ಕೊನೆಗೂ ಸಿಕ್ಕಿತು.. ಅಹಮದಾಬಾದ್ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್​ ಬಾಕ್ಸ್

author-image
Bheemappa
Updated On
ಕೊನೆಗೂ ಸಿಕ್ಕಿತು.. ಅಹಮದಾಬಾದ್ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್​ ಬಾಕ್ಸ್
Advertisment
  • ಎಲ್ಲ ವಿಮಾನದಲ್ಲಿರುವ ಬ್ಲ್ಯಾಕ್ ಬಾಕ್ಸ್, ಉಪಯುಕ್ತತೆ ಏನು?
  • ವಿಮಾನದಲ್ಲಿ ಬಳಸಲಾಗುವ ಒಂದು ಎಲೆಕ್ಟ್ರಾನಿಕ್ ಸಾಧನ
  • ಏರ್​​ ಇಂಡಿಯಾ ವಿಮಾನ ದುರಂತ, 242 ಜೀವಗಳು ಅಂತ್ಯ

ಅಹಮದಾಬಾದ್: ಪತನಗೊಂಡ ಏರ್​ ಇಂಡಿಯಾ ವಿಮಾನ AI-171ರ ಬ್ಲ್ಯಾಕ್​ಬಾಕ್ಸ್ (Digital Flight Data Recorder​)​ ಪತ್ತೆಯಾಗಿದ್ದು ಇದು ವಿಮಾನ ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ಕಂಡುಕೊಳ್ಳಲು ನೆರವಾಗುತ್ತದೆ.

ಗುಜರಾತ್​ನಲ್ಲಿ ಅಹಮದಾಬಾದ್​ನ ಸರ್ದಾರ್ ವಲ್ಲಭಭಾಯ್ ಪಟೇಲ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಏರ್​ ಇಂಡಿಯಾ ವಿಮಾನ ದುರಂತ ಅಂತ್ಯ ಕಂಡಿತ್ತು. ಸದ್ಯ ಇದೀಗ ಇದರ ಬ್ಲ್ಯಾಕ್​ ಬಾಕ್ಸ್​ ಪತ್ತೆಯಾಗಿದೆ. ದುರಂತ ನಡೆದ ಸ್ಥಳದಲ್ಲಿ ಬ್ಲ್ಯಾಕ್​ ಬಾಕ್ಸ್​ ಪತ್ತೆಯಾಗಿದ್ದು ಡಿಜಿಸಿಎ ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವೈದ್ಯಕೀಯ ಕಾಲೇಜು ಹಾಸ್ಟೆಲ್​ನ ಕಟ್ಟಡದ ಮೇಲೆ ಈ ಬ್ಲಾಕ್ ಬಾಕ್ಸ್‌ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಅಹಮದಾಬಾದ್​ನ ಬಳಿಯ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳ ಬ್ಲ್ಯಾಕ್‌ಬಾಕ್ಸ್‌ ಹೆಚ್ಚು ಸಹಕಾರಿ ಆಗಲಿದೆ. ಪತ್ತೆಯಾದ ಬ್ಲ್ಯಾಕ್‌ಬಾಕ್ಸ್‌ನಿಂದ ವಿಮಾನದ ಕೊನೆಯ ಕ್ಷಣಗಳ ಮಾಹಿತಿ ಲಭ್ಯವಾಗಲಿವೆ. ಇದರಿಂದ ತನಿಖೆಗೆ ಹೆಚ್ಚು ಉಪಯುಕ್ತವಾಗಲಿದೆ. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಹಾಗೂ ವಿಮಾನ ಡೇಟಾ ರೆಕಾರ್ಡರ್‌ನಿಂದ ಈ ದುರಂತಕ್ಕೆ ಕಾರಣ ಹುಡುಕಲಾಗುತ್ತದೆ.

ಇದನ್ನೂ ಓದಿ: Flight Crash; ವಿಮಾನದಲ್ಲಿ ತಂದೆ, ತಾಯಿ ಜೊತೆ 4 ವರ್ಷದ ಕಂದಮ್ಮನ ಬದುಕು ಕೂಡ ಕೊನೆ!

publive-image

ಬ್ಲ್ಯಾಕ್ ಬಾಕ್ಸ್ ಎಂದರೇನು?

ಬ್ಲ್ಯಾಕ್ ಬಾಕ್ಸ್ ವಿಮಾನದಲ್ಲಿ ಬಳಸಲಾಗುವ ಒಂದು ಎಲೆಕ್ಟ್ರಾನಿಕ್ ಸಾಧನವಾಗಿದೆ. ಇದನ್ನು ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಎಂದೂ ಕರೆಯಲಾಗುತ್ತದೆ. ಇದರಲ್ಲಿ ವಿಮಾನದ ಕಾರ್ಯಾಚರಣೆ ಮಾಹಿತಿ, ಕಾಕ್‌ಪಿಟ್ ಸಂಭಾಷಣೆಗಳನ್ನು ದಾಖಲು ಆಗಿರುತ್ತದೆ. ಇದರ ಮುಖ್ಯ ಉದ್ದೇಶ ವಿಮಾನ ಅಪಘಾತದ ಸಂದರ್ಭದಲ್ಲಿ ಕಾರಣಗಳನ್ನು ತನಿಖೆ ಮಾಡಲು ಸಹಾಯ ಮಾಡುತ್ತೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment