ರೈತ ಗೆದ್ರೆ ಇಡೀ ನಾಡೇ ಗೆದ್ದಂತೆ.. ನ್ಯೂಸ್‌ ಫಸ್ಟ್‌ ‘ಕೃಷಿ ದೇವೋಭವ’ ಕಾರ್ಯಕ್ರಮಕ್ಕೆ ಸಚಿವ ಚಲುವರಾಯಸ್ವಾಮಿ ಅಭಿನಂದನೆ

author-image
admin
Updated On
ರೈತ ಗೆದ್ರೆ ಇಡೀ ನಾಡೇ ಗೆದ್ದಂತೆ.. ನ್ಯೂಸ್‌ ಫಸ್ಟ್‌ ‘ಕೃಷಿ ದೇವೋಭವ’ ಕಾರ್ಯಕ್ರಮಕ್ಕೆ ಸಚಿವ ಚಲುವರಾಯಸ್ವಾಮಿ ಅಭಿನಂದನೆ
Advertisment
  • ರೈತರಿಗಾಗಿ ನ್ಯೂಸ್​​ ಫಸ್ಟ್​​​​​​ನಿಂದ ‘ಕೃಷಿ ದೇವೋಭವ’ ಕಾರ್ಯಕ್ರಮ
  • ಕೃಷಿ ಸಚಿವ ಚಲುವರಾಯಸ್ವಾಮಿಯಿಂದ ಕಾರ್ಯಕ್ರಮ ಉದ್ಘಾಟನೆ
  • ರಾಜ್ಯದ 10 ಪ್ರಗತಿಪರ ರೈತರಿಗೆ ಭೂ-ತಪಸ್ವಿ ಪ್ರಶಸ್ತಿ ನೀಡಿ ಗೌರವ

ತುತ್ತು ಅನ್ನ ತಿನ್ನುವ ಮೊದಲು ರೈತನ ನೆನೆಯಬೇಕು. ನಾವಿವತ್ತು ತುತ್ತು ಅನ್ನ ತಿನ್ನೋ ಮೊದಲು ನಿಸ್ವಾರ್ಥ ಜೀವ ರೈತನನ್ನೇ ನೆನೆಯಲೇಬೇಕು. ಅನ್ನದಾತನ ಕೈ ಕೆಸರಾದ್ರೆ ಮಾತ್ರ ನಮ್ಮ ಬಾಯಿ ಮೊಸರಾಗೋಕೆ ಸಾಧ್ಯ. ಅಂತಹ ಕಷ್ಟ ಜೀವಿಗಳ ಬೆನ್ನು ತಟ್ಟಲು, ಆರ್ಥಿಕ ನೆರವು ನೀಡಲು, ಗೌರವ ಸಮರ್ಪಿಸಲು ರಾಜ್ಯ ಕೃಷಿ ಇಲಾಖೆಯ ಸಹಯೋಗದೊಂದಿಗೆ ನ್ಯೂಸ್​ಫಸ್ಟ್​ ಆಯೋಜಿಸಿದ್ದ ‘ಕೃಷಿ ದೇವೋಭವ’ ಅನ್ನೋ ವಿಶೇಷ ಕಾರ್ಯಕ್ರಮ ಯಶಸ್ವಿಯಾಗಿದೆ.

ರೈತರಿಗಾಗಿ ನ್ಯೂಸ್​​ಫಸ್ಟ್​​​​​​ನಿಂದ ‘ಕೃಷಿ ದೇವೋಭವ’ ಕಾರ್ಯಕ್ರಮ
ಕೃಷಿ ಸಚಿವ ಚಲುವರಾಯಸ್ವಾಮಿಯಿಂದ ಕಾರ್ಯಕ್ರಮ ಉದ್ಘಾಟನೆ
ಬೆಂಗಳೂರಿನ ರಾಜಭವನ ರಸ್ತೆಯ ದಿ ಕ್ಯಾಪಿಟಲ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ‘ಕೃಷಿ ದೇವೋಭವ’ ಕಾರ್ಯಕ್ರಮವನ್ನ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಉದ್ಘಾಟಿಸಿದ್ರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ್ ಹಾಗೂ ನ್ಯೂಸ್‌ ಫಸ್ಟ್ ಎಂಡಿ ಮತ್ತು ಸಿಇಒ, ಎಸ್‌.ರವಿಕುಮಾರ್‌, ಸ್ವಾಶ್‌ ಬಯೋಟ್ನೆಕಾಲಜಿ ಕಂಪನಿ ಸಂಸ್ಥಾಪಕ ಮತ್ತು ಎಂಡಿ ಬಿ.ಎಸ್‌. ಶಶಿ ಕುಮಾರ್‌ ಕೂಡ ಭಾಗಿಯಾಗಿದ್ರು.

‘ನ್ಯೂಸ್​ ಫಸ್ಟ್​ಗೆ ಸಚಿವರ ಧನ್ಯವಾದ’
ಕೃಷಿಯಲ್ಲಿ ಮಾತ್ರವಲ್ಲ ಯಾವುದೇ ಕ್ಷೇತ್ರದಲ್ಲೂ ಏರಿಳಿತ ಇದ್ದೇ ಇರುತ್ತೆ. ಕಷ್ಟ-ಸುಖ, ಸಮಸ್ಯೆ, ಸವಾಲುಗಳು ಇರುತ್ತವೆ. ನಾವು ಆ ಸವಾಲುಗಳನ್ನ ಎಷ್ಟು ಬುದ್ಧಿವಂತಿಕೆಯಿಂದ ಆ ಸವಾಲುಗಳನ್ನ ಸ್ವೀಕಾರ ಮಾಡುತ್ತೇವೆ. ಎಷ್ಟು ಬುದ್ಧಿವಂತಿಕೆಯಿಂದ ಆ ಸವಾಲುಗಳನ್ನ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಅದರ ಮೇಲೆ ಸಕ್ಸಸ್ ಇರುತ್ತೆ. ರೈತರು ಸಹ ಸವಾಲುಗಳನ್ನ ಪಾಸಿಟಿವ್ ಆಗಿ ಬಗೆಹರಿಸೋ ಪ್ರಯತ್ನ ಮಾಡಿದ್ರೆ ಮಾತ್ರ ಯಶಸ್ಸು ಸಿಗುತ್ತದೆ.
ಒಬ್ಬ ಕೃಷಿಕ ಸಕ್ಸಸ್ ಆದ್ರೆ ಕೇವಲ ಅವರ ಕುಟುಂಬ ಮಾತ್ರ ಸಕ್ಸಸ್ ಆಗಲ್ಲ. ಅದರ ಹಿಂದೆ ಕನಿಷ್ಠ 10 ರಿಂದ 50 ಜನರ ಬದುಕು ಹಸನವಾಗುತ್ತದೆ. ರೈತ ಸಂವೃದ್ಧಿಯಿಂದ ಇದ್ರೆ ಎಲ್ಲರೂ ಸಂವೃದ್ಧಿಯಾಗಿರುತ್ತೆ.

publive-image

ನ್ಯೂಸ್‌ ಫಸ್ಟ್ ಚಾನೆಲ್‌ ಎಂಡಿ ಮತ್ತು ಸಿಇಒ, ಎಸ್‌.ರವಿಕುಮಾರ್‌ ಅವರ ಇಡೀ ತಂಡ ‘ಕೃಷಿ ದೇವೋಭವ’ ಅನ್ನೋ ಒಳ್ಳೆಯ ಕಾರ್ಯಕ್ರಮ ಮಾಡಿದೆ. ರೈತರಿಗೆ ತಾಂತ್ರಿಕತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲು ಈ ಕಾರ್ಯಕ್ರಮ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
ಎನ್‌. ಚಲುವರಾಯಸ್ವಾಮಿ, ಕೃಷಿ ಸಚಿವ

publive-image

ಇನ್ನು ಇದೇ ಕಾರ್ಯಕ್ರಮದಲ್ಲಿ ನ್ಯೂಸ್‌ ಫಸ್ಟ್‌ನ ವಿನೂತನ ಕಾರ್ಯಕ್ರಮ ರೈತರೊಂದಿಗೆ ನಾವು ಲಾಂಚ್ ಮಾಡಲಾಯಿತು. ಆರ್ಥಿಕವಾಗಿ ಹಿಂದುಳಿದ ರೈತರಿಗೆ ದಾನಿಗಳ ಮೂಲಕ ನೆರವು ಒದಗಿಸೋ ಕಾರ್ಯಕ್ರಮ ಇದು.
MLC ದಿನೇಶ್‌ ಗೂಳಿಗೌಡ ಅವರು ದಿವಂಗತ ಎಸ್‌.ಎಂ ಕೃಷ್ಣ ಅವರ ಸ್ಮರಣಾರ್ಥ ಈ ಕಾರ್ಯಕ್ರಮಕ್ಕಾಗಿ ನೀಡಿದ್ದ 50 ಸಾವಿರ ರೂಪಾಯಿಯನ್ನ ಮಂಡ್ಯದ ನಾಗಮಂಗಲದ ರೈತ ಮಹಿಳೆ ಜಯಲಕ್ಷ್ಮಮ್ಮ ಅವ್ರಿಗೆ ನೀಡಲಾಯಿತು. ಸಹಾಯಧನ ಪಡೆದ ಜಯಲಕ್ಷ್ಮಮ್ಮ ಅವರು ಭಾವುಕರಾದ್ರು.

publive-image

ನಂತರ ಸರ್ಕಾರದಿಂದ ಇರುವ ಕೃಷಿ ಯೋಜನೆಗಳು, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವುದು, ಕೃಷಿ ಮಾರುಕಟ್ಟೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ವಿಚಾರ ಸಂಕಿರಣಗಳೂ ನಡೀತು. ಇದ್ರಲ್ಲಿ ಕೃಷಿ ಕ್ಷೇತ್ರದ ತಜ್ಞರು ಭಾಗಿಯಾದರು.

publive-image

ಇದೇ ವೇಳೆ ನ್ಯೂಸ್​ಫಸ್ಟ್​ ವತಿಯಿಂದ​ ರಾಜ್ಯದ 10 ಪ್ರಗತಿಪರ ರೈತರಿಗೆ ಭೂ-ತಪಸ್ವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಾಗಲಕೋಟೆಯ ಪ್ರಗತಿಪರ ರೈತ ಮಹಾಲಿಂಗಪ್ಪ ಇಟ್ನಾಳ್‌, ಬೆಳಗಾವಿಯ ರೈತ ಸಹೋದರಿಯರಾದ ಸುಜಾತಾ & ರೂಪಾ, ಮಂಡ್ಯದ ದೃಷ್ಟಿ ವಿಕಲಚೇತನ ರೈತ ಸುರೇಶ್, ಬೆಳಗಾವಿಯ ಪ್ರಗತಿಪರ ರೈತ ಡಾ. ಶಂಕರ ಹನುಮಂತ ಲಂಗಟಿ, ಧಾರವಾಡದ ಡಾ. ಶೌಕತ್ ಅಲಿ ಲಂಬುನ್ನನವರ, ವಿಜಯಪುರದ ಬೀರಪ್ಪ ವಗ್ಗಿ, ಬೆಳಗಾವಿಯ ಪ್ರಗತಿಪರ ರೈತ ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ, ದಾವಣಗೆರೆಯ ಪ್ರಗತಿಪರ ರೈತ ಮಹಿಳೆ, ಶಶಿಕಲಾ ಮೂರ್ತಿ, ಕೊಡಗಿನ ಸೋಮೇಂಗಡ ಗಣೇಶ್‌ ತಿಮ್ಮಯ್ಯ, ಬೆಳಗಾವಿಯ ಪ್ರಗತಿಪರ ರೈತ ಚಿದಾನಂದ ಪರಸಪ್ಪ ಪವಾರರವರು ಭೂತಪಸ್ವಿ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: ಮನೆಗೆ ನೀರು ನುಗ್ಗಿದ್ರೆ 10,000 ಪರಿಹಾರ, ರಸ್ತೆಬದಿ ವಾಹನ ನಿಲ್ಲಿಸಿದ್ರೆ 21 ದಿನದ ನಂತರ ಹರಾಜು..! 

publive-image

ರೈತರಿಗಾಗಿ ರೈತರಿಗೋಸ್ಕರ​ ಕೃಷಿ ಇಲಾಖೆಯ ಸಹಯೋಗದಲ್ಲಿ ನ್ಯೂಸ್​ ಫಸ್ಟ್​ ಆಯೋಜಿಸಿದ್ದ ಕೃಷಿ ದೇವೋಭಯ ಕಾರ್ಯಕ್ರಮ ಯಶಸ್ವಿಯಾಯಿತು. ರೈತ ಬಾಂಧವರು ಉಪಯುಕ್ತವಾದ ಮಾಹಿತಿ ಪಡೆದುಕೊಂಡು ಸಂತಸಗೊಂಡ್ರು. ಯಾವ ಉದ್ದೇಶಕ್ಕಾಗಿ ನ್ಯೂಸ್​ಫಸ್ಟ್​ ಈ ಕಾರ್ಯಕ್ರಮ ಆಯೋಜಿಸಿತ್ತು. ಅದು ಸಫಲವಾಯ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment