ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಅಗರ್ವಾಲ್
ಡಾ.ಆರ್‌ಎನ್ ಅಗರ್ವಾಲ್ ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ
ಅಗ್ನಿ ಪುರುಷ ಎಂದೇ ಖ್ಯಾತಿ ಪಡೆದಿದ್ದ ದೇಶದ ಹಿರಿಯ ವಿಜ್ಞಾನಿ
ದೀರ್ಘ-ಶ್ರೇಣಿಯ ಅಗ್ನಿ ಕ್ಷಿಪಣಿಯ (Long-range Agni Missiles) ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿ ಏರೋಸ್ಪೇಸ್ ವಿಜ್ಞಾನಿ ಡಾ.ರಾಮ್ ನರೈನ್ ಅಗರ್ವಾಲ್ (83) (Ram Narain Agarwal) ನಿಧನರಾಗಿದ್ದಾರೆ. ಪದ್ಮಭೂಷಣ ಪುರಸ್ಕೃತ ಆರ್.ಎನ್.ಅಗರ್ವಾಲ್ ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು.
ಡಾ.ಆರ್‌ಎನ್ ಅಗರ್ವಾಲ್ ನಿನ್ನೆ ಹೈದರಾಬಾದ್‌ನಲ್ಲಿ ಕೊನೆಯುಸಿರೆಳೆದರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಡಾ ಅಗರ್ವಾಲ್ 1983ರಲ್ಲಿ ಅಗ್ನಿ ಕ್ಷಿಪಣಿ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಮುನ್ನಡೆಸಿದ್ದರು. ಈ ಅವಧಿಯಲ್ಲಿ ದೇಶದ ಮಹತ್ವಾಕಾಂಕ್ಷೆಯ ಅಗ್ನಿ ಕ್ಷಿಪಣಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಮುನ್ನಡೆಸಿದ್ದರು. ಡಾ. ಅಗರ್ವಾಲ್ 1983 ರಿಂದ 2005ರವರೆಗೆ ಅಂದರೆ ತಾವು ನಿವೃತ್ತಿ ಆಗುವ ತನಕ ಭಾರತದ ಅಗ್ನಿ ಕ್ಷಿಪಣಿ ಕಾರ್ಯಕ್ರಮವನ್ನು ಮುನ್ನಡೆಸಿದರು. DRDO ಕ್ಷಿಪಣಿ ವಿಜ್ಞಾನಿಯಾಗಿದ್ದ ಡಾ.ಆರ್.ಎನ್.ಅಗರ್ವಾಲ್ ಅವರನ್ನು ‘ಅಗ್ನಿ ಕ್ಷಿಪಣಿಗಳ ಪಿತಾಮಹ’ ಎಂದೇ ಕರೆಯಲಾಗುತ್ತದೆ.
ಇದನ್ನೂ ಓದಿ:ನೀರಜ್ ಬಗ್ಗೆ ಕೇಳ್ತಿದ್ದಂತೆ ನಾಚಿಕೊಂಡ ಮನು ಭಾಕರ್.. ಪ್ರೀತಿ, ಮದುವೆ ಬಗ್ಗೆ ಮೌನ ಮುರಿದ ಅಥ್ಲೀಟ್..!
Long-range Agni Missiles ಕಾರ್ಯಕ್ರಮಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಈ ಮೂಲಕ ದೇಶದ ರಕ್ಷಣಾ ವಿಭಾಗದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಗೆ ಹರಿಕಾರರಾಗಿ ದುಡಿದಿದ್ದರು. ದೇಶದ ಕ್ಷಿಪಣಿ ಸಾಮರ್ಥ್ಯಗಳನ್ನು ರೂಪಿಸುವಲ್ಲಿ ಡಾ.ಅಗರ್ವಾಲ್ ಸೇವೆ ಅಪಾರ. ಅಗ್ನಿ ಕ್ಷಿಪಣಿಗಳ ಮೊದಲ ಕಾರ್ಯಕ್ರಮ ನಿರ್ದೇಶಕರಾಗಿದ್ದ ಅವರು, ದೇಶದ ಶಸ್ತ್ರಾಸ್ತ್ರಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ನಾಯಕತ್ವ ಮತ್ತು ದೂರದೃಷ್ಟಿ ಆಲೋಚನೆಗಳಿಂದಾಗಿ ಅವರಿಗೆ ‘ಅಗ್ನಿ ಪುರುಷ’ (AgniWall) ಎಂಬ ಬಿರುದು ತಂದುಕೊಟ್ಟಿತು.
ಇದನ್ನೂ ಓದಿ:‘ಈತ ಅಂದ್ರೆ ನಂಗೆ ಭಾರೀ ಭಯ..’ ಬ್ಯಾಟಿಂಗ್ ವೇಳೆ ರೋಹಿತ್ ಭಯದಿಂದ ಬೆಚ್ಚಿ ಬೀಳೋದು ಯಾರಿಗೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ