/newsfirstlive-kannada/media/post_attachments/wp-content/uploads/2025/03/sukrutha-nag3.jpg)
ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದ ಚಲುವೆ ಸುಕೃತಾ ನಾಗ್. ಅಂಜಲಿ ಪಾತ್ರದ ಮೂಲಕನೇ ವೀಕ್ಷಕರು ಇವತ್ತಿಗೂ ಸುಕೃತಾ ಅವ್ರನ್ನ ಗುರುತಿಸೋದು.
ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್ ಬಣ್ಣಗಳ ಹಬ್ಬವನ್ನು ಆಚರಿಸೋದಿಲ್ಲ ಏಕೆ? ಇಲ್ಲಿದೆ ಆ ಸೀಕ್ರೆಟ್!
ಇದಾದ ಬಳಿಕ ಲಕ್ಷಣದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡ ನಟಿ, ಕಂಟಿನ್ಯೂ ಆಗಿ ಇದೇ ತರಹದ ಪಾತ್ರ ಮಾಡ್ತಾ ಬಂದಿದ್ದಾರೆ. ಸದ್ಯ ಭಾಗ್ಯಲಕ್ಷ್ಮೀಯಲ್ಲಿ ಅಭಿನಯಿಸ್ತಿದ್ದಾರೆ. ಜೊತೆಗೆ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲೂ ಭಾಗಿಯಾಗಿದ್ದಾರೆ.
ಲಕ್ಷಣ ಸೀರಿಯಲ್ನಿಂದ ಹತ್ತಿರವಾದ ವಿಜಯಲಕ್ಷ್ಮೀ, ಶ್ರುತಿ, ಪ್ರಿಯಾ ಹಾಗೂ ಸುಕೃತಾ ಇವತ್ತಿಗೂ ಬೆಸ್ಟ್ ಫ್ರೆಂಡ್ಸ್. ಎಲ್ಲಿಗೆ ಹೋದ್ರು ಏನೇ ಮಾಡಿದ್ರು, ಈ ನಾಲ್ವರು ಗೆಳತಿರೋ ಒಬ್ಬರಿಗೊಬ್ಬರೂ ಸಾಥ್ ಕೊಡ್ತಾ ಜೊತೆ ಜೊತೆಯಾಗಿ ಸಾಗ್ತಿದ್ದಾರೆ.
ಇವರ ಸ್ನೇಹ ಎಷ್ಟರ ಮಟ್ಟಿಗೆ ಗಟ್ಟಿ ಆಗಿದೆ ಅಂದ್ರೇ ಫ್ಯಾಮಿಲಿಗಳ ನಡುವೆ ಬಾಂಡಿಂಗ್ ಕ್ರಿಯೇಟ್ ಆಗಿದೆ. ಇನ್ನೂ, ಮೊನ್ನೆ ನಟಿ ಸುಕೃತಾ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ರು.
View this post on Instagram
ಇದೇ ಖುಷಿಯಲ್ಲಿದ್ದ ಗೆಳತಿಗೆ ಸರ್ಪ್ರೈಸ್ ನೀಡಿದ್ದಾರೆ ಲಕ್ಷಣ ಬೆಡಗಿಯರು. ಪ್ರಿಯಾ ಹಾಗೂ ಶ್ರುತಿ ರಮೇಶ್ ಸುಕೃತಾ ಬರ್ತ್ ಡೇ ಸೆಲೆಬ್ರಿಟ್ ಮಾಡಿದ್ದಾರೆ. ಅಭಿಮಾನಿಗಳು ಕೂಡ ನಟಿಯ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ