/newsfirstlive-kannada/media/post_attachments/wp-content/uploads/2025/07/BNG_KRUSHI_HONDA_1.jpg)
ಬೆಂಗಳೂರು: ಕ್ರಿಕೆಟ್ ಆಡುವಾಗ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಉಸಿರು ಚೆಲ್ಲಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ನಡೆದಿದೆ.
ತಮ್ಮೇನಹಳ್ಳಿಯ ಧ್ಯಾನ್ ರಾಜ್ (14), ಪ್ರಭಾಕರ್ (28) ಕೊನೆಯುಸಿರೆಳೆದವರು. ಕ್ರಿಕೆಟ್ ಆಡುವಾಗ ಚೆಂಡು ಹೋಗಿ ಕೃಷಿ ಹೊಂಡದಲ್ಲಿ ಬಿದ್ದಿದೆ. ಬಾಲ್ ತೆಗೆದುಕೊಳ್ಳಬೇಕು ಎಂದು ಧ್ಯಾನ್ ರಾಜ್ ಕೃಷಿ ಹೊಂಡಕ್ಕೆ ಇಳಿದು ಈಜು ಬಾರದೆ ನೀರಿನಲ್ಲಿ ಮುಳುಗುತ್ತಿದ್ದನು. ಪಕ್ಕದಲ್ಲೇ ಟೀ ಅಂಗಡಿ ಇಟ್ಟುಕೊಂಡಿದ್ದ ಪ್ರಭಾಕರ್ ಇದನ್ನು ನೋಡಿ, ಬಾಲಕನನ್ನ ಕಾಪಾಡಲೆಂದು ಕೃಷಿ ಹೊಂಡಕ್ಕೆ ಇಳಿದಿದ್ದಾನೆ.
ಇದನ್ನೂ ಓದಿ:‘ನಾನಂತೂ ಯಾವ ನನ್ಮಗನಿಗೂ ಹೆದರಲ್ಲ’.. ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಕಿಡಿ..ಕಿಡಿ!
ಆದರೆ ಈ ವೇಳೆ ಇಬ್ಬರಿಗೂ ನೀರಿನಿಂದ ಹೊರ ಬರಲಾಗದೇ ಕೃಷಿ ಹೊಂಡದಲ್ಲಿ ಜೀವ ಬಿಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದೇಹಗಳನ್ನ ರವಾನೆ ಮಾಡಲಾಗಿದೆ. ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಕಾಪಾಡಲು ಹೋದ ಪ್ರಭಾಕರ್ ಜೀವ ಕೂಡ ಹೋಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ