/newsfirstlive-kannada/media/post_attachments/wp-content/uploads/2024/10/Srirasthu-Shubhamasthu.jpg)
ವಿಭಿನ್ನವಾದ ಲವ್ ಸ್ಟೋರಿ ಹೇಳುತ್ತಿರುವ ಕಥೆ ಎಂದರೆ ಅದು ಶ್ರೀರಸ್ತು ಶುಭಮಸ್ತು. ಅಪ್ಪ-ಮಗನ ನಡುವೆ ಮುನಿಸು ಸರಿದು ತಂದೆಯನ್ನು ಒಪ್ಪಿಕೊಂಡಿದ್ದಾನೆ ಮಗ ಅವಿನಾಶ್. ಮಾಧವ ಹಾಗೂ ತುಳಸಿ ಸ್ನೇಹ-ಪ್ರೀತಿ ತುಂಬಿದ ಪ್ರೋಮೋಗೆ ವೀಕ್ಷಕರಿಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಆದರೆ ಇದರ ಮಧ್ಯೆ ಶ್ರೀರಸ್ತು ಶುಭಮಸ್ತು ಸೀರಿಯಲ್ ಮತ್ತೊಂದು ಶಾಕಿಂಗ್ ಟ್ವಿಸ್ಟ್ ಪಡೆದುಕೊಂಡಿದೆ.
ಇದನ್ನೂ ಓದಿ: KicchaSudeep: ಕೃಷ್ಣನಿಲ್ಲದ ಮಹಾಭಾರತ, ಸುದೀಪ್ ಇಲ್ಲದ ಬಿಗ್ ಬಾಸ್.. ಪ್ರಶಾಂತ್ ಸಂಬರ್ಗಿ ಹೇಳಿದ್ದೇನು?
ಹೌದು, ಈ ಹಿಂದಿನ ಸಂಚಿಕೆಯಲ್ಲಿ ತುಳಸಿ ತಾಯಿಯಾಗುತ್ತಿರೋ ಸುದ್ದಿ ಸಖತ್ ಹಲ್ಚಲ್ ಸೃಷ್ಟಿಸಿತ್ತು. ತುಳಸಿ ತಾಯಿಯಾಗುತ್ತಿರೋ ಸತ್ಯ ಮನೆಯವರಿಗೆ ಗೊತ್ತಾಗಿದೆ. ತುಳಸಿ ಗಟ್ಟಿ ನಿರ್ಧಾರಕ್ಕೆ ಮನೆಯವರಿಂದ ಒಪ್ಪಿಗೆ ಸಿಗುತ್ತಾ ಅಂತ ಕಾದು ನೋಡಬೇಕಿದೆ. ಆದರೆ ರಿಲೀಸ್ ಆದ ಮತ್ತೊಂದು ಪ್ರೋಮೋದಲ್ಲಿ ಸಮರ್ಥ್ ತನ್ನ ಪತ್ನಿ ಸಿರಿಗೆ ಅಮ್ಮನಿಗೆ ಬ್ರೈನ್ ಟ್ಯೂಮರ್ ಇದೆ ಅಂತ ಹೇಳಿದ್ದಾರೆ. ಇದೇ ವಿಚಾರ ಕೇಳಿದ ಸಿರಿ ಬೆಚ್ಚಿಬಿದ್ದಿದ್ದಾಳೆ. ಕೂಡಲೇ ಅಮ್ಮನನ್ನು ನೋಡಬೇಕು ಅಂತ ಹಂಬಲಿಸುತ್ತಿದ್ದ ಸಿರಿಯನ್ನು ಸಮರ್ಥ್ ತಡೆದಿದ್ದಾನೆ.
View this post on Instagram
ಆದರೆ ಇಲ್ಲೊಂದು ಗಮನಿಸಬೇಕಾದ ವಿಚಾರ ಇದೆ. ತುಳಸಿ ಗರ್ಭಿಣಿ ಅನ್ನೋ ವಿಚಾರ ಮಗ ಸಮರ್ಥ್ ತಪ್ಪಾಗಿ ತಿಳಿದುಕೊಂಡಿದ್ದಾನೆ. ಅದರ ಬದಲಾಗಿ ನರ್ಸ್ಗಳು ಹೇಳಿದ ಮಾತನ್ನು ಕೇಳಿಸಿಕೊಂಡ ಸಮರ್ಥ್ ಅಮ್ಮನಿಗೆ ಬ್ರೈನ್ ಟ್ಯೂಮರ್ ಅಂತ ನಂಬಿದ್ದಾನೆ. ಇನ್ನೂ ಕೆಲವೇ ತಿಂಗಳಿನಲ್ಲಿ ಅಮ್ಮ ನಮ್ಮನ್ನು ಬಿಟ್ಟು ದೂರ ಹೋಗುತ್ತಾಳೆ ಅಂತ ಸಮರ್ಥ್ ಹಾಗೂ ಸಿರಿ ಕಣ್ಣೀರು ಹಾಕುತ್ತಿದ್ದರೆ, ಅತ್ತ ತುಳಸಿ ಗರ್ಭಿಣಿಯಾಗಿರೋ ಸತ್ಯ ಗೊತ್ತಾಗಿದೆ. ಸದ್ಯ ಮುಂದಿನ ದಿನಗಳಲ್ಲಿ ಈ ಸೀರಿಯಲ್ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ