಕೀನಾರಾಮ 1658ರಲ್ಲಿ ಉತ್ತರಪ್ರದೇಶದ ರಾಮಗಢನಲ್ಲಿ ಕ್ಷತ್ರಿಯ ಕುಲದಲ್ಲಿ ಹುಟ್ಟಿದವರು ಎಂದು ಹೇಳಲಾಗುತ್ತದೆ. ಭಾದ್ರಪದ ಮಾಸದ ಚತುರ್ದಶಿಯಂದು ಕೀನಾರಾಮ ಅವರು ಹುಟ್ಟುತ್ತಾರೆ. ಅವರು ಹುಟ್ಟುತ್ತಲೇ ಬಾಯಲ್ಲಿ ಎಲ್ಲ ಹಲ್ಲುಗನ್ನಿಟ್ಟುಕೊಂಡು ಹುಟ್ಟಿದ್ದರು ಎಂದು ಹೇಳಲಾಗುತ್ತದೆ, ಇದು ಆಧ್ಯಾತ್ಮಿಕ ಶಕ್ತಿಯ ಒಂದು ಗುರುತು ಎಂದೇ ಎಲ್ಲರು ಅಂದು ಹೇಳಿದ್ದರು.
ಇದನ್ನೂ ಓದಿ:ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಾಣಬಿಟ್ಟ 6 ಭಕ್ತರು.. ಕಾಲ್ತುಳಿತ ಸ್ಥಳಕ್ಕೆ ಇಂದು CM ಭೇಟಿ.
ಇನ್ನು ಅಘೋರಿಗಳ ಬದುಕು ನೋಡುತ್ತಾ ಹೋದರೆ ನಮಗೆ ಯಾವುದು ಸ್ಪಷ್ಟವಾಗಿ ಕಾಣುವುದಿಲ್ಲ ಎಲ್ಲವೂ ಕೂಡ ಮುಸುಕು ಮುಸುಕು. ಅಘೋರಿಗಳಿಗೆ ತಮ್ಮ ಬಗ್ಗೆ ತಮೆಗೆ ಅತ್ಯಂತ ಕಡಿಮೆ ತಿಳುವಳಿಕೆ ಇರುತ್ತದೆ. ಅವರ ಅಕ್ಕಪಕ್ಕ ಭಯವೇ ಇಲ್ಲದಂತ ಒಂದು ವಾತಾವರಣ ಸೃಷ್ಟಿಯಾಗಿರುತ್ತದೆ. ಅವರ ತತ್ವ ಅತ್ಯಂತ ಸರಳ. ನೀವು ನಿಮ್ಮ ಕೆಲಸದಲ್ಲಿ ತೊಡಗಿ ನಮಗೆ ನಮ್ಮ ಹಾದಿಯಲ್ಲಿ ನಡೆಯಲು ಬಿಡಿ ಎನ್ನುವುದು. ನೋಡಲು ಸಾಮಾನ್ಯ ಮನುಷ್ಯರು ಅಂತ ಅನಿಸಿದರು ಕೂಡ ಅವರ ಬದುಕು ತಂಬಾ ವೈಚಿತ್ರಗಳಿಂದ ಕೂಡಿದೆ. ಅವರ ಆರಾಧನಾ ಪದ್ಧತಿ. ಜೀವನ ಕ್ರಮ, ಪೂಜೆಯ ರೀತಿ ಇವೆಲ್ಲವೂ ಕೂಡ ಬೇರೆಯವರಿಗಿಂತ ಭಿನ್ನವಾಗಿರುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ